ಜೀವನ ಶೈಲಿಫ್ಯಾಷನ್

ಮಳೆಗೆ ಜೊತೆಯಾಗಲಿ ರೈನಿ ಔಟ್‍ಫಿಟ್ಸ್

ಜಿಟಿ ಜಿಟಿ ಶಬ್ದ ಮಾಡುತ್ತಾ ಮಳೆ ಧರೆಗಿಳಿದಾಯಿತು. ಹೊರಗಡೆ ಸುಯ್ಯನೆ ಸುಯ್ಯುವ ಗಾಳಿ, ಅದರೊಟ್ಟಿಗೆ ತುಂತುರು ನೀರಿನ ಆಗಮನ. ತಂಪು ವಾತವರಣ. ಮನಸ್ಸಿಗೆ ಮುದ ನೀಡಲು ಇಷ್ಟು ಸಾಕಲ್ಲವೇ, ಉಹೂಂ ಸಾಧ್ಯವೇ ಇಲ್ಲ! ಮಳೆಗಾಲ ಬಂತೆಂದರೆ ಕೆಲವು ಔಟ್‍ಫಿಟ್‍ಗಳು ತಂತಾನೆ ಮರೆಯಾಗುತ್ತವೆ. ಆ ಜಾಗಕ್ಕೆ ಮಾನ್ಸೂನ್ ವೇರ್ ಫಿಟ್ ಆಗುತ್ತವೆ. ಅದ್ಯಾವುದೆಂದು ತಿಳಿದರೆ ಮಾತ್ರ ಹಿತವಾದ ಮಳೆಗಾಲ ನಿಮ್ಮದಾಗುತ್ತದೆ ಎನ್ನುತ್ತಾರೆ ಫ್ಯಾಷನ್ ಪ್ರಿಯರು. ಹಾಗಾದರೆ ಮಳೆಗಾಲದ ಆಕ್ಸೆಸರಿಗಳು ಹೇಗಿರಬೇಕು? ಯಾವುದು ಹಿತ? ನೋಡೋಣ…

ಡೆನಿಮ್ ಸಖತ್ ಟಫ್

ಕ್ಯಾಶುಯಲ್, ಕಂಫರ್ಟಬಲ್, ಕೂಲ್‍ಗೆ ಫೇಮಸ್ ಅಗಿರುವ ಡೆನಿಮ್ ಜೀನ್ಸನ್ನು ಮಳೆಗಾಲದಲ್ಲಿ ಸ್ವಲ್ಪ ದೂರವಿಡಿ. ವಿಶೇಷವಾಗಿ ಲೈಟ್ ಕಲರ್, ಲೈಟ್ ಬ್ಲೂ ಫೇಡೆಡ್, ಫಿಟೆಡ್ ಆ್ಯಂಡ್ ಸ್ಟ್ರೈಟ್ ಜೀನ್ಸ್. ಇದು ಮಳೆಯ ನೀರನ್ನು ಹೀರಿಕೊಂಡರೆ ಚರ್ಮವನ್ನೇ ಅಂಟಿಕೊಂಡು ಕಿರಿಕಿರಿಯುಂಟು ಮಾಡುತ್ತದೆ. ಆದರೆ ಫಿಟ್ ಡಾರ್ಕ್ ಕಲರ್ ಡೆನಿಮ್ ರೈನಿ ಸೀಸನ್‍ಗೆ ಪರ್‍ಫೆಕ್ಟ್ ಮ್ಯಾಚ್. ಕಲರ್ ಜೀನ್ಸ್ ಕೂಡ ಬೆಸ್ಟ್.

ಥಿನ್ ಟೀ ಶರ್ಟ್ಸ್

ಸಡಿಲವಾದ, ಹಗುರವಾದ ಥಿನ್ ಟೀ ಶಟ್ರ್ಸ್‍ಗಳು ಬಹಳ ಬೇಗ ಡ್ರೈ ಆಗುವುದರಿಂದ ಮಳೆಗಾಲಕ್ಕೆ ಒಳ್ಳೆಯದು. ಈಗಾಗಲೇ ಮಾರುಕಟ್ಟೆಗೆ ಡಿಫರೆಂಟ್ ಬ್ರಾಂಡ್‍ನಲ್ಲಿ ಫಂಕಿ ಟೀ ಶಟ್ರ್ಸ್‍ಗಳು ಬಂದಿದ್ದು ಗ್ಲೂಮಿ ವೆದರ್‍ಗೆ ಕಳೆ ತಂದುಕೊಡುತ್ತವೆ. ಲೂಸ್ ಫಿಟ್ ಟೀ ಶಟ್ರ್ಸ್‍ಗಳನ್ನು ಧರಿಸಿ. ಆಗ ಮೈ ಮೇಲೆ ಬಹುಬೇಗ ಗಾಳಿಯಾಡುತ್ತದೆ. ಬಟ್ಟೆ ಹಸಿಯಾದರೂ ಅಸಹ್ಯ ಎನಿಸುವುದಿಲ್ಲ.

