ಜೀವನ ಶೈಲಿಸೌಂದರ್ಯ

ನೈಸರ್ಗಿಕ ಕಂಡೀಶನರ್ ಮನೆಯಂಗಳದ ದಾಸವಾಳ…

ಬೆಂಗಳೂರು, ಏ.04:

ದಾಸವಾಳ ಅಂದರೆ ಬರೀ ಹೂವಿನ ಗಿಡವಲ್ಲ. ಬದಲಿಗೆ ದಾಸವಾಳವೂ ಒಂದು ಔಷಧ ಗಿಡವಾಗಿಯೂ ಪ್ರಸಿದ್ಧ. ಇದರ ಬೇರಿನಿಂದ ಹಿಡಿದು ಎಲೆ, ಹೂವು ಎಲ್ಲವೂ ಅಗಾಧ ಪ್ರಮಾಣದ ಔಷಧೀಯ ಗುಣ ಹೊಂದಿವೆ.

ಸಾಮಾನ್ಯ ರೋಗಗಳಿಂದ ಹಿಡಿದು ದೀರ್ಘಾವಧಿ ಕಾಯಿಲೆಯ ನಿವಾರಣೆಯವರೆಗೂ ಇದು ಸಹಕಾರಿ. ಕೂದಲು, ತ್ವಚೆಯ ಸಮಸ್ಯೆಗೆ ಇದು ರಾಮಬಾಣವೂ ಹೌದು.ಅದೇ ಕಾರಣದಿಂದ ಕೂದಲ ಸೌಂದರ್ಯ ಹಾಗೂ ಆರೋಗ್ಯ ಚಿಕಿತ್ಸೆಯಲ್ಲಿ ಇದರ ಬಳಕೆ ಹೆಚ್ಚು. ನೈಸರ್ಗಿಕ ಕಂಡೀಷನರ್‌ ನಂತೆ ದಾಸವಾಳವು ಕೂದಲಿಗೆ ಪ್ರಯೋಜನವನ್ನು ಉಂಟುಮಾಡುತ್ತದೆ. ತೆಂಗಿನ ಎಣ್ಣೆಗೆ ಸ್ವಲ್ಪ ದಾಸವಾಳದ ಎಲೆಗಳನ್ನು ಹಾಕಿ ಕುದಿಸಬೇಕು. ಎಣ್ಣೆ ತಣ್ಣಗಾದ ಬಳಿಕ ಇದಕ್ಕೆ ಒಂದೆರಡು ಚಮಚ ಕಡಲೆಹುಡಿಯನ್ನು ಬೆರೆಸಿ ಪೇಸ್ಟ್‌ ನಂತೆ ತಯಾರಿಸಿಕೊಳ್ಳಬೇಕು. ಈ ಪೇಸ್ಟ್‌ ಅನ್ನು ತಲೆಬುರುಡೆಗೆ ಹಚ್ಚಿ  ಮೂವತ್ತು ನಿಮಿಷಗಳ ನಂತರ ಕೂದಲು ತೊಳೆದುಕೊಳ್ಳಬೇಕು.

ಕೂದಲಿನ ಬೆಳವಣಿಗೆಗೆ ಅತ್ಯುತ್ತಮವಾಗಿರುವ ದಾಸವಾಳದ ಎಣ್ಣೆಯಿಂದ ಕೂದಲಿಗೆ ನೈಸರ್ಗಿಕವಾದ ಕಪ್ಪು ಬಣ್ಣ ಸಿಗುವುದು ಮಾತ್ರವಲ್ಲದೇ ಕೂದಲಿಗೆ ಆದ್ರತೆಯೂ ನೀಡುತ್ತದೆ. ಮಾತ್ರವಲ್ಲ ಕೂದಲಿಗೆ ಉತ್ತಮವಾದ ಪೋಷಣೆಯೂ ಇದರಿಂದ ಸಿಗುವುದಲ್ಲದೇ ಕೂದಲಿನ ಕಾಂತಿಯೂ ಹೆಚ್ಚುತ್ತದೆ.

