ಆರೋಗ್ಯಜೀವನ ಶೈಲಿಫ್ಯಾಷನ್ಸೌಂದರ್ಯ

ಸ್ಟೀಮ್ ತೆಗೆದುಕೊಂಡರೆ ಚರ್ಮಕ್ಕೆ ಒಳ್ಳೆಯದೇ?

ಸಾಮಾನ್ಯವಾಗಿ ಕಫ, ಶೀತ ಬಂದಾಗ ವೈದ್ಯರು ಕೇವಲ ಮಾತ್ರೆ ಕೊಟ್ಟು ಬಿಡುವುದಿಲ್ಲ. ಬದಲಿಗೆ ಶೀತ, ಕಫದಿಂದ ಆದಷ್ಟು ಬೇಗ ಗುಣಮುಖವಾಗಬೇಕಾದರೆ  ಸ್ಟೀಮ್ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಶೀತ, ಕಫದಿಂದ ಬಳಲುತ್ತಿರುವವರು ಸ್ಟೀಮ್ ತೆಗೆದುಕೊಂಡರೆ ಬಹುಬೇಗನೆ ಇದರಿಂದ ಮುಕ್ತಿ ಪಡೆಯಬಹುದು. ಆದರೆ ಆ ಸ್ಟೀಮ್ ಕೇವಲ ಆರೋಗ್ಯಕ್ಕೆ ಮಾತ್ರ ಮುಖ್ಯವಲ್ಲ. ಬದಲಿಗೆ ಸ್ಟೀಮ್ ತೆಗೆದುಕೊಳ್ಳುವುದರಿಂದ ಚರ್ಮದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

ಸ್ಟೀಮ್ ತೆಗೆದುಕೊಳ್ಳುವುದಕ್ಕೂ, ಚರ್ಮಕ್ಕೂ ಅದೇನು ಸಂಬಂಧ ಎಂದುಕೊಳ್ಳುತ್ತಿದ್ದೀರಾ? ಸಂಬಂಧ ಇದ್ದೇ ಇದೆ. ವಾರದಲ್ಲಿ ಮೂರರಿಂದ ನಾಲ್ಕು ದಿನ ಸ್ಟೀಮ್ ತೆಗೆದುಕೊಳ್ಳುತ್ತಿದ್ದರೆ ಡೆಡ್ ಸ್ಕಿನ್ ನಾಶವಾಗುತ್ತದೆ. ಮಾತ್ರವಲ್ಲ, ಸ್ಟೀಮ್ ತೆಗೆದುಕೊಳ್ಳುವುದರಿಂದ ಚರ್ಮದ ಮೇಲಿರುವ ಕೊಳಕು ಕೂಡಾ ಹೋಗುತ್ತದೆ. ಇದರಿಂದ ಮೊಡವೆ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ನೆನಪಿಡಿ.‌ ಹೆಚ್ಚು ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರು ಕೂಡಾ ವಾರದಲ್ಲಿ ನಾಲ್ಕೈದು ದಿನ ತಪ್ಪದೇ  ಅಗತ್ಯವಾಗಿ ಸ್ಟೀಮ್ ತೆಗೆದುಕೊಳ್ಳಬೇಕು.

ಸ್ಟೀಮ್ ತೆಗೆದುಕೊಳ್ಳುವ ಬಗೆ ಹೇಗೆ? 

ದೊಡ್ಡ ಪಾತ್ರೆಯಲ್ಲಿ ಮೂರರಿಂದ ನಾಲ್ಕು ಗ್ಲಾಸ್ ನೀರನ್ನು ತೆಗೆದುಕೊಳ್ಳಿ. ನಂತರ ನೀರನ್ನು ಚೆನ್ನಾಗಿ ಕುದಿಸಿ. ನೀರು ಬಿಸಿಯಾದ ನಂತರ ಸ್ಟೀಮ್ ತೆಗೆದುಕೊಳ್ಳಿ. ಆದರೆ ಆ ಸಮಯದಲ್ಲಿ ನೀವು ಅದೆಷ್ಟು ಜಾಗರೂಕರಾಗಿದ್ದರೂ ಸಾಲದು! ನೆನಪಿಡಿ.

Image result for how to take steam for cold

Image result for Is it good for skin to take steam?

 

ಅಕ್ಕಿ ತೊಳೆದ ನೀರನ್ನು ಚೆಲ್ಲುವ ಮುನ್ನಾ ಹೀಗೆ ಮಾಡಿ

#balkaninews #beautytips #healthytips #steam #steamforcold

Tags