ಜೀವನ ಶೈಲಿಫ್ಯಾಷನ್

ಬೆಲ್ಟ್ …ಹಾಟೆಸ್ಟ್ ಫ್ಯಾಷನ್

ಬೆಲ್ಟ್ ಈಗ ವುಮನ್ ಹಾಟೆಸ್ಟ್ ಟ್ರೆಂಡ್ ಸೆಟ್ಟರ್. ಗುಡ್ ಔಟ್‍ಫಿಟ್ ಗೆ ಸಾಫ್ಟ್ ಆಕ್ಸೆಸರಿ. ಒಂದು ಕಾಲದಲ್ಲಿ ಜೀನ್ಸ್, ಟ್ರೌಸರ್ಸ್ ಗೆ ಮಾತ್ರ ಬಳಕೆಯಾಗುತ್ತಿದ್ದ ಬೆಲ್ಟ್ ಇದೀಗ ರೋಮಿ ಟಾಪ್ಸ್, ಸ್ಕರ್ಟ್ಸ್ ಶಾರ್ಟ್ಸ್, ಲಾಂಗ್ ಶಾರ್ಟ್ಸ್ ಸೇರಿದಂತೆ ಅನೇಕ ಫ್ಯಾಷನ್ ವೇರ್ ಗಳಿಗೆ ಜೊತೆಯಾಗುತ್ತಿರುವುದು ಶಾಪಿಂಗ್ ಪ್ರಿಯರಿಗೆ ಸಂತಸ ಸುದ್ದಿ.

ಕಾಲದಿಂದ ಕಾಲಕ್ಕೆ ರಿಡಿಸೈನ್, ಡಿಫರೆಂಟ್ ಟೆಕ್ಸಚರ್, ಮೆಟೀರಿಯಲ್ ನಲ್ಲಿ ಬರುತ್ತಿರುವ ಟ್ರೆಂಡಿ ಬೆಲ್ಟ್ ನಿಮ್ಮ ಪರ್ಸನಾಲಿಟಿ, ಸ್ಟೈಲ್ ಹೈಲೈಟ್ ಮಾಡುವುದಂತೂ ಸುಳ್ಳಲ್ಲ. ಕಂಫರ್ಟಬಲ್ ಜೊತೆಗೆ ಔಟ್ ಲುಕ್ ಹೆಚ್ಚಿಸುವ ಬೆಲ್ಟ್ ಈ ಬಾರಿಯ ಶಾಪಿಂಗ್ ಸ್ಪೆಷಲ್.

ಹಿಂದೆ ಲೆದರ್ ನಲ್ಲಿ ಮಾತ್ರ ಬೆಲ್ಟ್ ಗಳು ಬರುತ್ತಿತ್ತು. ಆದರೆ ಈಗ ಸ್ವೀಡ್, ರಬ್ಬರ್, ಪ್ಲಾಸ್ಟಿಕ್, ಬಟ್ಟೆ, ಚಿಪ್ಪುವಿನಂತಹ ಮೆಟಿರಿಯಲ್ ಗಳಲ್ಲಿ ಸಹ ದೊರೆಯುತ್ತವೆ. ಡ್ರೆಸ್ ಮ್ಯಾಚಿಂಗ್ ಗಳು ಲಭ್ಯ. ಬೆಲ್ಟ್ ಪ್ರಿಯರಿಗಾಗಿಯೇ ಇಲ್ಲಿದೆ ಬೇಸಿಕ್ ಕೆಟಗರಿ…

ಪೆಪ್ ಲಮ್

ವರ್ಸಟೈಲ್ ಬೆಲ್ಟ್ ಎಂದೇ ಫೇಮಸ್. ಎಲ್ಲಾ ಕಾಲಕ್ಕೂ ಸಲ್ಲುವ ಪಾಪ್ಯುಲರ್ ಆಕ್ಸೆಸರಿ. ಧರಿಸಿದಾಗ ಎಸ್ತೆಟಿಕ್ ಅಪೀಲ್ ಕೊಡುತ್ತದೆ. ಫ್ರಿಲ್, ಹಗ್ಗಿಂಗ್ ಡ್ರೆಸ್ ಗಳಿಗೆ ಸೂಟಬಲ್. ದೊಡ್ಡ ಡಯಲ್ ನ ವಾಚ್ ಗಳು, ಹೈ ಹೀಲ್ಡ್, ಬೂಟ್ಸ್ ಜೊತೆಗೆ ಪೆಪ್ ಲಮ್ ಪರ್‍ಫೆಕ್ಟ್ ಪೇರ್.

