ಆರೋಗ್ಯಆಹಾರಜೀವನ ಶೈಲಿಸೌಂದರ್ಯ

ಕುತ್ತಿಗೆ ನೋವಿಗೆ ಇಲ್ಲಿದೆ ಸರಳ ಪರಿಹಾರ

ಸಾಮಾನ್ಯವಾಗಿ 10ರಲ್ಲಿ 9 ಜನರಲ್ಲಿ ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಮುಖ್ಯವಾಗಿ 60 ವರ್ಷದ ವಯಸ್ಸಿನ ಆಸುಪಾಸಿನಲ್ಲಿರುವವರಲ್ಲಿ, ಈ ಕತ್ತು ನೋವಿನ ಸಮಸ್ಯೆ ಹೆಚ್ಚು. ಅದರಲ್ಲೂ ತಲೆ ಬಗ್ಗಿಸಿ ಕೆಲಸ ಮಾಡುವುದರಿಂದ ಮತ್ತು ಒಂದೇ ಭಂಗಿಯಲ್ಲಿ ಕೆಲಸ ಮಾಡುವುದರಿಂದ ಅಥವಾ ಸರಿಯಾದ ಭಂಗಿಯಲ್ಲಿ ನಿದ್ರಿಸದೆ ಇರುವುದರಿಂದ ಕತ್ತು ನೋವು ಬರುತ್ತದೆ.

ಇನ್ನು ಕಾಯಿಲೆಗಳಾಗಿರುವ ಸಂಧಿವಾತ, ಮೈನಿಂಜೈಟಿಸ್ ಅಥವಾ ಕ್ಯಾನ್ಸರ್ ನಂತಹ ಕಾಯಿಲೆಗಳು ಕುತ್ತಿಗೆ ನೋವು ಉಂಟು ಮಾಡಬಹುದು. ಹೀಗಾಗಿ ಈ ಸಮಸ್ಯೆ ಬಾರದಂತೆ ತಡೆಗಟ್ಟಲು ಅನುಸರಿಸಬೇಕಾದ ಅನೇಕ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು.

1 ಕುಳಿತುಕೊಳ್ಳುವ ಮತ್ತು ಮಲಗುವ ಆಸನ ಕ್ರಮಬದ್ಧವಾಗಿರಬೇಕು. ವಾಹನಗಳು ಓಡಿಸುವಾಗ ಮುಂಜಾಗ್ರತೆ ವಹಿಸಿ ನಿಧಾನವಾಗಿ ಚಲಿಸಬೇಕು. ತುಂಬ ಸಮಯದವರೆಗೆ ಕುಳಿತುಕೊಂಡು ಕೆಲಸ ಮಾಡುವುದನ್ನು ಬದಲಿಸಬೇಕು.

2 ಆಯಿಲ್ ಎಣ್ಣೆಯನ್ನು ಕುತ್ತಿಗೆಗೆ ಮಸಾಜ್ ಮಾಡಿಕೊಳ್ಳುವ ಮೂಲಕ ಕುತ್ತಿಗೆ ನೋವಿಗೆ ಪರಿಹಾರ ಕಾಣಬಹುದು.

3 ಅಡ್ಡಪರಿಣಾಮಗಳಿಲ್ಲದ ಹೋಮಿಯೋಪತಿ ಔಷಧಗಳನ್ನು ಉಪಯೋಗಿಸಿಕೊಳ್ಳುವುದರಿಂದ ಕತ್ತು ನೋವು ಕಡಿಮೆ ಮಾಡಿಕೊಳ್ಳಬಹುದು.

4 ಭಾರವಾದ ವಸ್ತುಗಳನ್ನು ತಲೆಯಲ್ಲಿ ಹೊತ್ತುಕೊಂಡು ಹೋಗಬೇಡಿ ಮತ್ತು ಸರಿಯಾದ ಭಂಗಿಯಲ್ಲಿ ಮಲಗಿ.

ಬಹಳ ಹೊತ್ತು ಕುಳಿತಿರಬೇಡಿ: ಹೃದಯಾಘಾತದ ಸಾಧ್ಯತೆಗಳು ಹೆಚ್ಚು..!

#SimpleSolution #Neck Pain #HealthTips

Tags