ಆರೋಗ್ಯಆಹಾರಜೀವನ ಶೈಲಿ

ಅಜೀರ್ಣವೇ ಇಲ್ಲಿದೆ ಮನೆ ಮದ್ದು!

ಅಜೀರ್ಣ… ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಗಳ ಪೈಕಿ ಅಜೀರ್ಣವೂ ಒಂದು. ಹೊತ್ತಲ್ಲದ ಹೊತ್ತಿನಲ್ಲಿ ಆಹಾರವನ್ನು ಸೇವಿಸುವುದು, ಜಂಕ್ ಫುಡ್ ಗಳ ಸೇವನೆಯಿಂದ ಬರುವ ಅಜೀರ್ಣವನ್ನು ನಿವಾರಿಸಲು ಇಲ್ಲಿದೆ ಮನೆಮದ್ದು. ಅರ್ಥಾತ್ ದಿನಂಪ್ರತಿ ಅಡುಗೆಗೆ ಬಳಸಲ್ಪಡುವ ಆಹಾರ ಪದಾರ್ಥಗಳಲ್ಲಿದೆ ಅಜೀರ್ಣಕ್ಕೆ ಮನೆ ಮದ್ದು.

ಊಟವಾದ ಬಳಿಕ ಸ್ವಲ್ಪ ಜೀರಿಗೆಯನ್ನು ಜಗಿದರೆ ಅಜೀರ್ಣಕ್ಕೆ ಒಳ್ಳೆಯದು. ಜೀರಿಗೆ ತಿನ್ನುವುದರಿಂದ ನಾವು ಸೇವಿಸಿದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಎರಡು ಚಮಚ ಜೀರಿಗೆಯನ್ನು ಒಂದು ಲೋಟ ನೀರಿಗೆ ಹಾಕಿ ಕಷಾಯ ಮಾಡಿ ಕುಡಿದರೆ ಜೀರ್ಣಕ್ರಿಯೆ ಸರಾಗವಾಗಿ ಸಾಗುತ್ತದೆ.

Image result for jeera and sombu

ಅಷ್ಟು ಮಾತ್ರವಲ್ಲದೇ ಊಟದ ನಂತರ ಸೋಂಪನ್ನು ಸೇವಿಸಿದರೂ ಆರೋಗ್ಯಕ್ಕೆ ಒಳ್ಳೆಯದು. ತಿನ್ನಲು ರುಚಿರುಚಿಯಾಗಿರುವ ಸೋಂಪು ಕೂಡಾ ಜೀರ್ಣಕ್ರಿಯೆಗೆ ಉತ್ತಮ ಮದ್ದು.

Image result for sompu

ಸಿಟ್ರಿಕ್ ಅಂಶವನ್ನು ಒಳಗೊಂಡಿರುವ ನಿಂಬೆರಸವೂ ಅಜೀರ್ಣಕ್ಕೆ ಉತ್ತಮ ಪರಿಹಾರ ನೀಡುತ್ತದೆ. ನಿಂಬೆರಸಕ್ಕೆ ಅಡುಗೆ ಸೋಡಾ ಮತ್ತು ಉಪ್ಪು ಬೆರೆಸಿ ಕುಡಿಯುವುದರಿಂದ ಅಜೀರ್ಣವನ್ನು ಕಡಿಮೆ ಮಾಡಬಹುದು‌‌.

Image result for lemon

ಅಜೀರ್ಣದಿಂದ ಹೊಟ್ಟೆ ಉಬ್ಬರಿಸಿದ ಹಾಗೆ ಆಗುತ್ತದೆ. ಅದಕ್ಕೆ ಕೊತ್ತಂಬರಿ ಬೀಜ ಬೆಸ್ಟ್ ಮದ್ದು. ಒಂದು ಲೋಟ ಮಜ್ಜಿಗೆಗೆ ಕೊತ್ತಂಬರಿ ಬೀಜವನ್ನು ಪುಡಿ ಮಾಡಿ ಹಾಕಿ ಕುಡಿದರೆ ಒಳ್ಳೆಯದು.

Related image

ಒಂದು ಚಿಟಿಕೆ ಉಪ್ಪು ಮತ್ತು ಒಂದು ಚಮಚ ಶುಂಠಿ ರಸವನ್ನು ಸೇರಿಸಿ ಊಟಕ್ಕೆ ಸ್ವಲ್ಪ ಮುಂಚೆ ಸೇವಿಸಿದರೆ ಜೀರ್ಣ ಶಕ್ತಿ ಹೆಚ್ಚುತ್ತದೆ.

Image result for home remedies for indigestion

ಟ್ರೆಂಡ್ ಆಯ್ತು ಹುಡುಗಿಯರ ಫೇವರೆಟ್ ಹೂವುಗಳ ಆಭರಣ

#indigestion #indigestiontreatment #indigestionmedicines #indigestiontablets #indigestionproblems

Tags