ಆರೋಗ್ಯಆಹಾರಜೀವನ ಶೈಲಿ

ಗರ್ಭವತಿಯಾದಾಗ ಆನಂದವಾಗಿರಲು ಇಲ್ಲಿದೆ ಟಿಪ್ಸ್

ಗರ್ಭಧಾರಣೆ ಎಂಬುದು ಪ್ರತೀ ಹೆಣ್ಣಿನ ಜೀವನದ ಸುಮಧುರ ಕಾಲ. ಅದನ್ನು ವಿವರಿಸಲು ಪದಗಳೇ ಸಾಲದು. ಅಂತಹ ಉತ್ಸಾಹ ದೇಹ ಹಾಗೂ ಮನಸ್ಸಿಗೆ. ಇದು ದೇಹ ಮತ್ತು ಮನಸ್ಸಿನಲ್ಲಿ ಹಲವಾರು ಬದಲಾವಣೆಗಳನ್ನು ತರುತ್ತದೆ. ಈ ಸಮಯವನ್ನು ಆನಂದಿಸಲು ಮತ್ತು ಆರಾಮ ಹಾಗೂ ಸಂತೋಷದಿಂದಿರಲು ಕೆಲವು ಸಲಹೆಗಳು ಇಲ್ಲಿದೆ.

  1. ಮನಸ್ಸಿಗೆ ಇದು ಪರ್ವಕಾಲ ಕಾಯಿಲೆಯಲ್ಲ; ಎಂಬುದನ್ನು ಮನದಟ್ಟು ಮಾಡಿಕೊಳ್ಳಿ.
  2. ಯಾವುದೇ ಬದಲಾವಣೆ ಕಂಡು ಬಂದರೂ ಅದನ್ನು ಸಂತಸದಿಂದ ಅನುಭವಿಸಿ.
  3. ಆದಷ್ಟು ಸಾತ್ವಿಕ ಆಹಾರ ಸೇವಿಸಿ.
  4. ಸರಳವಾದ ವ್ಯಾಯಾಮ, ಧ್ಯಾನ ಮತ್ತು ಪ್ರಾಣಾಯಾಮವನ್ನು ತಙ್ಞರಿಂದ ಸಲಹೆ ಪಡೆದು ಅನುಸರಿಸಿ.
  5. ಎಷ್ಟೇ ಬಾರಿ ವಾಂತಿ ಆದರೂ ಆಹಾರವನ್ನು ತ್ಯಜಿಸದೇ ಆಗಾಗ್ಗೆ ಸೇವಿಸಿ.
  6. ಮನಸ್ಸನ್ನು ಪ್ರಶಾಂತವಾಗಿಡಲು ನಿಮಗೆ ಇಷ್ಟವಾಗುವ ಸಂಗೀತ ಕೇಳಿ, ಪುಸ್ತಕಗಳನ್ನು ಓದಿ, ದೇವರ ಪ್ರಾರ್ಥನೆ ಮಾಡಿ, ಇಷ್ಟವಾದ ಕಾರ್ಯಕ್ರಮವನ್ನು ವೀಕ್ಷಿಸಿ.
  7. ಮನಸ್ಸಿಗೆ ಹಿತವಲ್ಲದ ಯಾವುದೇ ನೆಗೆಟಿವ್ ವಿಷಯದಿಂದ ದೂರವಿರಿ.
  8. ಯಾವುದೇ ರೀತಿಯಾದ ಸಂದೇಹ ಕಂಡುಬಂದಲ್ಲಿ, ಅವರಿವರ ಮಾತಿಗೆ ಕಿವಿಗೊಡಬೇಡಿ. ವೈದ್ಯರಲ್ಲಿ ನಿಸ್ಸಂಕೋಚವಾಗಿ ಕೇಳಿ ಮಾಹಿತಿ ಪಡೆದುಕೊಳ್ಳಿ.
  9. ಗರ್ಭಿಣಿ ಸ್ತ್ರೀಯರು ಮಾಡಲೇ ಬೇಕಾದ ಔಷಧೋಪಚಾರದ ಕಡೆ ಹೆಚ್ಚು ಗಮನ ನೀಡಿ.

ಆರೋಗ್ಯಕರ ಮಗುವಿಗೆ ಜನ್ಮ ನೀಡಲು ಇವೆಲ್ಲವೂ ಸಹಕಾರಿ.

ರುಚಿ ರುಚಿಯಾದ ಹಾಗಲಕಾಯಿ ಬಜ್ಜಿ ಮಾಡುವುದು ಹೇಗೆ?

#balkaninews #pregnantladies #foodstyle #pregnantfoodstyle #fashion #food

 

Tags