ಜೀವನ ಶೈಲಿಸೌಂದರ್ಯ

ದಟ್ಟವಾದ ಕೂದಲು ಬೇಕೆ? ಹಾಗಾದರೆ ಇದನ್ನೊಮ್ಮೆ ಪ್ರಯತ್ನಿಸಿ..

ಆಧುನಿಕ ಜೀವನ ಒತ್ತಡ ನಮ್ಮ ಕೂದಲು ಸೇರಿದಂತೆ ನಮ್ಮ ದೇಹದ ಮೇಲೆ ಭಾರೀ ಪ್ರಭಾವ ಬೀರುತ್ತದೆ. ಅನಾರೋಗ್ಯಕರ ಆಹಾರ ಪದ್ಧತಿ, ಅನಿಯಮಿತ ಜೀವನಶೈಲಿ, ಪರಿಸರ ಮಾಲಿನ್ಯ, ಮತ್ತು ಸೂರ್ಯನ ವಿಷಕಾರಿ ಯುವಿ ಕಿರಣಗಳು ನಮ್ಮ ಕೂದಲನ್ನು ಅಕಾಲಿಕವಾಗಿ ಬೂದು ಬಣ್ಣಕ್ಕೆ ತಳ್ಳುತ್ತದೆ, ಅಂತಿಮವಾಗಿ ಕೂದಲು ನಷ್ಟಕ್ಕೆ ಕಾರಣವಾಗುವ ಕಿರುಕೊಂಡಿಗಳನ್ನು ದುರ್ಬಲಗೊಳಿಸುತ್ತವೆ.  ದಾಸವಾಳ ಎಣ್ಣೆಯಲ್ಲಿನ ಜೀವಸತ್ವಗಳು ಮತ್ತು ಖನಿಜಗಳು ಕೂದಲಿಗೆ ಬಹು ಲಾಭಗಳನ್ನು ನೀಡುತ್ತವೆ. ಕೂದಲಿನ ಪ್ರಯೋಜನಕ್ಕಾಗಿ ದಾಸವಾಳ ಎಣ್ಣೆ ಕೂದಲಿನ ನಷ್ಟವನ್ನು ತಡೆಗಟ್ಟುವುದು, ಅಕಾಲಿಕ ಬೂದುಬಣ್ಣದ ಅಥವಾ ವಯಸ್ಸಾಗುವುದನ್ನು ತಡೆಗಟ್ಟುತ್ತದೆ ಮತ್ತು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ಕೂದಲಿನಲ್ಲಿ ಯಾವಾಗ ಕಂದು ಬಣ್ಣ ಕಂಡುಬರುತ್ತದೆಯೋ ಆಗ ಕೂದಲಿನ ಆರೋಗ್ಯ ಕುಂದಿದೆ ಎಂದು ತಿಳಿದುಕೊಳ್ಳಬೇಕು. ದಾಸವಾಳ ಎಣ್ಣೆ ತಲೆಹೊಟ್ಟು ತೊಡೆದುಹಾಕಲು ಸಹಾಯ ಮಾಡುತ್ತದೆ

ಕೂದಲಿಗೆ ಪೋಷಣೆ ನೀಡುವಲ್ಲಿ ಕೆಲವಾರು ಅವಶ್ಯಕ ಎಣ್ಣೆಗಳು ವಿವಿಧ ರೂಪದಲ್ಲಿ ಪ್ರಯೋಜನಕಾರಿಯಾಗಿವೆ. ಉದಾಹರಣೆಗೆ ಬಾದಾಮಿ ಎಣ್ಣೆಯ ಬಳಕೆಯಿಂದ ಕೂದಲು ಶೀಘ್ರವಾಗಿ ಬೆಳೆಯುತ್ತದೆ. ಇದೇ ರೀತಿಯಲ್ಲಿ ಕೂದಲ ಬಣ್ಣವನ್ನು ಗಾಢಗೊಳಿಸುವ ಕೆಲಸವನ್ನು ದಾಸವಾಳದ ಎಣ್ಣೆ ಮಾಡುತ್ತದೆ.

