ಆರೋಗ್ಯಜೀವನ ಶೈಲಿ

ದಾಹ ನೀಗುವ ಕಬ್ಬಿನಹಾಲ್ಲಿನಲ್ಲೂ ಇದೆ ಔಷಧೀಯ ಗುಣ!

ಕುಡಿಯಲು ಸಿಹಿಕರವಾದ ಕಬ್ಬಿನಹಾಲು ಆರೋಗ್ಯಕ್ಕೂ ಕೂಡಾ ಅಷ್ಟೇ ಸಿಹಿ! ಅಂಗಡಿಗಳಲ್ಲಿ ಸಿಗುವ ನಾನಾ ನಮೂನೆಯ ಬಾಟಲಿಗಳಲ್ಲಿ ಸಿಗುವ ತಂಪು ಪಾನೀಯ ಆರೋಗ್ಯವನ್ನು ಮತ್ತಷ್ಟು ಹಾಳು ಮಾಡುತ್ತದೆ. ಅದನ್ನು ಕುಡಿದರೆ ಒಂದು ನಿಮಿಷ ಹಾಯ್ ಎನಿಸಬಹುದು ನಿಜ, ಆದರೆ ಅದರಿಂದ ದೇಹಕ್ಕೇನಾದರೂ ಅಡ್ಡ ಪರಿಣಾಮಗಳಾದರೆ ಮತ್ತೆ ಅದನ್ನು ನಾವೇ ಅನುಭವಿಸಬೇಕು. ಅದರ ಬದಲಿಗೆ ಬಾಯಾರಿದಾಗ ಒಂದು ಗ್ಲಾಸ್ ತಾಜಾ ಕಬ್ಬಿನಹಾಲು ಕುಡಿದರೆ ಸಾಕು, ದಾಹವೂ ನೀಗುತ್ತದೆ, ಮಾತ್ರವಲ್ಲ ಆರೋಗ್ಯ ಹಾಳಾದೀತು ಎಂಬ ಆತಂಕವೂ ಇಲ್ಲ.

ಕಬ್ಬಿನ ಹಾಲು ಅದು ಹೇಗೆ ಆರೋಗ್ಯಕರ, ಅದರಿಂದ ದೇಹಕ್ಕಾಗುವ ಪ್ರಯೋಜನಗಳೇನು ಎಂಬುದನ್ನು ನಾವಿಂದು ನೋಡೋಣ.

* ಕಬ್ಬಿನ ಹಾಲು ದೇಹಕ್ಕೆ ಚೈತನ್ಯ ನೀಡುತ್ತದೆ. ಇದರ ಜೊತೆಗೆ ಮಾನಸಿಕ ಒತ್ತಡವನ್ನು ನಿವಾರಿಸುವಲ್ಲಿ ಕಬ್ಬಿನಹಾಲು ಸಹಕಾರಿ.

Image result for kabbina haalu

* ಕಾಮಾಲೆ ರೋಗದಿಂದ ಬಳಲುತ್ತಿರುವವರಿಗೆ ವೈದ್ಯರು ಮೊದಲು ಕಬ್ಬಿನಹಾಲು ಕುಡಿಯಿರಿ ಎಂಬ ಸಲಹೆ ನೀಡುತ್ತಾರೆ! ಕಾಮಾಲೆ ರೋಗ ವಾಸಿಯಾಗಲು ಕಬ್ಬಿನಹಾಲಿಗಿಂತ ಉತ್ತಮ ಮದ್ದು ಬೇರಿಲ್ಲ! ಕಾಮಾಲೆ ರೋಗ ಆಲಿಯಾಸ್ ಜಾಂಡೀಸ್ ಇರುವವರು ದಿನಕ್ಕೊಂದು ಲೋಟ ಕಬ್ಬಿನಹಾಲನ್ನು ಕಡ್ಡಾಯವಾಗಿ ಕುಡಿಯಲೇ ಬೇಕು. ಇದರಿಂದ ಯಕೃತ್‌ ತನ್ನ ಹಿಂದಿನ ಸ್ಥಿತಿಯನ್ನು ಪಡೆಯಲು ನೆರವಾಗುತ್ತದೆ. ಇದರ ಜೊತೆಗೆ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ.

* ಮೂತ್ರ ಸೋಂಕು ಸಮಸ್ಯೆ ಇರುವವರು ಕಬ್ಬಿನ ರಸ ಕುಡಿದರೆ ನಿವಾರಣೆಯಾಗುತ್ತದೆ. ಜೊತೆಗೆ ಮೂತ್ರ ಪಿಂಡದಲ್ಲಿ ಕಲ್ಲಿನ ಸಮಸ್ಯೆ ಇರುವವರು ಕಬ್ಬಿನ ಹಾಲು ಕುಡಿದರೆ ಸಾಕು. ಉತ್ತಮ ಪ್ರಯೋಜನವಿದೆ.

* ತೂಕ ಕಡಿಮೆ ಮಾಡಿಕೊಳ್ಳುವವರೂ ಅಹ ನಿರಾಂತಕವಾಗಿ ಕಬ್ಬಿನ ಜ್ಯೂಸ್‌ ಕುಡಿಯಬಹುದು. ಇದರಲ್ಲಿ ಹೇರಳವಾಗಿರುವ ಪ್ರಮಾಣದಲ್ಲಿರುವ ನೈಸರ್ಗಿಕ ಸಕ್ಕರೆ ಕೊಬ್ಬು ಕರಗಿಸುವಲ್ಲಿ ಸಹಕಾರಿ.

* ಇದರ ಜೊತೆಗೆ ಬಾಣಂತಿಯರ ಎದೆಹಾಲು ಹೆಚ್ಚಲು ಕಬ್ಬಿನ ಹಾಲು ಅತ್ಯುತ್ತಮ ಪಾನೀಯ.

ರಾಜಕೀಯದಿಂದ ದೂರ ಇಳಿದ ಅಜಯ್ ದೇವಗನ್

#kabbinahaalu #health #aarogya

 

Tags