ಆರೋಗ್ಯಆಹಾರಜೀವನ ಶೈಲಿ

ಯೋಗರ್ಟ್ ಅನ್ನು ನಿಮ್ಮ ಮನೆಯಲ್ಲೇ ತಯಾರಿಸಬಹುದು, ಹೇಗೆ ಅಂತಿರಾ..?

ಬೆಂಗಳೂರು, ಜ.10: ಯೋಗರ್ಟ್‍ ಇಂದು ಹೆಚ್ಚು ಪ್ರಚಲಿತವಿರುವ ಮೊಸರಿನ ಪ್ರಕಾರಗಳಲ್ಲಿ ಒಂದಾಗಿದೆ. ಇದು ಮೊಸರಿಗೆ ಒಂದು ರೀತಿ ಪರ್ಯಾಯವೆಂದೇ ಹೇಳಬಹುದು. ಮೊಸರು ನೀಡುವ ಪ್ರೊಟೀನ್ ಗಿಂತ ಎರಡು ಪಟ್ಟು ಪ್ರೊಟೀನ್ ಅನ್ನು ದೇಹಕ್ಕೆ ಒದಗಿಸುತ್ತದೆ. ಹಾಗಾಗಿಯೇ ಯೋಗರ್ಟ್‍ ಅನ್ನು ಮೊಸರಿನ ಪರ್ಯಾಯ ಎಂದು ಕರೆಯಲಾಗುತ್ತದೆ. ಇದರಿಂದಾಗುವ ಲಾಭವೂ ಅನೇಕ. ಇತ್ತೀಚಿನ ದಿನಗಳಲ್ಲಿ ಆಹಾರ ತಜ್ಞರು ಕೂಡ ಯೋಗರ್ಟ್‍ ನ ಸೇವನೆಗೆ ಆದ್ಯತೆ ನೀಡುತ್ತಿದ್ದಾರೆ. ಯೋಗರ್ಟ್‍ ಅನ್ನು ಮನೆಯಲ್ಲೇ ತಯಾರಿಸುವ ಸುಲಭ ರಹಸ್ಯ ಸೂತ್ರ ಇಲ್ಲಿದೆ.

  1. ಕುದಿಯುವ ಹಂತದ ಹಾಲನ್ನು (ನಿಮಗೆ ಅಗತ್ಯವಿರುವಷ್ಟು ಪ್ರಮಾಣ) ಬಿಸಿ ಮಾಡಿ ಮತ್ತು ಅದನ್ನು ಗಾಜಿನ ಪಾತ್ರೆಗೆ ಸುರಿಯಿರಿ.

2. ನಂತರ ಅದನ್ನು ಮಂದ ಉಷ್ಠಾಂಶದಲ್ಲಿ ಅಂದರೆ 100-105 ಎಫ್. ನಷ್ಟು ತಣ್ಣಗಿರುವಂತೆ ನೋಡಿಕೊಳ್ಳಿ. ಅಂತಿಮವಾಗಿ ಹಾಲಿನ ಮೇಲೆ ಚರ್ಮದಂತೆ ರೂಪಿತವಾಗುತ್ತದೆ.

3. ಮನೆಯಲ್ಲೇ ತಯಾರಿಸಿದ ಅಥವಾ ಮಾರುಕಟ್ಟೆಯಿಂದ ತಂದ ಯೋಗರ್ಟ್ ‍ಅನ್ನು ತಣ್ಣಗಾಗಿರುವ ಹಾಲಿಗೆ ಎರಡು ಟೇಬಲ್‍ ಸ್ಪೂನ್‍ ನಷ್ಟು ಸೇರಿಸಿ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಚರ್ಮದ ರೀತಿ ರೂಪಿತವಾದ ಕೆನೆ ಪದರಕ್ಕೆ ಯಾವುದೇ ಹಾನಿಯಾಗದಂತೆ ಎಚ್ಚರ ವಹಿಸಬೇಕು.

4. ಗಾಜಿನ ಪಾತ್ರೆಯನ್ನು ಬೆಚ್ಚಗಿನ ನೀರಿನಲ್ಲಿ ಕನಿಷ್ಠ 8 ಗಂಟೆಗಳ ಕಾಲ ಇರಿಸಿ.ಎಂಟ ರಿಂದ ಹನ್ನೆರಡು ಗಂಟೆಗಳ ಕಾಲ ಇರಿಸುವುದು ಸೂಕ್ತ. ಇದರಿಂದ ಯೋಗರ್ಟ್‍ ಮುಂದೆ ಆ ಹೊದಿಕೆಯನ್ನು ಹೆಚ್ಚಿಸುತ್ತದೆ.

5. ಯಾವುದೇ ಹೆಚ್ಚುವರಿ ದ್ರವವನ್ನು ಎಚ್ಚರಿಕೆಯಿಂದ ಹರಿಸುತ್ತದೆ.

6. ಬಳಸುವ ಮೊದಲು 4 ಗಂಟೆಗಳ ಕಾಲ ಫ್ರಿಡ್ಜ್‍ ನಲ್ಲಿಡಿ. ರೆಫ್ರಿಜಿರೇಟರ್ ‍ನಲ್ಲಿ ಸಂಗ್ರಹಿಸಿ 4-5 ದಿನಗಳಲ್ಲಿ ಬಳಸುವುದು   ಉತ್ತಮ. #balkani #howtomakeyogurtathome #yogurt #yogurtfoods #healthyfoods #healthytips

Tags