ಜೀವನ ಶೈಲಿಫ್ಯಾಷನ್

ಕಾಲುಂಗುರ ಧರಿಸುವ ಮಹತ್ವವೇನು?

ಭಾರತೀಯ ಸಂಪ್ರದಾಯಗಳು ನಿಜಾಗಿಯೂ ಆಸಕ್ತಿಯಾಗಿವೆ. ಭಾರತೀಯ ನಾರಿ ಎಂದ ತಕ್ಷಣ ಮುಂದೆ ಬರುವುದು ಸೀರೆಯಟ್ಟ ನಾರಿಯ ಚಿತ್ರ ಮಾತ್ರವಲ್ಲ. ಆಕೆಯುಟ್ಟ ತೊಡುಗೆ ಕೂಡ, ಕೈಯಂದಕ್ಕೆ ಕೈ ಬಳೆ, ಹಣೆಯಂದಕ್ಕೆ ಬಿಂದಿ, ಕಣ‍್ಣಿಗೆ ಕಾಡಿಗೆ, ಆಕೆಯ ನೀಳ ಜಡೆಗೊಂದು ಮಲ್ಲಿಗೆ, ಕಾಲಿಗೊಂದು ಕಾಲ್ಗೆಜ್ಜೆ. ಇನ್ನೂ ಆಕೆ ವಿವಾಹಿತೆಯಾದರೆ ಅಂದದ ಕಾಲಿಗೊಂದು ಕಾಲುಂಗುರ ಹಾಗೂ ಕುತ್ತಿಗೆಗೊಂದು ಮಂಗಳಸೂತ್ರ ಇದುವೇ ಹೆಣ‍್ಣಿಗೆ ಭೂಷಣ. ಇದು ಈಗಷ್ಟೇ ಬಂದ ಸಂಪ್ರದಾಯವಲ್ಲ, ಈ ಸಂಪ್ರದಾಯ ಅನಾದಿಕಾಲದಿಂದಲೂ ಬಂದಿದೆ. ಹಾಗಾಗಿ ಕಾಲುಂಗುರ ಧರಿಸುವುದಕ್ಕೂ ಏನಾದರೂ ಕಾರಣ ಇದ್ದೇ ಇರುತ್ತದೆ.

Image result for ring toe

ನಮ್ಮ ಭಾರತದಲ್ಲಿ ಮಹಿಳೆಯರು ಕಾಲುಂಗುರ ಹಾಗೂ ಮಂಗಳಸೂತ್ರ ಧರಿಸಿದ್ದು ಕಂಡರೆ ಆಕೆ ವಿವಾಹಿತೆ ಎಂದು ಗರುತಿಸಲ್ಪಡುತ್ತಾರೆ. ಆಕಗೆ ಇರುವ ಗೌರವವೇ ಬೇರೆ, ಕಾಲುಂಗುರವನ್ನು ಕಾಲಿನ ಎರಡನೇ ಬೆರಳಿಗೆ ಧರಿಸುವ ಕ್ರಮ. ಮದುವೆಯ ದಿನದಂದು ಅತ್ತೆ ಅಥವಾ ಮದುಮಗ ಶಾಸ್ತ್ರ ಪ್ರಕಾರ ಕಾಲುಂಗುರ ತೊಡಿಸುತ್ತಾರೆ. ಕಾಲುಂಗುರ ಧರಿಸುವ ಸಂಪ್ರದಾಯ ರಾಮಾಯಣ ಕಾಲದಿಂದಲೇ ಇತ್ತು.  ಸೀತೆಯನ್ನು ರಾವಣನು ಅಪಹರಿಸಿದಾಗ ಆಕೆ ತನ್ನ ಕಾಲುಂಗುರವನ್ನು ದಾರಿಯಲ್ಲಿ ಎಸೆದಳು. ಆದ್ದುರಿಂದ ರಾಮನಿಗೆ ಸೀತೆಯನ್ನು ಸುಲಭವಾಗಿ ಪತ್ತೆ ಹಚ್ಚಲು ಕಾರಣವಾಯಿತು.