ಲೈಟ್ ವೇಟ್ ಜಾಕೆಟ್

ಒಂದು ವೇಳೆ ಛತ್ರಿ ಅಥವಾ ಕೊಡೆ ಇರದಿದ್ದರೆ ವಾಟರ್‍ಪ್ರೂಫ್ ಜಾಕೆಟ್‍ಗಳು ಮಳೆಯಿಂದ ಮ್ಯಾನೇಜ್ ಮಾಡುತ್ತವೆ. ಕೂಲ್ ಕಲರ್ ಇದ್ದರೆ ಫ್ಯಾಷನಬಲ್ ಆಗಿರುತ್ತದೆ. ಪರ್‍ಫೆಕ್ಟ್ ಫಿಟ್, ಅಡ್ಜಸ್ಟಬಲ್, ಲೈಟ್ ವೇಟ್ ಡಿಸೈನ್ ಜಾಕೆಟ್ ಖರೀದಿಸಿದರೆ ಕ್ಯಾಶುಯಲ್ ವೇರ್‍ಗೆ ಅನುಕೂಲವಾಗುತ್ತದೆ. ಕ್ಲಾಸಿಕ್, ಡೌನ್, ಫಿಕ್ಸ್ ಹೂಡೆಡ್ ಜಾಕೆಟ್‍ಗಳು ಡಿಸೈರ್ ಲುಕ್ ಕೊಡುತ್ತವೆ.

ಫ್ಲಿಪ್ ಫ್ಲಾಪ್ಸ್

ನಡೆಯುವಾಗ ಮಳೆ ಬರುತ್ತಿದ್ದರೆ ಮೊದಲು ಕೊಳೆ ಅಂಟುವುದು ಸ್ಯಾಂಡಲ್‍ಗಳಿಗೆ. ಎಷ್ಟೇ ಎಚ್ಚರವಹಿಸಿದರೂ ಸಣ್ಣ ಹನಿ ಬಟ್ಟೆಗೆ ಸಿಡಿದರೆ ಅದರ ಕಥೆಯೂ ಮುಗಿಯಿತು. ಆದ್ದರಿಂದ ಈ ಸೀಸನ್‍ಗೆ ವೆಟ್ ಆಗದ ಫ್ಲಿಪ್ ಫ್ಲಾಪ್ಸ್‍ಗಳು ಬಹಳ ಒಳ್ಳೆಯದು. ಫ್ಯಾಬ್ರಿಕ್ ಕೊಳ್ಳುವವರು ವಾಷಬಲ್ ತೆಗೆದುಕೊಳ್ಳಿ. ಲೆದರ್ ಬಳಸಲೇಬೇಡಿ. ರಬ್ಬರ್ ಹಾಗೂ ಸ್ಪೋಟ್ರ್ಸ್ ಸ್ಯಾಂಡಲ್‍ಗಳ ಸ್ಟ್ರೈಪ್ಸ್ ಉದ್ದವಿರಲಿ. ವಾಟರ್‍ಪ್ರೂಫ್ ಸಾಕ್ಸ್ ಕೊಳ್ಳಿ.

