ಜೀವನ ಶೈಲಿಫ್ಯಾಷನ್

ಫ್ಯಾಷನ್ ಲೋಕದಲ್ಲಿ ಜೀನ್ಸ್ !!

ಹೆಚ್ಚಿನ ಮಹಿಳೆಯರಿಗೆ ಸೀರೆಗಿಂತ ಪ್ಯಾಂಟ್, ಸೆಲ್ವಾರ್ ಧರಿಸಿದರೆ ಹೆಚ್ಚು ಕಂಫರ್ಟ್ ಅನಿಸುವುದರಿಂದ ದೂರ ಪ್ರಯಾಣ ಮಾಡುವಾಗ ಜೀನ್ಸ್ ಹಾಕಲು ಇಷ್ಟಪಡುತ್ತಾರೆ. ಜೀನ್ಸ್ ಅನ್ನು ಹುಡುಗಿಯರು ಮಾತ್ರವಲ್ಲ 50 ವರ್ಷ ದಾಟಿದವರೂ ಧರಿಸಲು ಇಷ್ಟಪಡುತ್ತಾರೆ. ಜೀನ್ಸ್ ತುಂಬಾ ಕಂಪರ್ಟ್ ಆದ ಉಡುಗೆಯಾಗಿದೆ ಅನ್ನುವುದು ಜೀನ್ಸ್ ಧರಿಸುವವರ ಅಭಿಪ್ರಾಯ. ಕಾಲದಿಂದ ಕಾಲಕ್ಕೆ ಜೀನ್ಸ್ ನಲ್ಲಿ ಅನೇಕ ಫ್ಯಾಷನ್ ಗಳು ಬರುತ್ತವೆ, ಆದರೆ ಜೀನ್ಸ್ ಅನ್ನುವುದು ಕಾಮನ್ ಫ್ಯಾಷನ್ . ಜೀನ್ಸ್ ನಲ್ಲಿ ಕ್ಯಾಷ್ಯೂಯಲ್ ವೇರ್, ಟೈಟ್ ಫಿಟ್ ಪ್ಯಾಂಟ್, ಪೆನ್ಸಿಲ್ ಕಟ್ ಪ್ಯಾಂಟ್ ಹೀಗೆ ಅನೇಕ ಬಗೆಯ ಪ್ಯಾಂಟ್ ಗಳಿವೆ. ಜೀನ್ಸ್ ನ ಮುಖ್ಯ ಗುಣವೆಂದರೆ ಜೀನ್ಸ್ ಧರಿಸಿ ಅದರ ಮೇಲೆ ಯಾವ ರೀತಿಯ ಟಾಪ್ ಧರಿಸುತ್ತೇವೊ ಅದರಂತೆ ನಮ್ಮ ಲುಕ್ ಬದಲಾಗುತ್ತದೆ.

ದಿ ಹಿಪ್ ಹಾಪ್ ಲುಕ್

ಗಾಢ ಬಣ್ಣದ ಜೀನ್ಸ್ ಧರಿಸಿ ಶರ್ಟ್ ಹಾಕಿ ಇನ್ ಶರ್ಟ್ ಮಾಡುವ ಬದಲು ಶರ್ಟ್ ನ ತುದಿಯನ್ನು ಕಟ್ಟುವುದು ಕೂಡ ಲೇಟಸ್ಟ್ ಫ್ಯಾಷನ್.

ಜಿನ್ಸ್ ವಿಥ್ ಜರ್ಕೀನ್

ಜೀನ್ಸ್ ಮತ್ತು ಟೀ ಶರ್ಟ್ ಹಾಕಿ ಅದಕ್ಕೆ ಜೀನ್ಸ್ ಜರ್ಕೀನ್ ಹಾಕುವ ಫ್ಯಾಷನ್ ಹಳೆಯದ್ದಾಗಿತ್ತು. ಮತ್ತೆ ಈ ಫ್ಯಾಷನ್ ಮರುಕಳಿಸಿದೆ

ಸೆಮಿ ಫಾರ್ಮಲ್ ಲುಕ್

ಕೆಲವೊಂದು ಆಫೀಸ್ ಗೆ ಸೆಮಿ ಫಾರ್ಮಲ್ ಲುಕ್ ನಲ್ಲಿ ಹೋಗಬಹುದು. ಜೀನ್ಸ್ ಧರಿಸಿ ನಿಮಗೆ ಸೂಕ್ತವಾದ ಡೀಸೆಂಟ್ ಲುಕ್ ನೀಡುವ ಮುಕ್ಕಾಲು ಕೈ ಅಥವಾ ಫುಲ್ ಕೈಯಿರುವ ಶರ್ಟ್ ಧರಿಸಿ, ಇನ್ ಶರ್ಟ್ ಮಾಡಿದರೆ ಸೆಮಿ ಫಾರ್ಮಲ್ ಲುಕ್ ನಲ್ಲಿ ಕಂಗಳಿಸಬಹುದು.

