ಆರೋಗ್ಯಆಹಾರಜೀವನ ಶೈಲಿ

ಮನೆಯಂಗಳದಲ್ಲಿ ಬೆಳವ ಬಸಳೆಯ ಬಗ್ಗೆ ನಿಮಗೆಷ್ಟು ಗೊತ್ತು…?

ಬೆಂಗಳೂರು, ಮೇ.26:

ಮನೆಯ ಹಿತ್ತಲಲ್ಲಿ ಸಮೃದ್ಧವಾಗಿ ಬೆಳೆಯಲ್ಪಡುವ ಬಸಳೆಯನ್ನು ಗೊತ್ತಿಲ್ಲದವರೇ ಇಲ್ಲ. ಕರಾವಳಿ ಕಡೆಗಳಲ್ಲಿ ಬಸಳೆ ಇಲ್ಲದ ಮನೆಯಿಲ್ಲ ಎಂದರೆ ತಪ್ಪಿಲ್ಲ. ತಮಗೆ ಇರುವ ಚಿಕ್ಕ ಜಾಗದಲ್ಲಿ ಒಂದು ಬಸಳೆ ಗಿಡ ಇದ್ದೇ ಇರುತ್ತದೆ. ಬಹುವಾರ್ಷಿಕ ಬಳ್ಳಿಯಾಗಿರುವ ಬಸಳೆ ಬಸೇಲೇಸಿಯ ಕುಟುಂಬಕ್ಕೆ ಸೇರಿದೆ. ಇದರ ವೈಜ್ಞಾನಿಕ ಹೆಸರು ಬ್ಯಾಸೆಲ ರೂಬ್ರ.

ಸೊಪ್ಪು ತರಕಾರಿಯಾದ ಬಸಳೆಯು ದೇಹಕ್ಕೆ ಉತ್ತಮವೂ ಹೌದು. ಬಸಳೆ ಸೊಪ್ಪಿನಲ್ಲಿ ವಿಟಮಿನ್ ಎ,ಬಿ,ಸಿ ಮತ್ತು ಕಬ್ಬಿಣ, ಪೊಟ್ಯಾಶಿಯಂನಂತಹ ಪೌಷ್ಠಿಕಾಂಶಗಳು ಹೆಚ್ಚಿನ ಸಂಖ್ಯೆಯಲ್ಲಿದೆ. ಬಾಯಿಹುಣ್ಣಿನ ಸಮಸ್ಯೆಗೆ ಬಸಳೆ ಹೇಳಿ ಮಾಡಿಸಿದ ಮದ್ದು. ಬಾಯಿಹುಣ್ಣಿನ ನೋವಿನಿಂದ ಬಳಲುತ್ತಿರುವವರು ಬಸಳೆ ಎಲೆಯನ್ನು ಬಾಯಿಗೆ ಹಾಕಿ ನಿಧಾನವಾಗಿ ಜಗಿಯಬೇಕು. ಹೀಗೆ ಮಾಡುವುದರಿಂದ ಬಾಯಿಹುಣ್ಣು ಕಡಿಮೆಯಾಗುತ್ತದೆ.

ಬಸಳೆ ಸೊಪ್ಪಿನಲ್ಲಿ ಕಬ್ಬಿಣಾಂಶ ಯಥ್ಥೇಚ್ಛವಾಗಿ ಇದೆ. ಅದೇ ಕಾರಣದಿಂದ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಕಂಡು ಬಂದಾಗ ಬಸಳೆ ಸೊಪ್ಪನ್ನು ಸೇವಿಸುವಂತೆ ಹಲವಾರು ಸೂಚಿಸುತ್ತಾರೆ. ಅದರಲ್ಲೂ ಗರ್ಭಿಣಿಯರು ಇದನ್ನು ಸೇವಿಸಲೇಬೇಕು‌. ಇದರಿಂದ ದೇಹಕ್ಕೆ ಅಗತ್ಯವಿರುವಂತಹ ಪೋಷಕಾಂಶಗಳು ದೊರೆಯುತ್ತದೆ.

ಮಲಬದ್ಧತೆಯಿಂದ ಬಳಲುತ್ತಿರುವವರು ಬಸಳೆ ಎಲೆಯ ಕಷಾಯವನ್ನು ನಿಯಮಿತವಾಗಿ ಸೇವಿಸದರೆ ಸಾಕು, ಮಲಬದ್ಧತೆ ಕಡಿಮೆಯಾಗುತ್ತದೆ. ಜೊತೆಗೆ ಬಸಳೆ ಸೊಪ್ಪನ್ನು ಸೇವಿಸುವುದರಿಂದ ಅನೀಮಿಯಾ ಕಡಿಮೆಯಾಗಿ ರಕ್ತ ಹೆಚ್ಚುತ್ತದೆ.ದೇಹಕ್ಕೆ ತಂಪು ನೀಡುವ ಬಸಳೆ ತಿನ್ನಲು ಇನ್ನೇಕ ತಡ.. ಈಗಲೇ ಆರಂಭಿಸಿ.

Image result for How much do you know about the malabar spinach at home?

Image result for How much do you know about the malabar spinach at home?

ಆರೋಗ್ಯದ ಆಗರ ಬಾಳೆಹಣ್ಣಿನ ಸಿಪ್ಪೆ!

#basalesoppu #advantagesofbasalesoppu #malabarspinach #advantagesofmalabarspinach

 

Tags