Related image

ಈಗ ಕಾಲುಂಗುರಗಳು ಹೆಚ್ಚಾಗಿ ಫ್ಯಾಶನ್ ಗಾಗಿ ತೊಡುತ್ತಾರೆ. ಮೊದಲೆಲ್ಲಾ ವಿವಾಹಿತರು ಮಾತ್ರ ಕಾಲುಂಗುರಗಳ‍ನ್ನು ಧರಿಸುತ್ತಿದ್ದರು ಆದರೆ ಈಗ ಹಾಗಿಲ್ಲ ಕನ್ಯೆಯರು ಕೂಡ ತೊಡುತ್ತಾರೆ, ಅವರಲ್ಲಿ ಅದರ ಮಹತ್ವ ಕೇಳಿದರೆ ಹೆಚ್ಚಿನವರಿಗೆ ಅದರ ಬಗ್ಗೆ ತಿಳಿದಿರುವುದಿಲ್ಲ. ಏನೇ ಕೇಳಿದರು ಫ್ಯಾಷನ್ ಎಂಬ ಹಾರಿಕೆ ಉತ್ತರ ನೀಡಿ ಬೀಡುವವರೇ ಜಾಸ್ತಿಯೆಂದರೆ ತಪ್ಪಾಗಲಾರದು. ಮದುವೆಯ ನಂತರ ಕಾಲುಂಗುರ ಏಕೆ ಧರಿಸಬೇಕು? ಇದರ ಮಹತ್ವವೇನು? ಹೀಗೆ ಅನೇಕ ಪ್ರಶ್ನೆಗಳು ನಮ್ಮ ಮನದಲ್ಲಿ ಕಾಡುತ್ತಾ ಇರುತ್ತದೆ.

ಕಾಲುಂಗುರ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಮತ್ತು ಗರ್ಭಕೋಶ ರಕ್ತ ಖಾತ್ರಿ ಪಡಿಸಿಕೊಳ‍್ಳುವ ಮೂಲಕ ಆರೋಗ್ಯಕರ ಇಡುತ್ತದೆ. ಕಾಲುಂಗುರಗಳನ್ನು ಬೆಳ‍್ಳಿಯಿಂದ ಮಾಡಲ್ಪಟ್ಟಿದ್ದು  ಇದು ಉತ್ತಮ ವಾಹಕವಾಗಿದೆ. ಹೀಗಾಗಿ ಆಂತರಿಕ ವ್ಯವಸ್ಥೆಯ ಕಾಂತಿ ವರ್ಧಿಸುವ ಭೂಮಿಯ ಧ್ರುವ ಶಕ್ತಿಯನ್ನು ಹೀರಿಕೊಳ‍್ಳಲು ದೇಹಕ್ಕೆ ಸಹಾಯ ಮಾಡುತ್ತದೆ. ಬಂಗಾಳಿ ವಿವಾಹಿತ ಮಹಿಳೆಯರು ಲ್ಯಾಕ್ ಉಂಗುರಗಳನ್ನು ಧರಿಸುತ್ತಾರೆ. ಅಲಂಕರಿಸಿದ ಕಾಲುಂಗುರಗಳನ್ನು ಸಾಮಾನ್ಯವಾಗಿ ವಿಶೇಷ ಸಂದರ್ಭಗಳಲ್ಲಿ ಧರಿಸಲಾಗುತ್ತದೆ. ಈಗಿನ ಕಾಲದಲ್ಲಿ ಹೆಚ್ಚಿನವರು ಚಿನ್ನದ ಕಾಲುಂಗುರಗಳನ್ನು ಧರಿಸಿ ಶೋಭಿಸುತ್ತಾರೆ. ಅದಲ್ಲದೆ ನಾನಾ ರೀತೀಯ ವಿನ್ಯಾಸದಲ್ಲೂ ಕಾಲುಂಗುರಗಳು ಮಾರುಕಟ್ಟೆಯನ್ನು ಇಂದು ಆಳುತ್ತಿವೆ.

‘ಪ್ರಾರಂಭ’ಕ್ಕಾಗಿ ಬಣ್ಣದ ಕುಂಚ ಹಿಡಿದ ಮನೋರಂಜನ್

Tags

Related Articles