ಆಹಾರಜೀವನ ಶೈಲಿ

ಒಂದೇ ಒಂದು ಚಿಟಿಕೆ ಸಾಕು ಕಾಶ್ಮೀರಿ ಕೇಸರಿ… ದಿವ್ಯೌಷಧ

ಸಾಮಾನ್ಯವಾಗಿ ಹಾಲು, ಅಡುಗೆಗೆ ಕೇಸರಿಯನ್ನು ಬಳಸುತ್ತಾರೆ. ನಮ್ಮಲ್ಲಿ ಅದನ್ನು ಬಿಡಿಯಾಗಿ ಬಳಸುವುದು ತುಂಬಾ ಅಪರೂಪ. ಮುಖ್ಯವಾಗಿ ಕೇಸರಿಯನ್ನು ಕೊಳ್ಳುವಾಗ ಅದರ ಶುದ್ಧತೆಯನ್ನು ಪರೀಕ್ಷಿಸಬೇಕು. ಇಂದು ಮಾರುಕಟ್ಟೆಯಲ್ಲಿ ಅಸಲಿ ಎಂದು ಹೇಳುವ ಹಲವಾರು ನಕಲಿ ಬ್ರ್ಯಾಂಡ್‌ಗಳಿವೆ. ಅವನ್ನು ತಿನ್ನುವುದರಿಂದ ಲಾಭಕ್ಕಿಂತ ನಷ್ಟವೇ ಅಧಿಕ. ಒಂದೇ ಒಂದು ಚಿಟಿಕೆ ಕೇಸರಿಯನ್ನು ತಿನ್ನುವುದರಿಂದ ಏನೆಲ್ಲಾ ಲಾಭ ಇದೆ ಎಂದು ನೋಡಿ.

* ಒಂದು ಚಿಟಿಕೆ ಕೇಸರಿಯಲ್ಲಿ ಉತ್ತಮವಾದ ಆರೋಗ್ಯ ಗುಣಗಳಿವೆ. ತ್ವಚೆಯ ಆರೈಕೆ, ಜೀರ್ಣ ಕ್ರಿಯೆಗೆ ಸಹಾಯ, ಹುಣ್ಣುಗಳನ್ನು ಗುಣಪಡಿಸಲು ಹೀಗೆ ಅನೇಕ ಸಮಸ್ಯೆಗಳಿಗೆ ಔಷಧ ರೂಪದಲ್ಲಿ ಕೇಸರಿಯನ್ನು ಬಳಸಬಹುದು.

* ಕೇಸರಿ ಟೀ ದೇಹವನ್ನು ಶುದ್ಧೀಕರಿಸುತ್ತದೆ. ಇದು ಹೊಟ್ಟೆಯ ಹುಣ್ಣು, ಜಠರದ ಉರಿ, ಎದೆ ಉರಿ ಮತ್ತು ಕರುಳಿನ ಅಸ್ವಸ್ಥತೆಗಳನ್ನು ಸಹ ನಿವಾರಿಸುತ್ತದೆ.

* ಕೇಸರಿಯಲ್ಲಿರುವ ಕ್ಯಾರೊಟಿನೈಡ್‌ ಕಣ್ಣುಗಳನ್ನು ರಕ್ಷ ಣೆ ಮಾಡುತ್ತದೆ. ಕಣ್ಣಿಗಳ ಆರೋಗ್ಯಕ್ಕೆ ಅಗತ್ಯವಿರುವ ವಿಟಮಿನ್‌ ಎ ಇದರಲ್ಲಿದೆ. ಕೇಸರಿ ಕಣ್ಣಿನ ಪೊರೆಯನ್ನು ತಡೆಯುತ್ತದೆ ಮತ್ತು ಸೂರ್ಯನ ಹಾನಿಕಾರಕ ಕಿರಣಗಳಿಂದ ಕಣ್ಣುಗಳಿಗೆ ರಕ್ಷಣೆ ನೀಡುತ್ತದೆ.

* ಕೇಸರಿಯಲ್ಲಿನ ಎರಡು ಪ್ರಮುಖ ಸಕ್ರಿಯ ಪದಾರ್ಥಗಳು ಕ್ರೋಸಿನ್‌ ಮತ್ತು ಸಫ್ರಾನಲ್‌ ದೇಹದ ಗೆಡ್ಡೆಯ ಬೆಳವಣಿಗೆಯನ್ನು ತಡೆಯುತ್ತದೆ. ಇದು ಅಂಡಾಶಯ, ಯಕೃತ್‌ ಮತ್ತು ಕರುಳಿನ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ.

* ನೋವುಂಟು ಮಾಡುವ ಮತ್ತು ರಕ್ತಸ್ರಾವದ ಒಸಡುಗಳು ಇದ್ದರೆ, ಕೇಸರಿಯನ್ನು ಸೇವಿಸಬೇಕು. ಇದು ಉರಿಯೂತವನ್ನು ಶಮನಗೊಳಿಸುವುದು.

* ಕೇಸರಿ ಚಹಾ ಕುಡಿಯುವುದರಿಂದ ರಾತ್ರಿ ವೇಳೆಯ ನಿದ್ರೆಗೆ ಸಹಾಯ ಮಾಡುತ್ತದೆ. ಖಿನ್ನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

Tags