ವಯಸ್ಸಿಗೂ ಮುನ್ನವೇ ಕೂದಲು ನೆರೆಯುವ ಪರಿಯನ್ನು ದಾಸವಾಳದ ಎಣ್ಣೆ ನಿಧಾನವಾಗಿಸಿ ಕೂದಲ ಕಪ್ಪು ಬಣ್ಣವನ್ನು ಹೆಚ್ಚಿನ ಕಾಲದವರೆಗೆ ಉಳಿಸಿಕೊಳ್ಳುತ್ತದೆ.  ದಾಸವಾಳದ ಎಣ್ಣೆಯ ನಿಯಮಿತ ಬಳಕೆಯಿಂದ ಕೂದಲ ಬುಡ ದೃಢವಾಗುವುದು ಹಾಗೂ ಕೂದಲು ಉದುರುವುದನ್ನೂ ತಡೆಯಬಹುದು. ಕೂದಲ ಉದ್ದವೂ ಕೊಂಚ ಮಟ್ಟಿಗೆ ಹೆಚ್ಚುತ್ತದೆ.

ದಾಸವಾಳದ ಎಣ್ಣೆಯನ್ನು ಬಳಸುವುದು ಹೇಗೆ?

* ಕೆಲವು ತಾಜಾ ದಾಸವಾಳದ ಹೂವುಗಳನ್ನು ಸಂಗ್ರಹಿಸಿ. ಅದರಲ್ಲೂ ಇನ್ನೂ ಬಿರಿಯದಿರುವ ಮೊಗ್ಗುಗಳು ಉತ್ತಮ.

* ಈ ಹೂವುಗಳನ್ನು ನೈಸರ್ಗಿಕ ಕೊಬ್ಬರಿ ಎಣ್ಣೆಯಲ್ಲಿ ಸುಮಾರು ನಾಲ್ಕೈದು ನಿಮಿಷ ಕುದಿಸಿ. ಉರಿ ಚಿಕ್ಕದಾಗಿಸಿ. ಯಾವುದೇ ಕಾರಣಕ್ಕೂ ಈ ಹೂವುಗಳು ಸುಡಬಾರದು.

* ಒಂದು ವೇಳೆ ದಾಸವಾಳದ ಗಿಡ ನಿಮ್ಮ ಮನೆಯಲ್ಲಿಯೇ ಇದ್ದರೆ ಕೆಲವು ಎಲೆಗಳನ್ನೂ ಈ ಎಣ್ಣೆಯಲ್ಲಿ ಬೆರೆಸಿ. ಈ ಎಲೆಗಳಲ್ಲಿಯೂ ಕೂದಲ ಪೋಷಣೆಗೆ ಪೂರಕವಾದ ಗುಣಗಳಿವೆ.
* ದಾಸವಾಳದ ಎಣ್ಣೆಯನ್ನು ಸಂಗ್ರಹಿಸುವ ಇನ್ನೊಂದು ವಿಧಾನವೆಂದರೆ ಈಗಾಗಲೇ ಬಿಸಿಯಾಗಿರುವ ಕೊಬ್ಬರಿ ಎಣ್ಣೆಯಲ್ಲಿ ಈ ಹೂವುಗಳನ್ನು ಹತ್ತು ನಿಮಿಷ ಇರಿಸಿ. ಇದರಿಂದ ಹೂವಿನಲ್ಲಿರುವ ಎಣ್ಣೆಯಂಶ ಕೊಬ್ಬರಿ ಎಣ್ಣೆಯಲ್ಲಿ ಬೆರೆಯುತ್ತದೆ.