ಪಿಟ್ಟರ್-ಪ್ಯಾಟರ್ ವಾಚ್

ದುಬಾರಿ ವೆಚ್ಚದ ವಾಚುಗಳನ್ನು ಕಟ್ಟಿ ಮಳೆಯಲ್ಲಿ ನಡೆಯುವುದು ಸಲೀಸಲ್ಲ. ಹಾಗೆಂದು ಸಿಕ್ಕಿದ್ದನ್ನು ಕಟ್ಟಿದರೆ ಅನ್‍ಫ್ಯಾಷನಬಲ್ ಇಮೇಜ್ ಆಗಿ ಗುರುತಿಸಿಕೊಳ್ಳುವಿರಿ. ಬೆಸ್ಟ್ ಅಂದರೆ ಟ್ರೆಂಡಿ ವಾಟರ್‍ಪ್ರೂಫ್ ವಾಚ್ ಕೊಳ್ಳುವುದು. ಇದು ಮಾನ್ಸೂನ್‍ಗೆ ಮಾತ್ರ ಸೀಮಿತವಲ್ಲ. ಸ್ವಿಮ್ಮಿಂಗ್‍ಗೆ, ಬೀಚ್‍ಗಳಿಗೆ ಹೋಗುವಾಗಲೂ ಉಪಯುಕ್ತ. ಯೆಲ್ಲೊ, ರೆಡ್, ಪಿಂಕ್, ಪ್ಯಾಸ್ಟಲ್ ಪಿಂಕ್, ಬ್ಲೂ ಕಲರ್, ಇಂಟರ್‍ಚೇಂಜಬಲ್ ಸ್ಟ್ರ್ಯಾಪ್ ವಾಚ್‍ಗಳು ಫಂಕಿಯಾಗಿರುತ್ತವೆ. ಸ್ಕೂಬಾ ಡೈವಿಂಗ್, ಸಿಲ್ವರ್ ಡಯಲ್ ಟ್ರೆಂಡಿಯಾಗಿದ್ದು ಎಲ್ಲಾ ಬ್ರಾಂಡೆಡ್ ಶಾಪ್‍ಗಳಲ್ಲಿ ದೊರೆಯುತ್ತದೆ.

ಟ್ಯಾಗ್-ಬ್ಯಾಗ್

ಹೆಣ್ಣು ಮಕ್ಕಳ ಫೇವರಿಟ್ ಆಕ್ಸೆಸರಿಗಳಲ್ಲಿ ಒಂದಾದ ಹ್ಯಾಂಡ್ ಬ್ಯಾಂಗ್ ಮಾನ್ಸೂನ್‍ನಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಮಿನಿಮಮ್ ಸೈಲ್ ಇರುವ ಈಸಿಯಾಗಿ ಪಿಕ್ ಮಾಡಬಲ್ಲ ವಾಟರ್‍ಪ್ರೂಫ್ ಹ್ಯಾಂಡ್ ಬ್ಯಾಗ್‍ಗಳು ಈಗ ಎಲ್ಲೆಡೆ ಲಭ್ಯ. ಹುಕ್ ಅಥವಾ ಲೂಪ್ ಕ್ಲೋಸರ್ ಬದಲು ಟ್ರಿಪಲ್, ಡಬಲ್ ಫೋಲ್ಡ್ ಡಿಸೈನ್ ಜಿಪ್ ಇರುವುದನ್ನು ಕೊಳ್ಳಿ. ಅಂಬ್ರೆಲಾ ಸೇರಿದಂತೆ ಇತರೆ ವಸ್ತುಗಳನ್ನಿಟ್ಟುಕೊಳ್ಳಲು ಸಹಾಯವಾಗುತ್ತದೆ.

ಮಲ್ಟಿಪಲ್ ಸನ್ ಗ್ಲಾಸ್

ಬಹುತೇಕರಿಗೆ ತಿಳಿದಿಲ್ಲ. ಮಳೆಗಾಲದಲ್ಲಿಯೂ ಸೂರ್ಯನ ವಿಕಿರಣಗಳು ಮೋಡದ ಮೂಲಕ ಹೊರ ಸೂಸುತ್ತವೆ. ಆದ್ದರಿಂದ ವಾಟರ್‍ಪ್ರೂಫ್ ಸನ್‍ಗ್ಲಾಸ್ ಹಾಕುವುದನ್ನು ಮರೆಯಬೇಡಿ. ಫ್ಯಾಷನ್ ಆ್ಯಂಡ್ ಕೂಲ್ ಆಗಿರುವ 100% ಯುವಿ ಪ್ರೊಟೆಕ್ಷನ್ ಇರುವ ಸನ್ ಗ್ಲಾಸ್ ಖರೀದಿಸಿ.

ನೆನಪಿನಲ್ಲಿಡಿ… 

ಆ್ಯಂಕಲ್ ಲೆಂಥ್ ಬಾಟಮ್, ತ್ರೀ ಫೋರ್ತ್, ಲೆಗ್ಗಿಂಗ್, ಜೆಗ್ಗಿಂಗ್‍ಗಳು ಮಾನ್ಸೂನ್‍ಗೆ ಕಂಫರ್ಟಬಲ್.

ಫ್ಲೋಟಿಂಗ್ ಡ್ರೆಸ್ ಡೇಂಜರ್.

ಬ್ರೈಟ್ ಕಲರ್ ಆಯ್ಕೆ ಮಾಡಿ.

