ಆರೋಗ್ಯಆಹಾರಜೀವನ ಶೈಲಿ

ನೋಡಿದಾಕ್ಷಣವೇ ಬಾಯಲ್ಲಿ ನೀರು ತರಿಸುವ ಬದನೆಕಾಯಿ ಎಣ್ಣೆಗಾಯಿ

ಬದನೆಕಾಯಿ ಎಣ್ಣೆಗಾಯಿ ಹೆಸರು ಕೇಳಿದ ತಕ್ಷಣವೇ ಬಾಯಿಯಲ್ಲಿ ನೀರು ಬರತೊಡಗಿತು ಅಲ್ಲವೇ. ಅಷ್ಟರ ಮಟ್ಟಿಗೆ ಎಣ್ಣೆಗಾಯಿ ರುಚಿಕರವಾಗಿರುತ್ತದೆ. ಮನೆಯಲ್ಲಿಯೇ ಬದನೆಕಾಯಿ ಎಣ್ಣೆಗಾಯಿ ಮಾಡುವ ವಿಧಾನವನ್ನು ನಾವಿಂದು ನಿಮಗೆ ತಿಳಿಸುತ್ತಿದ್ದೇವೆ.Image result for badanekayi

ಬದನೆಕಾಯಿ ಎಣ್ಣೆಗಾಯಿ ಮಾಡಲು ಬೇಕಾಗುವ ಪದಾರ್ಥಗಳು

ಗುಂಡು ಬದನೆಕಾಯಿ – ನಾಲ್ಕು ಭಾಗವಾಗಿ  ಮಾಡಿದ ಬದನೆಕಾಯಿ

ಬೆಲ್ಲ

ಹುಣಸೆಹಣ್ಣು

ಹುರಿದ ಒಣಕೊಬ್ಬರಿ

ಹುರಿದ ಕಡ್ಲೆಬೀಜ – ಸ್ವಲ್ಪ

ಹುರಿದ ಎಳ್ಳು – ಸ್ವಲ್ಪ

ಖಾರದ ಪುಡಿ

ಕೊತ್ತಂಬರಿ ಪುಡಿ

ಗರಂ ಮಸಾಲ

ಅರಿಶಿಣ

ಈರುಳ್ಳಿ, ಬೆಳ್ಳುಳಿ ಹಾಗೂ ಕರಿಬೇವು ನನ್ನು ಎಣ್ಣೆ ಹಾಕಿ ಉರಿದಿಟ್ಟುಕೊಳ್ಳಬೇಕು

ಹಚ್ಚಿದ ಈರುಳ್ಳಿ

ಕೊತ್ತಂಬರಿ ಸೊಪ್ಪು

ಎಣ್ಣೇ

ಉಪ್ಪು

Image result for how to make badanekayi ennegayi recipe in home

ಮಾಡುವ ವಿಧಾನ

ಈಗ ಒಂದು ಜಾರಿಗೆ ಕಡ್ಲೆ ಬೀಜ ಹಾಗೂ ಎಳ್ಳನ್ನು ಹಾಕಿ ಚೆನ್ನಾಗಿ ರುಬ್ಬಿಟ್ಟುಕೊಳ್ಳಿ. ಇದರ ಜೊತೆಗೆ ಬೇರೆಯಾಗಿ ಒಣ ಕೊಬ್ಬರಿಯನ್ನು ರುಬ್ಬಿಕೊಳ್ಳಿ. ಇಷ್ಟೇ ಅಲ್ಲದೇ ಉರಿದಿಟ್ಟು ಕೊಂಡಿದ್ದ, ಈರುಳ್ಳಿ, ಬೆಳ್ಳುಳ್ಳಿ ಹಾಗೂ ಕರಿಬೇವಿಗೆ, ಹುಣಸೆಹಣ್ಣು ಹಾಗೂ ಬೆಲ್ಲವನ್ನು ಹಾಕಬೇಕು ಇದರ ಜೊತೆಗೆ ಖಾರಪುಡಿ, ಗರಂ ಮಸಾಲ, ಕೊತ್ತಂಬರಿ ಪುಡಿ, ಅರಿಶಿಣ ಇವೆಲ್ಲವನ್ನು ಸ್ವಲ್ಪ ತರಿ ತರಿಯಾಗಿ ರುಬ್ಬಿಟ್ಟುಕೊಳ್ಳಿ.

