ಆಹಾರಜೀವನ ಶೈಲಿ

ರುಚಿಕರವಾದ ಆಲೂ ಬೋಂಡಾ ಮಾಡುವ ವಿಧಾನ

ಆಲೂಗೆಡ್ಡೆಯಿಂದ ಏನೇ ತಿನಿಸು ತಯಾರಿಸಿದರೂ ರುಚಿಯಾಗಿರುತ್ತದೆ. ಅದರಲ್ಲೂ ಬೋಂಡಾ ಮಾಡಿದರೆ…ಬಾಯಲ್ಲಿ ನೀರು ಬರುತ್ತಿರಬೇಕಲ್ಲ. ಹೊರಗಡೆ ತಿಂದು ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ ಮನೆಯಲ್ಲಿಯೇ ಆಲೂ ಬೋಂಡಾ ಮಾಡುವುದು ಹೇಗೆಂದು ಕೊಡಲಾಗಿದೆ. ಮತ್ತೇಕೆ ತಡ ಇಂದೇ ಪ್ರಯತ್ನಿಸಿ…

Image result for ಆಲೂ ಬೋಂಡಾ

ಬೇಕಾಗುವ ಸಾಮಗ್ರಿಗಳು 

ಬೇಯಿಸಿದ ಆಲೂಗಡ್ಡೆ, ಹಸಿ ಮೆಣಸಿನ ಕಾಯಿ, ಕಡಲೆ ಹಿಟ್ಟು ಮತ್ತು ಸ್ವಲ್ಪ ಮೈದಾ, ಗರಂ ಮಸಾಲ, ಅರಿಶಿಣ ಪುಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ

ಬೇಯಿಸಿದ ಆಲೂಗೆಡ್ಡೆಯ ಸಿಪ್ಪೆ ಸುಲಿದು ಚೆನ್ನಾಗಿ ಹಿಸುಕಬೇಕು, ಅದಕ್ಕೆ ರುಚಿಗೆ ತಕ್ಕ ಉಪ್ಪು, ಗರಂ ಮಸಾಲ, ಕತ್ತರಿಸಿದ ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಚಿಕ್ಕ-ಚಿಕ್ಕ ಉಂಡೆಗಳನ್ನು ಕಟ್ಟಬೇಕು.

ಈಗ ಮತ್ತೊಂದು ಪಾತ್ರೆಯಲ್ಲಿ ಮೈದಾ ಮತ್ತು ಕಡಲೆಹಿಟ್ಟು ಹಾಕಿ ಅದಕ್ಕೆ ರುಚಿಗೆ ತಕ್ಕ ಉಪ್ಪು ಹಾಕಿ ಮತ್ತು ನೀರು ಹಾಕಿ ಕಲೆಸಬೇಕು. ಮಿಶ್ರಣ ತುಂಬಾ ಗಟ್ಟಿಯಾಗಿರಬಾರದು, ನೀರು-ನೀರಾಗಿಯೂ ಇರಬಾರದು.

ಈಗ ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಕಾಯಿಸಬೇಕು, ಆಲೂಗೆಡ್ಡೆ ಮಿಶ್ರಣದಿಂದ ಕಟ್ಟಿದ ಉಂಡೆಗಳನ್ನುಮೈದಾದಲ್ಲಿ ಅದ್ದಿ ಕುದಿಯುತ್ತಿರುವ ಎಣ್ಣೆಗೆ ಹಾಕಿ ಕಂದು ಬಣ್ಣ ಬರುವಾಗ ತೆಗೆದರೆ ರುಚಿಕರವಾದ ಆಲೂ ಬೋಂಡಾ ರೆಡಿ.

‘ಉಡುಪಿ ಮಸಾಲ ದೋಸೆ’ ಮಾಡುವುದು ಹೇಗೆ?

Tags