ಆರೋಗ್ಯಆಹಾರಜೀವನ ಶೈಲಿ

ನಿಮಗೆ ಅಲ್ಸರ್ ಇದೆಯೇ…? ಹಾಗಾದರೆ ತಪ್ಪದೇ ಇವುಗಳನ್ನು ಫಾಲೋ ಮಾಡಿ

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕೇಳಿ ಬರುವ ರೋಗಗಳಲ್ಲಿ ಅಲ್ಸರ್ ಕೂಡ ಒಂದಾಗಿದೆ. ಅಲ್ಸರ್ ಅಥವಾ ಹುಣ್ಣು ಎಂದು ಕರೆಯುವ ಈ ಕಾಯಿಲೆ ಜಠರದ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಅಲ್ಸರ್ ನಿಂದ ನಮ್ಮ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿರುತ್ತದೆ. ಇದೀಗ ಅಲ್ಸರ್ ರೋಗಕ್ಕೆ ಯಾವೆಲ್ಲ ಆಹಾರಗಳನ್ನು ಸೇವಿಸಬೇಕು ಎಂದು ನಾವಿಂದು ಸಲಹೆ ನೀಡುತ್ತಿದ್ದೇವೆ.

  1. ಮೊದಲಿಗೆ ಅಲ್ಸರ್ ಇರುವವರು ಹೆಚ್ಚಾಗಿ ಖಾರವನ್ನು ಸೇವಿಸಬಾರದು.
  2. ಅಲ್ಸರ್ ಇರುವವರು ಹೆಚ್ಚಾಗಿ ಮೊಸರು ಹಾಗೂ ಮಜ್ಜಿಗೆಯನ್ನು ಸೇವಿಸಬೇಕು.
  3. ಈರುಳ್ಳಿ ಹುಣ್ಣು ಉಂಟುಮಾಡುವ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತೊಡೆದುಹಾಕುತ್ತದೆ. ಈರುಳ್ಳಿಯನ್ನು ಸಲಾಡ್ ಗಳಾಗಿ ಮಾಡಿ ತಿನ್ನುವುದರಿಂದ ಹೊಟ್ಟೆ ಉರಿ ಕಡಿಮೆಯಾಗುತ್ತದೆ.
  4. ಕ್ಯಾಸ್ಟರ್ ಆಯಿಲ್ ಅಥವಾ ಹರಳೆಣ್ಣೆಯನ್ನು ನಿಮ್ಮ ಹೊಟ್ಟೆಯ ಭಾಗಕ್ಕೆ ಹಚ್ಚಿರಿ. ಇದರಿಂದ ಉರಿಯೂತವನ್ನು ಕಡಿಮೆ ಮಾಡಿ, ನೋವನ್ನು ನಿವಾರಿಸುತ್ತದೆ.
  5. ಎಲೆಕೋಸು ಹುಣ್ಣು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿದಿನ ಎರಡು ಕಪ್ ಕಚ್ಚಾ ಎಲೆಕೋಸನ್ನು ತಿನ್ನಲು ಪ್ರಯತ್ನಿಸಬೇಕು. ಹಾಗೂ ದಿನಕ್ಕೆ ನಾಲ್ಕು ಕಪ್ ಎಲೆಕೋಸು ರಸವು ಸೇವಿಸುವುದರಿಂದ ಒಂದು ವಾರದೊಳಗೆ ಹೊಟ್ಟೆಯ ಹುಣ್ಣು ಮಾಯವಾಗುತ್ತದೆ.
  6. ಸೇಬು, ಬ್ಲೂ ಬೆರಿಸ್, ಚೆರಿಸ್, ಆರೆಂಜ್ ಹಾಗೂ ನಿಂಬೆಹಣ್ಣು, ಬಾಳೆಹಣ್ಣು ಹೀಗೆ ಇನ್ನೇತರ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿರಿ.
  7. ಇಷ್ಟೇ ಅಲ್ಲದೇ ಅಲ್ಸರ್ ಇರುವವರು ಜೇನುತುಪ್ಪವನ್ನು ಸಹ ಸೇವಿಸಿರಿ.

ಸುಕ್ಕುಗಳನ್ನು ತೊಡೆದು, ಚಿಕ್ಕವರಾಗಿ ಕಾಣಲು ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್

Tags