ಆರೋಗ್ಯಆಹಾರಜೀವನ ಶೈಲಿ

ಕಿಡ್ನಿಯಲ್ಲಿನ ಕಲ್ಲು ಕರಗಿಸಲು ನೈಸರ್ಗಿಕ ವಿಧಾನಗಳು

ನೈಸರ್ಗಿಕ ವಿಧಾನಗಳು

ಈಗೀಗ ಅತ್ಯಂತ ಕಾಡುತ್ತಿರುವ ತೊಂದರೆಗಳಲ್ಲಿ ಕಿಡ್ನಿ ಕಲ್ಲು ಸಹ ಒಂದು. ನಮ್ಮ ಆಹಾರ, ಅಭ್ಯಾಸಗಳು ಬದಲಾಗಿರುವುದೇ ಇದಕ್ಕೆ ಕಾರಣ.

ಕಿಡ್ನಿ ಕಲ್ಲು ಎಂದರೆ ಜನ ಭಯಬೀಳುವಂತಾಗಿದೆ. ಆಪರೇಷನ್ ಮಾಡಿಸಲೇಬೇಕೇನೋ ಎಂದುಕೊಳ್ಳುತ್ತಾರೆ. ಸುಮಾರು 5 ಮಿ.ಲೀ.ಗಿಂತ ಕಡಿಮೆ ಇರುವ ಕಿಡ್ನಿ ಕಲ್ಲುಗಳನ್ನು ನೈಸರ್ಗಿಕ ವಿಧಾನದಿಂದ ಕರಗಿಸಿಕೊಳ್ಳಬಹುದು. ಅದು ಹೇಗೆ ಅಂತ ನೋಡೋಣ.

ಕಿಡ್ನಿಯಲ್ಲಿ ಕಲ್ಲು ಉಂಟಾಗಲು ಮುಖ್ಯ ಕಾರಣ:

⦁ ಹೆಚ್ಚಿನ ಕಾಲ ಕ್ಯಾಲ್ಸಿಯಂ ಗುಳಿಗೆಗಳನ್ನು ಬಳಸಿದರೆ ಅವು ಕ್ಯಾಲ್ಸಿಯಂ ಆಕ್ಸಲೇಟ್ ಆಗಿ ಬದಲಾಗಿ ಕಲ್ಲಾಗುತ್ತದೆ. ಕ್ಯಾಲ್ಸಿಯಂ, ಫಾಸ್ಪರಸ್, ಫಾಸ್ಪೇಟ್, ಆಕ್ಸಿಲೇಟ್ ರಸಾಯನಗಳುಳ್ಳ ಆಹಾರ ತಿಂದರೂ ಮೂತ್ರಪಿಂಡದಲ್ಲಿ ಕಲ್ಲು ಏರ್ಪಡುತ್ತದೆ.

⦁ ಒಂದು ಚಮಚ ಮೆಂತ್ಯೆಯನ್ನು ನೀರಿನಲ್ಲಿ ನೆನೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದರಿಂದ ಕಿಡ್ನಿಯಲ್ಲಿರುವ ಕಲ್ಲು ಕರಗುವುದಷ್ಟೇ ಅಲ್ಲದೆ, ಶರೀರದಲ್ಲಿನ ವಿಷ ಪದಾರ್ಥಗಳು ಹೊರಹೋಗುತ್ತವೆ.

⦁ ಒಂದು ಚಮಚೆ ತುಳಸಿ ಎಲೆ ರಸದಲ್ಲಿ ಅಷ್ಟೇ ಪ್ರಮಾಣದ ಜೇನುತುಪ್ಪ ಬೆರೆಸಿ ಪ್ರತಿದಿನ ಮುಂಜಾನೆ ಸೇವಿಸಬೇಕು. ಕನಿಷ್ಟ ಆರು ತಿಂಗಳು ಹೀಗೆ ಮಾಡಿದರೆ ಕಿಡ್ನಿ ಕಲ್ಲುಗಳು ಕರಗುತ್ತವೆ.

⦁ ಬೇವಿನ ಎಲೆಯನ್ನು ಸುಟ್ಟು ಬೂದಿ ಮಾಡಿ ಹೊತ್ತಿಗೆ ಒಂದೂವರೆ ಗ್ರಾಂನಷ್ಟು ಒಂದು ದಿನ ಹಾಗೇ ಇಟ್ಟು ನೀರಿನಲ್ಲಿ ಬೆರೆಸಿ ಎರಡು ಹೊತ್ತು ಕುಡಿದರೂ ಕಲ್ಲು ಕರಗುತ್ತದೆ.

 

⦁ ಕೊತ್ತಂಬರಿ ಹಾಕಿ ಕುದಿಸಿದ ನೀರನ್ನು ಕುಡಿದರೂ ಕಿಡ್ನಿಯಲ್ಲಿನ ಕಲ್ಲುಗಳು ದೂರವಾಗುತ್ತವೆ.

 

 

 

 

⦁ ಸೂರ್ಯಕಾಂತಿ ಗಿಡದ ಬೇರಿನ ಪುಡಿ ಒಂದು ಚಮಚೆಯ ಲೀಟರ್ ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು.

 

 

 

 

⦁ ಅರ್ಧ ಕೆ.ಜಿ ಹೆಸರುಬೇಳೆಯನ್ನು ಲೀಟರ್ ನೀರಿನಲ್ಲಿ ಕುದಿಸಿ ಮೇಲೆ ತೇಲುವ ನೀರನ್ನು ಕುಡಿದರೂ ಕಲ್ಲು ಹೊರಹೋಗುತ್ತದೆ.

 

 

 

ಗೋರಂಟಿ ಬೀಜಗಳು 1 ರಿಂದ 2 ಗ್ರಾಂ ಪ್ರತಿದಿನ ಮುಂಜಾನೆ ಶುದ್ಧವಾದ ನೀರಿನೊಂದಿಗೆ ಬೆರೆಸಿ ಕುಡಿದರೆ ಕಲ್ಲು ಕರಗುತ್ತದೆ.

ಹೀಗೆ ನೈಸರ್ಗಿಕವಾಗಿಯೇ ಈ ಕಿಡ್ನಿಯಲ್ಲಿನ ಕಲ್ಲನ್ನು ಕರಗಿಸಬಹುದು

Tags