ಜೀವನ ಶೈಲಿಫ್ಯಾಷನ್ಸೌಂದರ್ಯ

ನಿಮ್ಮ ಕೈಗಳ ಮೆಹಂದಿಯ ಬಣ್ಣ ತುಂಬಾ ದಿನಗಳ ಕಾಲ ಇರಬೇಕೇ…?

ಹೆಣ್ಣು ಮಕ್ಕಳಿಗೆ ಹೆಚ್ಚು ಇಷ್ಟವಾಗುವುದು ಮದರಂಗಿ. ಮದುವೆ ಸಮಾರಂಭಗಳಿರಲಿ  ಯಾವುದೇ ಕಾರ್ಯಕ್ರಮಗಳಿರಲಿ ಅಲ್ಲಿ ಮೆಹಂದಿ ಓಡಾಡುತ್ತಿರುತ್ತಾರೆ. ಅಷ್ಟರ ಮಟ್ಟಿಗೆ ಮೆಹಂದಿಯೆಂದರೇ ಎಲ್ಲರಿಗೂ ಅಚ್ಚು ಮೆಚ್ಚಾಗಿರುತ್ತದೆ. ಆದರೆ, ನಾವು ಮೆಹಂದಿ ಹಾಕಿದ ಕೆಲದಿನಗಳಲ್ಲಿ ಅದು ಹಾಳಾಗುತ್ತದೆ. ಆದರೆ, ನಾವಿಂದು ನಿಮ್ಮ ಕೈಗಳಲ್ಲಿನ ಮೆಹಂದಿ ಹೆಚ್ಚು ದಿನಗಳ ಕಾಲ ಹೇಗೆ ಕಾಪಾಡಿಕೊಳ್ಳುವುದು ಎಂಬುದನ್ನು ತೋರಿಸಿಕೊಡುತ್ತೇವೆ.Image result for mehndiಹೌದು, ಪ್ರತಿಯೊಬ್ಬರೂ ಕೂಡ ಮೆಹಂದಿ ತುಂಬಾ ಡಾರ್ಕ್ ಆಗಿ ಬರಬೇಕೆಂಬ ಆಸೆಯಿರುತ್ತದೆ. ಅದರ ಸಲುವಾಗಿ ನೀವು ಮೆಹಂದಿಯನ್ನು ಹಾಕಿಸಿಕೊಳ್ಳುವ ಮುನ್ನ ಚೆನ್ನಾಗಿ ಕೈ ತೊಳೆಯಿರಿ. ಬಳಿಕ ನೀವು ಮೆಹಂದಿಯನ್ನು ಹಾಕಿಸಿಕೊಂಡು ಗರಿಷ್ಟ ಏಳು ಅಥವಾ ಎಂಟು ಗಂಟೆಗಳ ಕಾಲವಾದರೂ ನಿಮ್ಮ ಕೈಯಲ್ಲಿ ಜೋಪಾನವಾಗಿರುವಂತೆ ನೋಡಿಕೊಳ್ಳಬೇಕು.

Image result for mehndi

ಇಷ್ಟೇ ಅಲ್ಲದೇ ಮೆಹಂದಿ ಡ್ರೈ ಆದಾಗ ನಿಂಬೆ ರಸ ಹಾಗೂ ಸಕ್ಕರೆಯ ಮಿಶ್ರಣ ಮಾಡಿ ನಿಮ್ಮ ಕೈಗಳ ಮೆಹಂದಿಗೆ ಚುಮುಕಿಸಬೇಕು. ಹಾಗೆಂದ ಮಾತ್ರಕ್ಕೆ ಹೆಚ್ಚಾಗಿ ಹಾಕಬೇಡಿ. ಕಡಿಮೆ ಪ್ರಮಾಣದಲ್ಲಿ ಮಿಶ್ರಣವನ್ನು ಹಾಕಿರಿ. ಇದಾದ ನಂತರ ಏಕಾ ಏಕಿ ಕೈಗಳನ್ನು ನೀರಿನಲ್ಲಿ ಉಜ್ಜಿ ತೊಳೆಯಬೇಡಿ. ನಿಧಾನವಾಗಿ ಅದು ಉದುರುವಂತೆ ನೋಡಿಕೊಳ್ಳಿ. ಇಲ್ಲವಾದರೆ, ನಿಮ್ಮ ಡಿಸೈನ್ ಹಾಳಾಗುವುದಲ್ಲದೇ, ಬೇಗ ಅಳಿಸಿಹೋಗುತ್ತದೆ.

ಇನ್ನೇಕೆ ತಡ ನೀವ ಕೂಡ ಹೆಚ್ಚು ದಿನಗಳ ಕಾಲ ಮೆಹಂದಿಯನ್ನು ಉಳಿಸಿಕೊಳ್ಳಬೇಕು ಎಂಬುವವರು ಈ ಟಿಪ್ಸ್ ನನ್ನು ಫಾಲೋ ಮಾಡಿ.

Image result for mehndi

ಸೀರೆ ಕೊಳ್ಳುವುದಕ್ಕಿಂತ ಬ್ಲೌಸ್ ಹೊಲಿಸುವುದೇ ದುಬಾರಿ…!!!

Tags