ಜೀವನ ಶೈಲಿಫ್ಯಾಷನ್ಸೌಂದರ್ಯ

ವೈಟ್ ಹೆಡ್ಸ್ ನಿವಾರಣೆಗೆ ಮನೆ ಮದ್ದು

ಮುಖದ ಮೇಲೆ ಒಂದು ಸಣ್ಣ ಕಪ್ಪು ಮಚ್ಚೆ ಶುರುವಾದರೂ ಸಾಕು ಹೆಣ್ಣು ಮಕ್ಕಳ ಪರದಾಟ, ನರಳಾಟ ನೋಡೋಕೆ ಆಗಲ್ಲ. ಬಹುಶಃ ಕಪ್ಪು ಮಚ್ಚೆಗೂ ಅನ್ನಿಸಬಹುದು ನಾನು ಯಾಕಾದ್ರು ಬಂದೆ ಅಂತ. ಅಷ್ಟರ ಮಟ್ಟಿಗೆ ತ್ವಚೆಯ ಸೌಂದರ್ಯದ ಬಗ್ಗೆ ಅವರು ಕಾಳಜಿ ಮಾಡುತ್ತಾರೆ.

ವೈಟ್ ಹೆಡ್ಸ್‍ ಕೂಡ ಮಹಿಳೆಯರ ನಿದ್ದೆ ಕೆಡಿಸುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಅದರ ನಿವಾರಣೆಗೆ ಇಲ್ಲಿದೆ ಮನೆಮದ್ದು.

ಅಡುಗೆ ಸೋಡಾವನ್ನು ಸ್ವಲ್ಪ ನೀರು ಹಾಕಿ ಗಟ್ಟಿಯಾದ ಪೇಸ್ಟ್‍ ಮಾಡಿಕೊಂಡು ವೈಟ್ ಹೆಡ್ಸ್‍ ಇರುವ ಜಾಗಕ್ಕೆ ಹಚ್ಚಿ. ½ ಗಂಟೆ ಬಿಟ್ಟು ತೊಳೆದರೆ ಬಿಳಿ ಮಚ್ಚೆ ಕಡಿಮೆ ಆಗುತ್ತದೆ.

ಮುಖಕ್ಕೆ ಬಿಸಿನೀರಿನ ಹಬೆ ತೆಗೆದುಕೊಳ್ಳೋದು ಕೂಡ ಉತ್ತಮ.

ಮುಖವನ್ನು ವಾರಕ್ಕೆ 2 ಬಾರಿ ಐಸ್ ಕ್ಯೂಬ್‍ ನಿಂದ ಮಸಾಜ್ ಮಾಡಿ.

ಒಂದು ಚಮಚ ಮೊಸರಿಗೆ ಸ್ವಲ್ಪ ಓಟ್ಸ್‍ ಹಾಕಿ ಪೇಸ್ಟ್‍ ಮಾಡಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ. ಇದರಿಂದ ಬಿಳಿ ಮಚ್ಚೆ ಜೊತೆಗೆ ಮುಖದ ಕಾಂತಿ ದುಪ್ಪಟ್ಟಾಗುತ್ತದೆ.

ದಾಲ್ಚನಿ ಪುಡಿಯನ್ನು ಜೇನುತುಪ್ಪದ ಜೊತೆ ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ. ಈ ಎಲ್ಲಾ ವಿಧಾನಗಳನ್ನು ತಪ್ಪದೇ ಪಾಲಿಸಿ. ಸುಂದರೆ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಿ.

Image result for whiteheads on face

ಟಾಲಿವುಡ್ ನಿತಿನ್ ಚಿತ್ರರಂಗಕ್ಕೆ ಬಂದು ಬರೋಬ್ಬರಿ 17 ವರ್ಷ!!!

#balkaninews #whiteheads #whiteheadonnose #whiteheadsonlips

Tags