ಆರೋಗ್ಯಆಹಾರಜೀವನ ಶೈಲಿ

ಬಡವರ ಬಾದಾಮಿ ‘ಕಡಲೇಕಾಯಿ’ಯ ಆರೋಗ್ಯ ಪುರಾಣ

ಮಳೆಗಾಲ ಮುಗಿದಿದೆ. ಚಳಿಗಾಲ ಸದ್ದಿಲ್ಲದೇ ಕಾಲಿಡತೊಡಗಿದೆ. ಚುಮುಚುಮು ಚಳಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಸವಾಲಿನ ಸಂಗತಿ. ಅದರಲ್ಲೂ ಆರೋಗ್ಯ ವೃದ್ಧಿಸುವಂತಹ ಆಹಾರ ಸೇವಿಸಬೇಕಾದುದು ಮುಖ್ಯ. ಚಳಿಗಾಲದಲ್ಲಿ ಆರೋಗ್ಯಕ್ಕೆ ಅಗತ್ಯವಿರುವಂತಹ ಪೋಕಾಂಶಗಳನ್ನು ಒದಗಿಸುವ ಪೈಕಿ ಕಡಲೆಕಾಯಿಯೂ ಒಂದು.
ಬಡವರ ಬಾದಾಮಿ ಅರ್ಥಾತ್ ಶೇಂಗಾ ಬೀಜ ಎಂದು ಕರೆಯಲ್ಪಡುವ ಕಡಲೆಕಾಯಿಯ ಹೆಚ್ಚಿನ ಪ್ರಯೋಜನಗಳನ್ನು ನಾವಿಂದು ತಿಳಿಯೋಣ.

Image result for ಶೇಂಗಾ ಬೀಜ

ದ್ವಿದಳ ಧಾನ್ಯವಾಗಿರುವ ಕಡಲೆಕಾಯಿಯಲ್ಲಿ ಅಗಾಧ ಪ್ರಮಾಣದ ಪ್ರೋಟಿನ್ ಗಳಿವೆ. ಮಾತ್ರವಲ್ಲದೇ ಇದರಲ್ಲಿರುವ ಆಕ್ಸಿಡೆಂಟ್ ಗಳು ಮತ್ತು ಖನಿಜಗಳಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು. ಜೊತೆಗೆ ಒಂದು ಹಿಡಿ ಕಡಲೇ ಬೀಜವನ್ನು ಸೇವಿಸುವುದರ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Image result for ಶೇಂಗಾ ಬೀಜ

ಇನ್ನು ಇದರಲ್ಲಿರುವ ಸತುವಿನ ಪ್ರಮಾಣವು ಮೆದುಳಿನ ಕಾರ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿ. ಇದರಿಂದಾಗಿ ಸ್ಮರಣಶಕ್ತಿಯು ಉತ್ತಮಗೊಳ್ಳುತ್ತದೆ. ಖಿನ್ನತೆಯಿಂದ ಹೊರಬರಲು ನೆರವಾಗುವ ಕಡಲೇ ಕಾಯಿಯು ಪಿತ್ತಕೋಶದ ಕಾಯಿಲೆಯಿಂದ ದೇಹವನ್ನು ಕಾಪಾಡುತ್ತದೆ. ಜೊತೆಗೆ ಪಿತ್ತಕೋಶದಲ್ಲಿ ಕಂಡುಬರುವ ಕಲ್ಲಿನ ಸಮಸ್ಯೆಗೆ ಇದು ಉತ್ತಮ ಮದ್ದು.

Image result for ಕಡಲೇಕಾಯಿ

ಇತ್ತೀಚಿನ ದಿನಗಳಲ್ಲಿ ಪಿತ್ತಕೋಶದ ಕಲ್ಲುಗಳ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಜಾಸ್ತಿಯಾಗಿದೆ. ಅದರ ಅರಿವಾಗುವುದು ಅದು ಉಲ್ಬಣಗೊಂಡ ನಂತರ ಮಾತ್ರ. ಶೇಂಗಾ ಬೀಜ ಅರ್ಥಾತ್ ಕಡಲೇಕಾಯಿಯ ಸೇವನೆಯಿಂದ ಪಿತ್ತಕೋಶದಲ್ಲಿ ಕಲ್ಲುಗಳಾಗುವುದನ್ನು ತಪ್ಪಿಸಬಹುದು. ಪಿತ್ತಕೋಶದಲ್ಲಿ ಕಲ್ಲುಗಳಾಗುವುದಕ್ಕೆ ಕೊಲೆಸ್ ರಾಲ್ ಮತ್ತು ಕೊಬ್ಬು ಮುಖ್ಯ ಕಾರಣ. ಕಡಲೇಕಾಯಿಯಲ್ಲಿರುವ ಪೋಕಾಂಶಗಳು ಕೊಲೆಸ್ಆಲ್ ನಿವಾರಿಸಿತ್ತದೆ ಮತ್ತು ಪಿತ್ತಕೋಶದಲ್ಲಿ ಕಲ್ಲುಗಳಾಗುವುದನ್ನು ತಡೆಯುತ್ತದೆ.