ನಿಯಮಿತವಾಗಿ ದಾಸವಾಳದ ಎಣ್ಣೆಯನ್ನು ಬಳಕೆ ಮಾಡುವುದರಿಂದ ಕೂದಲಿನ ಬುಡ ಧೃಡವಾಗುತ್ತದೆ. ಹೇರಳವಾಗಿ ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ.

ಅಕಾಲಿಕವಾಗಿ ಕೂದಲು ಬೆಳ್ಳಗಾಗುವುದನ್ನು ತಡೆಯುವ ಶಕ್ತಿ ದಾಸವಾಳ ಎಣ್ಣೆಗೆ ಇದೆ. ಅಷ್ಟು ಮಾತ್ರವಲ್ಲದೇ ಎಣ‍್ಣೆಯ ಹೊರತಾಗಿ ದಾಸವಾಳ ಹೂವು ಅತ್ಯುತ್ತಮ ಕಂಡೀಶನರ್ ಹೌದು. ನೈಸರ್ಗಿಕವಾದ ಕಂಡೀಶನರ್ ನಿಂದ ಕೂದಲು ಮೃದುವಾಗುತ್ತದೆ ಮತ್ತು ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲ. ಆದ್ದರಿಂದ ವಾರಕ್ಕೊಂದು ಬಾರಿಯಾದರೂ ದಾಸವಾಳ ಹೂವನ್ನು ಹಾಕಿ ಸ್ನಾನ ಮಾಡಿದರೆ ಕೂದಲಿಗೆ ಒಳ್ಳೆಯದು.  ದಾಸವಾಳ ಹೂವಿನ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ತಲೆ ಹೊಟ್ಟು ನಿವಾರಣೆಯಾಗುತ್ತದೆ.

ಹಿಂದಿನ ದಿನ ರಾತ್ರಿ ನೀರಿನಲ್ಲಿ ನೆನೆ ಹಾಕಿದ ಮೆಂತೆ ಕಾಳಿಗೆ ಸ್ವಲ್ಪ ಆಲೀವ್‌ಎಣ್ಣೆ ಸೇರಿಸಿ ಮಿಕ್ಸರ್‌ನಲ್ಲಿ ಹಾಕಿ ಪೇಸ್ಟ್ ತಯಾರಿಸಬೇಕು. ಹೀಗೆ ತಯಾರಿಸಿದ ಪೇಸ್ಟ್‌ಗೆ ಎರಡು ಚಮಚ ದಾಸವಾಳದ ಎಲೆಯ ಹುಡಿಯನ್ನು ಬೆರೆಸಿ ತಲೆಬುರುಡೆಗೆ ಹಚ್ಚಬೇಕು. ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ಕೂದಲನ್ನು ತೊಳೆದುಕೊಂಡರೆ ತಲೆ ಹೊಟ್ಟು ನಿವಾರಣೆಯಾಗುತ್ತದೆ ಹಾಗೂ ತಲೆ ತುರಿಕೆ ಇದ್ದರೂ ನಿವಾರಣೆಯಾಗುತ್ತದೆ.ಆರು ಚಮಚಗಳಷ್ಟು ದಾಸವಾಳದ ಎಣ್ಣೆಗೆ ಐದರಿಂದ ಆರು ಚಮಚ ನೆಲ್ಲಿಕಾಯಿ ಹುಡಿ, ಸ್ವಲ್ಪ ಲಿಂಬೆ ರಸವನ್ನು ಬೆರೆಸಿಕೊಂಡು ಮಿಶ್ರಣ ಮಾಡಿ ತಲೆಬುರುಡೆಗೆ ಹಚ್ಚಬೇಕು. ಇದರಿಂದ ಕೂದಲಿನ ಬೇರುಗಳು ಆರೋಗ್ಯವಾಗಿರುವುದು.

‘ಪಡ್ಡೆಹುಲಿ’ಯನ್ನು ಪಳಗಿಸುವ ಜವಾಬ್ದಾರಿ ಹೊತ್ತ ವಿ. ರವಿಚಂದ್ರನ್

#balkaninews #hibiscusflower #hibiscusflowerusefull #hibiscusflowerimages ##hibiscusflowerfacepack

Tags