ಇದೀಗ ರುಬ್ಬಿಕೊಂಡ ಮಸಾಲೆಗೆ ಕಡ್ಲೆ ಬೀಜ, ಎಳ್ಳು ಹಾಗೂ ರುಬ್ಬಿದ ಕೊಬ್ಬರಿಯನ್ನು ಹಾಕಿ ಮಿಕ್ಸ್ ಮಾಡಿ. ನಂತರ ಸಣ್ಣಗೆ ಹಚ್ಚಿರುವ ಈರುಳ್ಳಿ , ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕೈಯಲ್ಲಿಯೇ ಮಿಕ್ಸ್ ಮಾಡಿರಿ.Image result for how to make badanekayi ennegayi recipe in home

ಇದೀಗ ಮಿಕ್ಸ್ ಮಾಡಿಕೊಂಡಿರುವ ಮಸಾಲೆ ಮಿಶ್ರಣವನ್ನು ನಾಲ್ಕು ಭಾಗ ಮಾಡಿರುವ ಬದನೆಕಾಯಿಯ ಒಳಗೆ ತುಂಬಿರಿ.

ಇಷ್ಟೇಲ್ಲ ಆದ ಬಳಿಕ ಕೊನೆಯದಾಗಿ ಒಂದು ಪ್ಯಾನ್ ಗೆ ಎಣ್ಣೆಯನ್ನು ಹಾಕಿ ಸ್ವಲ್ಪ ಸಾಸಿವೆ, ಮೆಣಸಿನಕಾಯಿ, ಕರಿಬೇವು ಹಾಗೂ ಇಂಗನ್ನು ಹಾಕಬೇಕು. ನಂತರ ಒಲೆಯನ್ನು ಕಡಿಮೆ ಮಾಡಿ ಮಿಶ್ರಣ ಮಾಡಿರುವ ಬದನೆಕಾಯಿಯನ್ನು ಒಂದಾದಾಗಿ ಹಾಕಬೇಕು. ಇದನ್ನು ಸ್ವಲ್ಪ ಸಮಯದವರೆಗೂ ಮುಚ್ಚಳ ಮುಚ್ಚಿ ಬೇಯಿಸಬೇಕು. ನಂತರ ಇದರ ಮುಚ್ಚಳ ತೆಗೆದು ಉಳಿದಿರುವ ಮಸಾಲೆ ಪದಾರ್ಥವನ್ನು ಬದನೆಕಾಯಿಯ ಮೇಲೆ ಹಾಕಿ,  ಸ್ವಲ್ಪ ನೀರನ್ನು  ಹಾಕಿ ಮುಚ್ಚಳ ಮುಚ್ಚಿ ಚೆನ್ನಾಗಿ ಬೇಯಿಸಿದರಾಯಿತು. ಇದೀಗ ಬಿಸಿ ಬಿಸಿ ಬದನೆಕಾಯಿ ಎಣ್ಣೆಗಾಯಿ ಚಪಾತಿ,  ರೊಟ್ಟಿ ಹಾಗೂ ಅನ್ನದ ಜೊತೆ ಸವಿಯಲು ಸಿದ್ದ.

Related image

ಮದುವೆಯಾಗುವ ಪ್ರತಿ ದಂಪತಿಯೂ ಕೂಡ ಈ ಆರು ರೀತಿಯಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲೇಬೇಕು…!!?!!

#badanekayiennegayirecipe #badanekayi #ennegayirecipe  #food #lifestyle

Tags