ಆಹಾರಜೀವನ ಶೈಲಿ

ರುಚಿ ರುಚಿಯಾದ ಹಾಗಲಕಾಯಿ ಬಜ್ಜಿ ಮಾಡುವುದು ಹೇಗೆ?

ಹಾಗಲಕಾಯಿ ಬಜ್ಜಿನಾ? ಈ ಕಹಿಯಾದ ಬಜ್ಜಿಯನ್ನು ಯಾರು ತಿನ್ನುತ್ತಾರೆ ಎನ್ನಬೇಡಿ. ಈಗೆಲ್ಲಾ ಕಾಂಡಿಮೆಂಟ್ಸ್ ಶಾಪ್ ಗಳಿಗೆ ಹೋದರೆ ಹಾಗಲಕಾಯಿ ಬಜ್ಜಿಯದ್ದೇ ಹವಾ. ಜನ ಮುಗಿಬಿದ್ದು ಕೊಳ್ಳುತ್ತಾರೆ. ಕಹಿಯಾದರೂ ತಿನ್ನುತ್ತಾರಾ? ಅಂದುಕೊಳ್ಳಬೇಡಿ. ಇದು ಕಹಿಯಿದ್ದರೂ ತಿನ್ನಲು ರುಚಿಯಾಗಿರುತ್ತದೆ. ಅದು ಹೇಗೆ? ನೀವು ಮನೆಯಲ್ಲೇ ಮಾಡಿ, ಎಂಜಾಯ್ ಮಾಡಿ…

ಬೇಕಾಗುವ ಪದಾರ್ಥಗಳು: 
1 ದೊಡ್ಡ ಗಾತ್ರದ ಹಾಗಲಕಾಯಿ, ಕಾರದಪುಡಿ- 2 ಟೇಬಲ್ ಸ್ಪೂನ್, ಇಂಗು-ಚಿಟಿಕೆ, ಉಪ್ಪು-ರುಚಿಗೆ ತಕ್ಕಷ್ಟು, ಕಡಲೆ ಹಿಟ್ಟು-100 ಗ್ರಾಂ, ಒಂ ಕಾಳು- ಚಿಟಿಕೆ, ನೀರು-1/4 ಕಪ್

ಮಾಡುವ ವಿಧಾನ: 
ಹಾಗಲಕಾಯಿಯನ್ನು ಬಿಲ್ಲೆಯಾಕಾರದಲ್ಲಿ ಹೆಚ್ಚಿ, ಸ್ವಲ್ಪ ಉಪ್ಪು, ಅರಿಶಿಣ ಹಚ್ಚಿಡಿ. ಕಡಲೆಹಿಟ್ಟಿಗೆ, ಉಪ್ಪು, ಕಾರದಪುಡಿ, ಇಂಗು, ಒಂ ಕಾಳು ಸೇರಿಸಿ, ನೀರು ಬೆರೆಸಿ ಬೋಂಡದ ಹಿಟ್ಟಿನ ಹದಕ್ಕೆ ಕಲಸಿ. ಹೆಚ್ಚಿಟ್ಟುಕೊಂಡ ಹಾಗಲಕಾಯಿಯನ್ನು ಹಿಟ್ಟಿನಲ್ಲಿ ಅದ್ದಿ, ಬಿಸಿ ಎಣ್ಣೆಯಲ್ಲಿ ಕರಿಯಿರಿ. ಬಿಸಿ ಬಿಸಿಯಾದ ಬಜ್ಜಿ ತಿನ್ನಲು ಮಜಾ.

Related image

ಮನೆಯಲ್ಲಿ ತಯಾರಿಸಿ ಆರೋಗ್ಯಕರ ಡ್ರೈ ಬೀಡಾ

#balkaninews #bittermelonbajji #food  #taste #preparation #cook #bajji

Tags