ಜೀವನ ಶೈಲಿಸೌಂದರ್ಯ

ಕೂದಲು ದಟ್ಟವಾಗಿ ಹೊಳೆಯಲು ಇಲ್ಲಿದೆ ಸೂಪರ್ ಐಡಿಯಾ

ಈಗಾಗಲೇ ಕೂದಲು ದಟ್ಟವಾಗುವಂತೆ ಮಾಡಲು ಏನು ಮಾಡಬೇಕು ಎಂಬ ಬಗ್ಗೆ ಸಾಕಷ್ಟು ಲೇಖನಗಳನ್ನು ಓದಿರುತ್ತೀರಿ. ಆದರೆ ಕೆಲವರಿಗೆ ಅದರಿಂದ ಒಳ್ಳೆಯ ರಿಸಲ್ಟ್ ಸಿಕ್ಕಿರುವುದಿಲ್ಲ. ಅದಕ್ಕೆಂದೇ ಈ ಬಾರಿ ಕೂದಲ ಹೊಳಪನ್ನು ಹೆಚ್ಚಿಸಲು ಕೆಲವು ಮನೆಮದ್ದು ಕೊಡಲಾಗಿದೆ. ನಿಮಗೆ ಉಪಯೋಗವಾದರೆ ಬೇರೆಯವರಿಗೂ ತಿಳಿಸಿ…

*ಸ್ನಾನ ಮಾಡಿದ ಮೇಲೆ ಕೊನೆಯಲ್ಲಿ ನಿಂಬೆರಸ ಸೇರಿಸಿದ ನೀರಿನಿಂದ ಕೂದಲು ತೊಳೆಯುವುದರಿಂದ ಕೂದಲಿಗೆ ಹೊಳಪು ಬರುತ್ತದೆ. ನಿಂಬೆಹಣ್ಣು ಬಳಸಿದರೆ ಕೂದಲು ಬೆಳ್ಳಾಗುಗುತ್ತದೆ ಎನ್ನುವುದು ತಪ್ಪು ತಿಳುವಳಿಕೆ.

*ಒಣಗಿದ ನೆಲ್ಲಿಕಾಯಿ ಒಂದು ಹಿಡಿ ತೆಗೆದುಕೊಂಡು ಒಂದು ಲೀಟರ್ ನೀರಿನಲ್ಲಿ ಚೆನ್ನಾಗಿ ಕುದಿಸಿದ ನಂತರ ಈ ರಸವನ್ನು ಸ್ನಾನದ ನೀರಿಗೆ ಬೆರೆಸಿ ಸ್ನಾನ ಮಾಡುವುದರಿಂದ ಕೂದಲು ಆರೋಗ್ಯಪೂರ್ಣವಾಗಿ ಹೊಳಪು ಪಡೆಯುವದರೊಂದಿಗೆ ಚರ್ಮದ ಸುಕ್ಕು ನಿವಾರಣೆಯಾಗುತ್ತದೆ.

*ಲೋಳೆಸರದ ತಿರುಳನ್ನು ತಲೆಗೆ ಹಚ್ಚಿಕೊಂಡು ಒಂದು ಗಂಟೆಯ ಸಮಯ ಬಿಟ್ಟು ಸ್ನಾನ ಮಾಡುವುದರಿಂದ ಕೂದಲುವುದುರುವುದು ನಿಲ್ಲುತ್ತದೆ.

*ದಂಟಿನ ಸೊಪ್ಪನ್ನು ನುಣ್ಣಗೆ ಅರೆದು ತಲೆಗೆ ಹಚ್ಚಿಕೊಂಡು ಒಂದು ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.

ಪ್ರಯಾಣದ ಸಮಯದಲ್ಲಿ ವಾಂತಿ ಆಗುತ್ತಿದೆಯೇ? ಹೀಗೆ ಮಾಡಿ…

#balkaninews #hair #hairgrowt # homeremedies

Tags