* ಇನ್ನೊಂದು ವಿಧಾನದಲ್ಲಿ ಹೂವುಗಳನ್ನು ಬೆರೆಸಿದ ಎಣ್ಣೆಯನ್ನು ಮೈಕ್ರೋವೇವ್ ನಲ್ಲಿ ಐದು ನಿಮಿಷ ಇರಿಸಿ ಕನಿಷ್ಟ ಶಕ್ತಿಯಲ್ಲಿ ಬಿಸಿಮಾಡಿ. ಒಳಗಿಟ್ಟ ಗಾಜಿನ ಬೋಗುಣಿಯನ್ನು ಇನ್ನೊಂದು ಗಾಜಿನ ತಟ್ಟೆಯಿಂದ ಮುಚ್ಚುವುದನ್ನು ಮಾತ್ರ ಮರೆಯಬಾರದು. ಇಲ್ಲದಿದ್ದರೆ ಪ್ರಖರ ಕಿರಗಣಗಳು ಎಣ್ಣೆಯ ಶಕ್ತಿಗುಂದಿಸಬಹುದು.

* ಈ ಎಣ್ಣೆಯನ್ನು ತಣಿಸಿದ ಬಳಿಕ ಕನಿಷ್ಟ ವಾರಕ್ಕೊಮ್ಮೆ ತಲೆಗೆ ಹಚ್ಚಿಕೊಂಡು ಕೂದಲ ಬುಡಕ್ಕೆ ನಯವಾಗಿ ಮಸಾಜ್ ಮಾಡಿ. ಕೆಲವೇ ದಿನಗಳಲ್ಲಿ ಕೂದಲು ಕಪ್ಪಗಾಗುವುದನ್ನು ಗಮನಿಸಬಹುದು. ಈ ಎಣ್ಣೆಯ ಹೇರ್ ಪ್ಯಾಕ್ ಸಹಾ ಉತ್ತಮ ಪರಿಣಾಮ ಒದಗಿಸುತ್ತದೆ ಹಾಗೂ ಕೂದಲು ಹೆಚ್ಚು ಘನ, ಗಾಢ ಹಾಗೂ ಶಕ್ತಿಯುತವಾಗುತ್ತದೆ.

* ಹೇರ್ ಪ್ಯಾಕ್ ತಯಾರಿಸಲು ಐದು ದಾಸವಾಳದ ದಳಗಳನ್ನು ಅಥವಾ ಗ್ರಂಥಿಗೆ ಅಂಗಡಿಯಲ್ಲಿ ಸಿಗುವ ಒಣ ದಾಸವಾಳ ಹೂವಿನ ದಳಗಳನ್ನು ಎರಡು ದೊಡ್ಡ ಚಮಚ ಜೇನು ಮತ್ತು ನಾಲ್ಕು ದೊಡ್ಡಚಮಚ ಮೊಸರಿನೊಂದಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

* ಇದಕ್ಕೆ ಎರಡು ದೊಡ್ಡ ಚಮಚ ತೆಂಗಿನ ಹಾಲನ್ನು ಬೆರೆಸಿ. ಇದರಿಂದ ಈ ಮಿಶ್ರಣ ಇನ್ನಷ್ಟು ಬಲಯುತವಾಗುತ್ತದೆ ಹಾಗೂ ಕೂದಲಿಗೆ ಹೆಚ್ಚಿನ ಪೋಷಣೆ ಒದಗಿಸುತ್ತದೆ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಸುಮಾರು ಒಂದು ಘಂಟೆ ಬಿಟ್ಟು ತಣ್ಣೀರಿನಿಂದ ಹಾಗೂ ಶಾಂಪೂ ಬಳಸಿ ತೊಳೆದುಕೊಳ್ಳಿ. ಈ ನೈಸರ್ಗಿಕ ವಿಧಾನಗಳಿಂದ ದಾಸವಾಳದ ಎಣ್ಣೆಯ ಬಳಕೆಯಿಂದ ನಿಮ್ಮ ಕೂದಲಿಗೆ ನೈಸರ್ಗಿಕ ಗಾಢವರ್ಣ ಹಾಗೂ ದೃಢತೆ ಶೀಘ್ರವೇ ದೊರಕುತ್ತದೆ.
ಸುಹಾನಿ ಬಡೆಕ್ಕಿಲ.

 

Tags