Image result for ಕಡಲೇಕಾಯಿ

ರೋಗ ನಿರೋಧಕ ಶಕ್ತಿ ಹೆಚ್ಚಿರುವ ಕಡಲೇಕಾಯಿಯ ಸೇವನೆಯಿಂದ ಶೀತ, ಕೆಮ್ಮನ್ನು ಗುಣಪಡಿಸಬಹುದು. ಇದರಿಂದಾಗಿ ದೇಹಕ್ಕೆ ಅಗತ್ಯವಿರುವಂತಹ ವಿಮಿನ್ ಸಿ ಕೂಡ ದೊರೆಯುತ್ತದೆ. ಕೊಲೆಸ್ಆಲ್ ಮ ವನ್ನು ಸಮತೋಲನದಲ್ಲಿರಿಸಲು ಕಡಲೇಕಾಯಿಯು ಸಹಕಾರಿಯಾಗಿದೆ. ಇದರಲ್ಲಿರುವ ಓಲಿಕ್ ಆಮ್ಲ ಕೆ ಕೊಲೆಸ್ ಆಲ್ ಮ ವನ್ನು ಕಡಿಮೆಗೊಳಿಸಿ ಒಳ್ಳೆಯ ಕೊಲೆ ಮ ವನ್ನು ಹೆಚ್ಚಿಸುವ ಮೂಲಕ ದೇಹದಲ್ಲಿನ ಕೊಲೆಸ್ಆಲ್ ಮ ವನ್ನು ಸಮತೋಲನದಲ್ಲಿರಿಸುತ್ತದೆ.

ಕಡಲೇ ಬೀಜದಲ್ಲಿರುವ ಮ್ಯಾಂಗನೀಸ್ ಅಂಶವು ದೇಹವನ್ನು ಮಧುಮೇಹದಿಂದ ರಕ್ತ ಇಳಿಸುತ್ತದೆ. ಹಾಗಾಗಿ ಶೆಂಗಾ ಬೀಜ ಸೇವನೆಯಿಂದ ಮಧುಮೇಹವನ್ನು ನಿಯಂತ್ರಣದಲ್ಲಿರಿಸಬಹುದಾಗಿದೆ.

ಇನ್ನು ಇದರಲ್ಲಿ ಫೋಲಿಕ್ ಅಂಶವು ಅಧಿಕವಾಗಿದ್ದು ಗರ್ಭಿಣಿ ಮಹಿಳೆಯರು ಇದನ್ನು ಸೇವಿಸಲೇ ಬೇಕು. ಇದರಿಂದ ಗರ್ಭದಲ್ಲಿರುವ ಶಿಶು ಆರೋಗ್ಯಕರ ಬೆಳವಣಿಗೆಯನ್ನು ಪಡೆಯಲು ಸಹಾಯವಾಗುತ್ತದೆ. ಹಾಗಾಗಿ ಮಹಿಳೆಯರು ಗರ್ಭ ಧರಿಸಿದ ನಂತರ ಕಡಲೇ ಬೀಜವನ್ನು ಸೇವಿಸಿದರೆ ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಇಂತಿಪ್ಪ ಬಹುಪಯೋಗಿ ಕಡಲೇಕಾಯಿಯು ಆರೋಗ್ಯದ ಜೊತೆಗೆ ತ್ವಚೆಗೂ ಒಳ್ಳೆಯದು. ಕಡಲೇಕಾಯಿಯ ಸೇವನೆಯಿಂದ ತ್ವಚೆಗೆ ಅಗತ್ಯವಿರುವಂತಹ ಆರ್ದ್ರತೆ ದೊರಕುವುದು ಮಾತ್ರವಲ್ಲದೇ ತ್ವಚೆಗೆ ಸಂಬಂಧಿಸಿದ ಇತರ ಪೋಷಣೆಯು ನೀಡುತ್ತದೆ. ಇದರ ಪರಿಣಾಮವಾಗಿ ತ್ವಚೆಯ ಕಾಂತಿ ಹೆಚ್ಚುವುದು. ಜೊತೆಗೆ ತ್ವಚೆಯ ಆರೋಗ್ಯವು ವೃದ್ಧಿಯಾಗುತ್ತದೆ.
ಸವಿಯಲು ರುಚಿಯಾಗಿರುವ ಬಡವರ ಬಾದಾಮಿಯ ಪ್ರಯೋಜನಗಳ ಬಗ್ಗೆ ಇದೀಗ ತಿಳಿದಾಯಿತು.

ಇನ್ನು ಕಡಲೇಕಾಯಿಯನ್ನು ಸೇವಿಸಿ ಆರೋಗ್ಯ ವೃದ್ಧಿಸಿಕೊಳ್ಳುವುದೊಂದೇ ಬಾಕಿ. ಎಲ್ಲಾ ಕಡೆ ಸುಲಭವಾಗಿ ಸಿಗುವ, ಅಗ್ಗವೂ ಆಗಿರುವ ಶೇಂಗಾ ಬೀಜ ತಿನ್ನಿ, ಚುಮು ಚುಮು ಚಳಿಗಾಲದಲ್ಲಿಯೂ ಸದೃಢ ಆರೋಗ್ಯ ನಿಮ್ಮದಾಗಿಸಿ.

ಅನಿತಾ ಬನಾರಿ

ಆರ್ ಸಿಬಿ ಗೆಲುವಿಗೆ “ಕರ್ನಾಟಕ ಈಸ್ ಹ್ಯಾಪಿ’ ಎಂದ ರೋರಿಂಗ್ ಸ್ಟಾರ್!!

#kadalebeeja, #healthtips, #balkaninews

Tags