ಆರೋಗ್ಯಆಹಾರಜೀವನ ಶೈಲಿ

ಜೀರಿಗೆ ಬೆಲ್ಲದ ನೀರು ಕುಡಿಯಿರಿ, ಹಲವು ರೋಗದಿಂದ ಮುಕ್ತಿ ಪಡೆಯಿರಿ

ಜೀರಿಗೆ ಹಾಗೂ ಬೆಲ್ಲ ಇಲ್ಲದ ಮನೆಯಿಲ್ಲ. ಅಡುಗೆ ಮನೆಯಲ್ಲಿರುವ ಜೀರಿಗೆ ಹಾಗೂ ಬೆಲ್ಲ ಕೇವಲ ಆಹಾರದ ರುಚಿಯನ್ನು ಮಾತ್ರ ಹೆಚ್ಚಿಸುವುದಲ್ಲ. ಬದಲಿಗೆ ಆರೋಗ್ಯಕ್ಕೂ ಒಳ್ಳೆಯದು‌.

ಜೀರಿಗೆ ಬೆಲ್ಲದ ನೀರು ಕುಡಿಯುವುದರಿಂದ ಆರೋಗ್ಯಕ್ಕೂ ಒಳ್ಳೆಯದು‌. ಮಾತ್ರವಲ್ಲ ಸರ್ವರೋಗಗಳನ್ನು ನಿವಾರಿಸುವ ಶಕ್ತಿ ಜೀರಿಗೆ ಬೆಲ್ಲದ ನೀರಿಗಿದೆ.

ಜೀರಿಗೆ ಬೆಲ್ಲದ ನೀರನ್ನು ಪ್ರತಿದಿನ ಕುಡಿದರೆ ರಕ್ತಹೀನತೆ ಸಮಸ್ಯೆ ಕಡಿಮೆಯಾಗುತ್ತದೆ. ಇದರ ಜೊತೆಗೆ ರಕ್ತದಲ್ಲಿರುವ ಕಲ್ಮಶವನ್ನು ಈ ನೀರು ಹೊರ ಹಾಕುತ್ತದೆ. ಜ್ವರವನ್ನು ಕಡಿಮೆ ಮಾಡುವ ಜೀರಿಗೆ ಬೆಲ್ಲದ ನೀರು ತಲೆ ನೋವಿನ ಸಮಸ್ಯೆಯನ್ನು ನಿವಾರಿಸುತ್ತದೆ.

ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತಿರುವ ಇದು  ಹೊಟ್ಟೆ ರೋಗಕ್ಕೆ ರಾಮಬಾಣ. ಮಲಬದ್ಧತೆ, ಗ್ಯಾಸ್, ಹೊಟ್ಟೆ ನೋವು ಸೇರಿದಂತೆ ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವ ಅನೇಕ ಸಮಸ್ಯೆಗೆ ಜೀರಿಗೆ ಬೆಲ್ಲದ ನೀರು ಅತ್ಯುತ್ತಮ ಮನೆ ಮದ್ದು.

ಮುಟ್ಟಿನ ಸಮಯದಲ್ಲಿ ಕಂಡು ಬರುವ ಹೊಟ್ಟೆನೋವಿಗೂ ಇದು ಒಳ್ಳೆಯ ಮದ್ದು. ಇದರ ಜೊತೆಗೆ ಜೀರಿಗೆ ಬೆಲ್ಲದ ನೀರು ಸೇವಿಸುತ್ತ ಬಂದರೆ ಎಲ್ಲ ನೋವು ಶಮನವಾಗುತ್ತದೆ.

ಜೀರಿಗೆ ಬೆಲ್ಲದ ನೀರು ಮಾಡುವುದು ಹೇಗೆ? 

ಒಂದು ಪಾತ್ರೆಗೆ ಎರಡು ಲೋಟ ನೀರನ್ನು ಹಾಕಿ. ಅದಕ್ಕೆ ಒಂದು ಚಮಚ ಬೆಲ್ಲ ಹಾಗೂ ಒಂದು ಚಮಚ ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ನೀರನ್ನು ಕುಡಿಯಿರಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಒಳ್ಳೆಯದು.

Image result for jeera and jaggery water benefits

ಹೂವು ಚೆಲುವೆಲ್ಲಾ ನಂದೆಂದಿತು

#jeerawater #jeeraadvantages #balkaninews #jaggery #jaggeryadvantages #jaggeryandjeerawater

Tags