ಜೀವನ ಶೈಲಿಫ್ಯಾಷನ್

ಪಾರ್ಟಿ ಸಮಾರಂಭಕ್ಕೆ ಈ ಉಡುಪು ಧರಿಸಿ, ಬೊಜ್ಜನ್ನು ಮರೆಮಾಚಿ!!

ಕಾಲೇಜಿನ ಲಲನೆಯರಿಂದ ಹಿಡಿದು ಮಧ್ಯ ವಯಸ್ಸಿನ ಹೆಂಗಸರು ಹಾಕುವ ಉಡುಪಾಗಿದೆ. ಇತಿಹಾಸಪೂರ್ವ ಕಾಲದಿಂದಲೂ ಸ್ಕರ್ಟ್‍ಗಳನ್ನು ಧರಿಸಲಾಗುತ್ತಿತ್ತು. ಇದು ಕೆಳಭಾಗದ ದೇಹವನ್ನು ಆವರಿಸುವ ಸರಳ ಮಾರ್ಗವಾಗಿದೆ. ಹೆಚ್ಚು ಬೊಜ್ಜು ಹೊಂದಿದವರಿಗೆ ಸಲ್ವಾರ್ ಅಥವಾ ಸೀರೆ ಹಾಕಲು ಮುಜುಗರವಾಗುತ್ತದೆ.. ಯಾರು ಏನು ಅಂದುಕೊಂಡು ಬಿಡುತ್ತಾರೋ ? ಪಾರ್ಟಿಗೆ ಹೇಗೆ ಹೋಗಲಿ ? ಎಲ್ಲರೂ ನನ್ನನ್ನೇ ನೋಡಿ ನಕ್ಕರೆ ಎಂಬ ಸಾವಿರಾರು ಚಿಂತೆಗಳು ಮನದಲ್ಲಿ ಕಾಲೇಜು ಯುವತಿಯರಿಗೆ ಹಾಗೂ ಮಹಿಳೆಯರಿಗೆ ಕಾಡುತ್ತದೆ.. ಅದಕ್ಕೆ ಇಲ್ಲಿ ಸರಳ ಟಿಪ್ಸ್ ಇದೆ..

Image result for high waist skirt wearing women

ಹೈ ವೈಸ್ಟ್ ಸ್ಕರ್ಟ್

ಹೈ ವೈಸ್ಟ್ ಸ್ಕರ್ಟ್ ಇದು ಬೊಜ್ಜನ್ನು ಮರೆ ಮಾಚಲು ಬಹಳ ಸಹಾಯ ಮಾಡುತ್ತದೆ.. ದೇಹದಲ್ಲಿ ಹೆಚ್ಚು ಬೊಜ್ಜು ಹೊಂದಿದವರು ಈ ಉಡುಪು ಧರಿಸಬಹುದು.. ಸಡನ್ ಆಗಿ ಪಾರ್ಟಿಗೆ ಹೋಗಬೇಕು, ಬೊಜ್ಜು ಕಾಣಿಸಬಾರದು ಎಂದರೆ ಹೈ ವೈಸ್ಟ್ ಸ್ಕರ್ಟ್ ಧರಿಸಿ.. ಈ ಉಡುಪು ಧರಿಸುವುದರಿಂದ ನಿಮ್ಮ ಬೊಜ್ಜು ಕಾಣುವುದಿಲ್ಲ. ಪಾರ್ಟಿಗೆ ಹೋಗಲು ಮುಜುಗರ ಪಡಬೇಕೆಂದಿಲ್ಲ .. ತಕ್ಷಣ ಸುಲಭಕ್ಕೆ ಇದು ಸರಳ ಉಪಾಯ ಇದಾಗಿದೆ..

ಹಿಂದಿನ ಉದ್ದ ಲಂಗದ ಮಾಡರ್ನ್ ವರ್ಷನ್‌ ಎಂದರೂ ತಪ್ಪಾಗಲಿಕ್ಕಿಲ್ಲ. ಇವುಗಳು ಧರಿಸಲು ಮತ್ತು ಬಳಸಲು ಬಹಳ ಆರಾಮದಾಯಕವಾಗಿರು ವಂತಹವು. ವಯಸ್ಸಿನ ಮಿತಿಯಿಲ್ಲದೆ ಎಲ್ಲಾ ಸಂದರ್ಭಗಳಿಗೆ ಸೂಕ್ತವೆನಿಸುವಂತಹ ವಿಧವಾಗಿದೆ. ಅಂತೆಯೇ ಸ್ಕರ್ಟುಗಳಿಗೆ ಹೊಂದುವಂತಹ ಟಾಪ್‌ ವೇರುಗಳ ಆಯ್ಕೆಯೂ ಅಷ್ಟೇ ಮುಖ್ಯವಾಗಿರುತ್ತದೆ.

Image result for high waist skirt wearing women

Tags