ಆರೋಗ್ಯಆಹಾರಜೀವನ ಶೈಲಿ

ಮನೆಯಲ್ಲಿಯೇ ತಯಾರಿಸಿ ನಿಮ್ಮ ನೆಚ್ಚಿನ ಮಿಲ್ಕಿ ಬಾರ್!

ಬಾಯಲ್ಲಿ ನೀರೂರಿಸುವ ಮಿಲ್ಕಿ ಬಾರ್ ಕಂಡರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ! ಅದರಲ್ಲೂ ಮಕ್ಕಳಿಗಂತೂ ಚಾಕಲೇಟ್ ಇದ್ದರೆ ಸಾಕು, ಬೇರೇನೂ ಬೇಡ! ನಾನಾ ನಮೂನೆಯ ಚಾಕಲೇಟ್ ಗಳು ಮುದ್ದು ಮಕ್ಕಳ ಮನ ಸೆಳೆಯುತ್ತವೆ. ಹೀಗಿರುವಾಗ ನೀವು ಮನೆಯಲ್ಲಿಯೇ ಚಾಕಲೇಟ್ ಮಾಡಿದರೆ!!! ನಿಮ್ಮ ಮಕ್ಕಳ ಆನಂದ ಹೇಳತೀರದು.

ಇದೀಗ ಮನೆಯಲ್ಲಿಯೇ ಬಹುಬೇಗ ತಯಾರಿಸಬಹುದಾದ ಮಿಲ್ಕಿ ಬಾರ್ ಚಾಕಲೇಟ್ ಬಗ್ಗೆ ನಾವೀಗ ತಿಳಿಯೋಣ.

Image result for homemade milky bar recipe

ಹಾಲಿನ ಪುಡಿ ಮೂರು ಕಪ್, ಸಕ್ಕರೆ ಒಂದೂವರೆ ಕಪ್, ಬೆಣ್ಣೆ ಒಂದು ಕಪ್ ನಿಂದ ರುಚಿಕರವಾದ ಚಾಕಲೇಟ್ ತಯಾರಿಸಬಹುದು. ಕೇವಲ ಹದಿನೈದು ನಿಮಿಷದಲ್ಲಿ ಮಿಲ್ಕಿ ಬಾರು ರೆಡಿ.

ಮೊದಲಿಗೆ ಪಾತ್ರೆಯಲ್ಲಿ ನಾನ್ ಸ್ಟಿಕ್ ತವಾದಲ್ಲಿ ಸಕ್ಕರೆ ಹಾಕಬೇಕು, ನಂತರ ಸಕ್ಕರೆ ಹಾಕಿ. ನಂತರ ಅದನ್ನು ಕಾಯಿಸಿ ಸಕ್ಕರೆ ಕರಗಿ ತೆಳ್ಳನೆ ಪಾಕ ಬರುವವರೆಗೆ ಸ್ಟೌ ಮೇಲೆ ಇಡಬೇಕು.  ಪಾಕ ಆಗುತ್ತಿದ್ದಂತೆ ಒಲೆ ಆರಿಸಿ ತವಾವನ್ನು ಕೆಳಗೆ ಇಳಿಸಿಕೊಳ್ಳಬೇಕು.

ಆನಂತರ  ಸಕ್ಕರೆ ಪಾಕ ಬಿಸಿ ಇರುವಾಗಲೇ ಅದಕ್ಕೆ ಹಾಲಿನ ಪುಡಿ ಮತ್ತು ಬೆಣ್ಣೆ ಹಾಕಿ ಚೆನ್ನಾಗಿ ಸೇರುವಂತೆ ಕೈಯಾಡಿಸಬೇಕು. ಕೊನೆಗೆ ಅದನ್ನು ಎಷ್ಟು ದಪ್ಪ ಬೇಕೋ ಅಷ್ಟು ದಪ್ಪ ಅಗಲವಾಗಿ ಹರಡಿ, ಬೇಕಾದ ಆಕಾರದಲ್ಲಿ ಕತ್ತರಿಸಿಕೊಂಡರೆ ಮುಗಿಯಿತು. ಬಾಯಲ್ಲಿ ನೀರೂರಿಸುವ ಮಿಲ್ಕಿ ಬಾರ್ ರೆಡಿ!

ಚಂದನದ ಗೊಂಬೆ…

#balkaninews #lifestyle #healhtytips #milkybar #milkybarrecipe

Tags