ಆರೋಗ್ಯಆಹಾರಜೀವನ ಶೈಲಿ

ಚಮತ್ಕಾರಿ ಜ್ಯೂಸ್ ಸೇವಿಸಿ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಿ

ಬೆಂಗಳೂರು, ಜ.06: ಇಂದಿನ ಒತ್ತಡದ ಜೀವನ ಶೈಲಿಯ ಉಡುಗೊರೆ ಎಂಬಂತೆ ನಮ್ಮ ಮುಖದ ಕಾಂತಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಬರುತ್ತದೆ. ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಮಾರುಕಟ್ಟೆಯಲ್ಲಿ ದುಬಾರಿಯಾದ ಕ್ರೀಂಗಳು, ಫೇಸ್ ಪ್ಯಾಕ್‍ಗಳು, ಬ್ಯೂಟಿ ಪಾರ್ಲರ್ ಗಳಲ್ಲಿ ಬ್ಯೂಟಿಶಿಯನ್‍ ಗಳು ಹೇಳುವ ನಾನಾ ಬಗೆಯ ಟಿಪ್ಸ್‍ ಗಳನ್ನು ಅನುಷ್ಠಾನಕ್ಕೆ ತಂದರೂ, ವಿವಿಧ ಪ್ರಕಾರಗಳ ಚಿಕಿತ್ಸೆಗಳನ್ನು ಮಾಡಿಕೊಂಡರೂ ಮುಖದ ಅಂದ ಬದಲಾವಣೆ ಕಾಣಲಿಲ್ಲ ಎಂಬುದು ಎಲ್ಲಾ ಹೆಣ್ಣು ಮಕ್ಕಳ ದೂರು.

ಕೆಲವೊಮ್ಮೆ ಚಿಕಿತ್ಸೆ ಹಾಗೂ ಪಾಲಿಸಿದ ಬ್ಯೂಟಿ ಟಿಪ್ಸ್‍ ಗಳ ಪರಿಣಾಮವಾಗಿ ತಾತ್ಕಾಲಿಕವಾಗಿ ಮುಖದ ಕಾಂತಿ ವೃದ್ಧಿಸಿದರೂ ಹೆಚ್ಚು ದಿನ ಉಳಿಯುವುದಿಲ್ಲ. ದೀರ್ಘಕಾಲದವರೆಗೆ ಮುಖದ ಕಾಂತಿಯನ್ನು ಉಳಿಸಿಕೊಳ್ಳಬೇಕೆಂದರೆ ನಿತ್ಯ ಬಳಸುವ ತರಕಾರಿಗಳನ್ನು ಬಳಸಿ. ಹೌದು ತರಕಾರಿಗಳಿಂದಲೂ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಈ ಚಮತ್ಕಾರಿ ಜ್ಯೂಸ್‍ ನಿಂದಾಗಿ ಚಮತ್ಕಾರಿಕವಾಗಿ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.

Image result for carrot, orange, beetroot, tomato juiceಅಗತ್ಯವಾದ ಪದಾರ್ಥಗಳು:

ಕ್ಯಾರೆಟ್‍-2, ಕಿತ್ತಲೆ ಹಣ್ಣು-1, ಬೀಟ್ ರೂಟ್‍-1, ಟೊಮ್ಯಾಟೊ-1, ನಿಂಬೆರಸ-1 ಚಮಚ, ಶುಂಠಿ ರಸ-1 ಚಮಚ.

ಮಾಡುವ ವಿಧಾನ:

ಮೇಲೆ ತಿಳಿಸಿದ ಎಲ್ಲಾ ತರಕಾರಿಗಳನ್ನು ನುಣ್ಣಗಡ ರುಬ್ಬಿ, ಶೋಧಿಸಿಕೊಳ್ಳಿ. ಅದಕ್ಕೆ ನಿಂಬೆರಸ ಮತ್ತು ಶುಂಠಿರಸವನ್ನು ಸೇರಿಸುವುದರಿಂದ ರುಚಿಕರ ಮತ್ತು ಸುಲಭವಾದ ಚಮತ್ಕಾರಿ ಜ್ಯೂಸ್‍ ಕುಡಿಯಲು ಸಿದ್ಧ.

ತರಕಾರಿಗಳಲ್ಲಿರುವ ನಾನಾ ಬಗೆಯ ವಿಟಮಿನ್‍ ಮತ್ತು ಪ್ರೊಟೀನ್‍ ಗಳು ಚರ್ಮದ ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಕ್ಯಾರೆಟ್‍ ನಲ್ಲಿ ವಿಟಮಿನ್‍ ಸಿ, ಕಿತ್ತಲೆ ಹಣ್ಣಿನಲ್ಲಿ ಸಿಟ್ರಿಕ್‍ ಆಸಿಟ್‍, ಬೀಟ್‍ ರೂಟ್ ನಲ್ಲಿ ಟಾಕ್ಸಿನ್‍, ನಿಂಬೆರಸದಲ್ಲಿ ಆಂಟಿಬಯೋಟಿಕ್‍ ಅಂಶಗಳು ಇವೆ. ಇವು ರಕ್ತವನ್ನು ಶುದ್ಧೀಕರಿಸಿ ಮೊಡವೆ, ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. ಅಲ್ಲದೇ, ಚರ್ಮಕ್ಕೆ ಹೊಳಪು ನೀಡುತ್ತದೆ. ಹಾಗಾದರೆ ಇಂದೇ ಟ್ರೈ ಮಾಡಿ ಚಮತ್ಕಾರಿ ಜ್ಯೂಸ್‍.

Image result for carrot, orange, beetroot, tomato juice

Tags