ಆರೋಗ್ಯಆಹಾರಜೀವನ ಶೈಲಿ

ಲಿವರ್ ನ ಆರೋಗ್ಯಕ್ಕೆ ಹೀಗೆ ಮಾಡಿ?

ನಮ್ಮ ದೇಹದ ಪ್ರಮುಖ ಅಂಗಗಳ ಪೈಕಿ ಲಿವರ್‌ ಕೂಡಾ ಒಂದು. ಹಲವಾರು ರೀತಿಯ ಕಾರ್ಯಗಳನ್ನು ನಿರ್ವಹಿಸುವ ಲಿವರ್  ಪ್ರೋಟೀನ್‌, ಕೊಲೆಸ್ಟ್ರಾಲ್‌ ಮತ್ತು ಪಿತ್ತರಸ ಬಿಡುಗಡೆ, ವಿಟಮಿನ್‌, ಖನಿಜಾಂಶ ಮತ್ತು ಕಾರ್ಬೋಹೈಡ್ರೇಟ್ಸ್‌ ಶೇಖರಣೆ ಹೀಗೆ ನಾನಾ ನಮೂನೆಯ ಕಾರ್ಯಗಳನ್ನು ಇದು ನಿರ್ವಹಿಸುತ್ತದೆ. ಬಹು ಕಾರ್ಯಗಳನ್ನು ನಿಭಾಯಿಸುವ ಲಿವರ್ ನ ಆರೋಗ್ಯ ಕಾಪಾಡುವುದು ಕೂಡ ಅಷ್ಟೇ ಮುಖ್ಯ. ಲಿವರ್‌ ನ ಆರೋಗ್ಯ ಕಾಪಾಡುವಲ್ಲಿ ಕೆಲವು ಆಹಾರಗಳು ಪ್ರಮುಖ ಪಾತ್ರ ವಹಿಸುತ್ತವೆ.

ಅಡುಗೆ ಮನೆಯಲ್ಲಿ ಒಗ್ಗರಣೆಗೆ ಬಳಸುವ ಬೆಳ್ಳುಳ್ಳಿ ಲಿವರ್ ನ ಆರೋಗ್ಯಕ್ಕೆ ಉತ್ತಮ ಮದ್ದು. ಬೆಳ್ಳುಳ್ಳಿಯಲ್ಲಿ ಸೆಲೆನಿಯಂ ಎನ್ನುವ ಅಂಶವಿದ್ದು, ಲಿವರ್‌ ನ ಆರೋಗ್ಯಕ್ಕೆ ಒಳ್ಳೆಯದು. ಬೆಳ್ಳುಳ್ಳಿಯಲ್ಲಿ ಅರ್ಜಿನೈನ್‌ ಎಂಬ ಅಮಿನೋ ಆಮ್ಲವಿದ್ದು, ಇದು ರಕ್ತನಾಳಗಳಿಗೆ ಆರಾಮ ನೀಡುವುದಲ್ಲದೇ ಲಿವರ್‌ ನ ರಕ್ತದೊತ್ತಡ ಕಡಿಮೆ ಮಾಡುತ್ತದೆ.

ಆಲಿವ್‌ ಆಯಿಲ್‌ ಅನ್ನು ಮಿತವಾಗಿ ಸೇವಿಸಿದರೆ ಲಿವರ್‌ ಗೆ ಒಳ್ಳೆಯದು. ಜೊತೆಗೆ ಬಸಳೆ, ಬೀಟ್‌ ರೂಟ್‌, ಬ್ರೊಕೋಲಿ, ಹೂಕೋಸು ಕೂಡಾ ಲಿವರ್ ಆರೋಗ್ಯಕ್ಕೂ ಸಹಕಾರಿ.

ಗ್ರೀನ್‌ ಟೀಯಿಂದಲೂ ಲಿವರ್ ನ ಆರೋಗ್ಯವನ್ನು ಕಾಪಾಡಲು ಸಾಧ್ಯ. ಇದರಲ್ಲಿರುವ ಫ್ಲೆವನಾಯ್ಡ್‌ ಸಾವಯವ ಗುಂಪಿಗೆ ಸೇರಿದ ಆ್ಯಂಟಿಆಕ್ಸಿಡೆಂಟ್‌ ಹೇರಳವಾಗಿದೆ. ಅದೇ ಕಾರಣದಿಂದ ಇದು  ಲಿವರ್‌ ನ ಆರೋಗ್ಯ ಕಾಪಾಡುತ್ತದೆ.

Image result for green tea

ರೋಸ್ ವಾಟರ್ ಬಳಸಿ, ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ….

#balkaninews #oliveoil #greentea #healthytips #liver #liverproblems #liverproblemtreatment

Tags