ಪಾಪ್ಯುಲರ್ ಐಟಮ್ ಲೈಟ್ ಹರೆಮ್ ಪ್ಯಾಂಟ್‍ಗಳು ಧರಿಸಲು ಸುಲಭ. ನೀರನ್ನು ಹೀರುವುದಿಲ್ಲ.

ಹೆವಿ ಲಾಂಗ್ ಡ್ರೆಸ್‍ಗಳ ಬಳಕೆ ಬೇಡ.

ಇನ್‍ಫಾರ್ಮಲ್ ವೇರ್, ಕ್ಯಾಶುಯಲ್ ಔಟ್‍ಫಿಟ್ ಹಾಕುವ ಪ್ರಸಂಗ ಬಂದರೆ ಕುರ್ತಾ ಮತ್ತು ಟೀಶರ್ಟ್‍ಗಳನ್ನು ತ್ರೀ ಫೋರ್ತ್, ಲೆಗ್ಗಿಂಗ್ ಜೊತೆ ಟೀಮ್ ಅಪ್ ಮಾಡಿ.

ಇತ್ತೀಚೆಗೆ ಮಾರುಕಟ್ಟೆಗೆ ನಾನಾ ನಮೂನೆಯ, ಸ್ಟೈಲಾಗಿರುವ, ವೆರೈಟಿ ಟೀ ಶಟ್ರ್ಸ್‍ಗಳು ಬಂದಿವೆ. ಉದಾಹರಣೆಗೆ ಕಸ್ಟಮ್, ರೌಂಡ್‍ನೆಕ್, ವಿ ನೆಕ್, ಪೋಲೊ ಟೀ ಶಟ್ರ್ಸ್, ಲಾಂಗ್ ಸ್ಲೀವ್, ಸ್ಲೀವ್‍ಲೆಸ್ ಇವುಗಳನ್ನು ಆಯ್ಕೆ ಮಾಡಿದರೆ ಇದನ್ನು ಲೆಗ್ಗಿಂಗ್, ಜೆಗ್ಗಿಂಗ್ಸ್, ಪ್ಯಾಂಟ್ ಅಥವಾ ಶಾಟ್ರ್ಸ್ ಜೊತೆ ಧರಿಸಿ.

ಫಾರ್ಮಲ್ ವೇರ್ ಧರಿಸುವುದಾದರೆ ಸ್ನಗ್ ಫಿಟ್ ಚೂಡಿದಾರ್ ಅಥವಾ ಲೆಗ್ಗಿಂಗ್ಸ್ ಜೊತೆ ಪ್ರಾಪರ್ ಟಾಪ್ ಬಳಸಿ. ಎಂಬ್ರಾಯ್ಡರಿ ಸಲ್ವಾರ್, ಪಟಿಯಾಲ ಪ್ಯಾಂಟ್‍ಗಳನ್ನು ದೂರವಿಡಿ.

ಟ್ರಾನ್ಸ್‍ಪರೆಂಟ್‍ಗಳ ಬಗ್ಗೆ ಎಚ್ಚರವಿರಲಿ.

ಡಾರ್ಕ್ ಕಲರ್ ಡ್ರೆಸ್ ಅಪ್ ‘ದಿ ಬೆಸ್ಟ್’.

ರೈನ್ ಫ್ರೆಂಡ್ಲಿ ಫಾರ್ಮಲ್ ಶರ್ಟ್, ಟ್ರೌಸರ್/ಸ್ಕರ್ಟ್‍ಗಳನ್ನು ಆಯ್ಕೆ ಮಾಡಿ.

ವೈಟ್ ಹಾಗೂ ಲೈಟ್ ಕಲರ್‍ಗಳು ಬಹಳ ಬೇಗ ಕೊಳೆಯಾಗುವುದರಿಂದ ಅಂತಹÀ ದಿರಿಸುಗಳನ್ನು, ಕೊಡೆ ಅಥವಾ ಛತ್ರಿಗಳನ್ನು ಮಳೆಗಾಲದಲ್ಲಿ ಧರಿಸುವುದು, ಕೊಳ್ಳುವುದು ಸೂಕ್ತವಲ್ಲ.

ಹಗುರವಾದ ಕಾಟನ್ ಬಟ್ಟೆಗಳನ್ನು ಧರಿಸಿ.

ಲೆದರ್ ಬೂಟ್, ಹೈ ಹೀಲ್ಸ್ ಬದಲಾಗಿ ಸ್ನೀಕರ್ಸ್, ಸ್ಯಾಂಡಲ್ಸ್ ಬಳಸಿ.

Tags