ವೈಡ್

ತೆಳುವಾದ ಮೈಕಟ್ಟು ಹೊಂದಿರುವವರಿಗೆ ವೈಡ್ ಬೆಲ್ಟ್ ಪರ್‍ಫೆಕ್ಟ್ ಫ್ಯಾಷನ್. ಓವರ್ ಸೈಜ್ ಡ್ರೆಸ್ ಗಳಿಗೆ ಕಂಫರ್ಟಬಲ್. ಸ್ಟ್ರೆಚ್ ಸ್ಟೈಲ್‍ಗೆ ಬೆಸ್ಟ್ ಬೆಲ್ಟ್.

ಸ್ಕಿನಿ

ಎಲ್ಲಾ ತರಹದ ಮೈಕಟ್ಟಿನವರಿಗೂ ಒಪ್ಪುವ ಬೆಲ್ಟ್ ಸ್ಕಿನಿ. ಸಖತ್ ಸ್ಟೈಲೀಷ್ ಆಗಿರುವ ಇದು ಮಾಡರ್ನ್ ವೇರ್  ಗಳಿಗೆ ಸೂಟ್ ಆಗುತ್ತದೆ. ಹೆಚ್ಚಾಗಿ ಈ ಬೆಲ್ಟ್ ಅನ್ನು ಡ್ರೆಸ್ ಮೇಲೆ ಬಳಸುತ್ತಾರೆ.

ಮೆಟಲ್

ಮೆಟಲ್ ಬೆಲ್ಟ್ ಗಳೆಂದರೆ ಶೈನಿ. ಟ್ರೆಂಡಿಯಾಗಿರುವ ಇದು ಪಾರ್ಟಿ, ಪಂಕ್ಷನ್ ವೇರ್ ಗೆ ಸೂಟಬಲ್. ಮಿನಿ ಸ್ಕರ್ಟ್, ಲಾಂಗ್ ಫ್ರಾಕ್‍ಗಳಿಗೆ ಹೆಚ್ಚು ಮ್ಯಾಚ್ ಆಗುತ್ತದೆ.

ಡಿಸೈನರ್

ಬ್ರೈಟ್ ಕಲರ್ ನಲ್ಲಿ ಲಭ್ಯ. ಇದರಲ್ಲಿ ನಿಮಗೆ ಸಿಕ್ಕಾಪಟ್ಟೆ ಆಪ್ಷನ್ ಗಳು ಸಿಗುತ್ತವೆ. ಎಲಾಸ್ಟಿಕ್, ಬ್ರೈಡೆಡ್, ಪ್ರಿಂಟೆಡ್, ಟು ಟೋನ್ಡ್ ಚಾಲ್ತಿಯಲ್ಲಿವೆ.

ಸ್ಟಡೆಡ್

ಪ್ರತಿಯೊಬ್ಬರು ಇಷ್ಟಪಡುವ ಬೆಲ್ಟ್. ಪುಲ್ ಬ್ಯಾಕ್ ನಲ್ಲಿ, ಬಕಲ್ಡ್ ಗೆಟಪ್‍ನಲ್ಲಿ ಬರುತ್ತದೆ. ಕ್ಯಾಶುಯಲ್ ಔಟ್‍ಫಿಟ್ ಗೆ ಮಸ್ತ್.

ಚೈನ್

ಅಡ್ಜಸ್ಟಬಲ್ ಮೆಟಾಲಿಕ್ ಫಿನಿಶಿಂಗ್ ಇರುತ್ತದೆ. ಈ ಬೆಲ್ಟ್ ಗೆ ಓವರ್ ಲೇ ಡ್ರೆಸ್ ಗುಡ್ ಕಾಂಬಿನೇಷನ್.

Image result for ladies belt design

Image result for ladies belt design

Image result for belt design

Image result for ladies belt design

Image result for ladies belt design

Image result for ladies belt design

Image result for ladies belt design

ಕಿವಿ ಚುಚ್ಚಿಸುವುದಕ್ಕೆ (ಕರ್ಣ ವೇದನ) ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ

#balkaninews #belt #fashion #lifestyle #womensbelt

Tags