ಉದ್ದದ ಸ್ಟ್ರೈಟ್ ಲೆಗ್ ಜೀನ್ಸ್

ಸ್ವಲ್ಪ ದಪ್ಪದ ಮಹಿಳೆಯರು ಈ ರೀತಿಯ ಪ್ಯಾಂಟ್ ಆಯ್ಕೆ ಮಾಡಿಕೊಂಡರೆ ಆಕರ್ಷಕವಾಗಿ ಕಾಣುವುದು. ಈ ರೀತಿಯ ಪ್ಯಾಂಟ್ ಧರಿಸಿದಾಗ ಹೀಲ್ಡ್ ಚಪ್ಪಲಿ ಹಾಕಿ ಪ್ಯಾಂಟ್ ಕೆಳಭಾಗವನ್ನು ಮಡಚದೆ ಬಿಡಬಹುದು, ಇಲ್ಲದೆ ಫ್ಲಾಟ್ ಚಪ್ಪಲಿ ಧರಿಸಿ ಪ್ಯಾಂಟ್ ಕೆಳಭಾಗ ಮಡಚಿದರೆ ಒಳ್ಳೆಯದು.

ಟ್ರೌಸರ್ ಜೀನ್ಸ್

ದೊಡ್ಡ ಶಾಪ್ ಗಳಲ್ಲಿ ಈ ರೀತಿಯ ಪ್ಯಾಂಟ್ ದೊರೆಯುತ್ತದೆ. ಇದನ್ನು ಧರಿಸಿದರೆ ತುಂಬಾ ಆರಾಮದಾಯಕವಾಗಿರುತ್ತದೆ. ಸೈಡ್ ನಲ್ಲಿ ಪಾಕೆಟ್ ಇರುವ ಈ ಪ್ಯಾಂಟಿಗೆ ಶರ್ಟ್ ಹಾಕಿದರೆ ಸೆಮಿ ಫಾರ್ಮಲ್ ಲುಕ್ ಸಿಗುತ್ತದೆ. ಆದ್ದರಿಂದ ಇದನ್ನು ಆಫೀಸಿಗೆ ಕೂಡ ಧರಿಸಬಹುದು

ಜೀನ್ಸ್ ಕ್ಯಾಪ್ರಿಸ್

ಈ ರೀತಿಯ ಜೀನ್ಸ್ ಪ್ಯಾಂಟ್ ಯುವತಿರ ಮೆಚ್ಚಿನ ಪ್ಯಾಂಟ್ ಆಗಿದೆ. ಈ ಪ್ಯಾಂಟ್ ನೀಲಿ, ಕಪ್ಪು , ಬಣ್ಣ ಮಾಸಿದ ನೀಲಿ ಬಣ್ಣ , ಕ್ರೀಮ್ ಕಲರ್ ನಲ್ಲಿ ದೊರೆಯುತ್ತದೆ. ಈ ಮುಕ್ಕಾಲು ಪ್ಯಾಂಟ್ ನ ಕೆಳಗಡೆ ಮಡಚಲಾಗಿರುತ್ತದೆ. ಈ ಪ್ಯಾಂಟ್ ಧರಿಸಿ ಶರ್ಟ್ ಅಥವಾ ಟಿ ಶರ್ಟ್ ಧರಿಸಿ ಕಾಲುಗಳಿಗೆ ಶೂ ಅಥವಾ ಚಪ್ಪಲಿ ಹಾಕಿದರೆ ತುಂಬಾ ಆಕರ್ಷಕವಗಿ ಕಾಣುವಿರಿ.

 ಬ್ಲೋಟೆಡ್ ಕ್ಯಾಪ್ರಿ ಪ್ಯಾಂಟ್

ಇದನ್ನು ಜೋಧ್ ಪುರಿ ವಿನ್ಯಾಸದಲ್ಲಿ ಹೊಲಿಯಲಾಗಿರುತ್ತದೆ. ಇತಂಹ ಪ್ಯಾಂಟ್ ನಲ್ಲಿ ಬಟನ್ ಬದಲು ದಾರವಿದ್ದು ನಮ್ಮ ದೇಹದ ಅಳತೆಗೆ ತಕ್ಕ ಬಿಗಿ ಅಥವಾ ಸಡಿಲ ಮಾಡಿಕೊಳ್ಳಬಹುದು.

   ಸುಹಾನಿ ಬಡೆಕ್ಕಿಲ.

 

Tags

Related Articles

Leave a Reply

Your email address will not be published. Required fields are marked *