18+ಜೀವನ ಶೈಲಿಬಾಲ್ಕನಿಯಿಂದಲುಕ್ಸ್ಸಂಬಂಧಗಳು

ಕಿಸ್ ಮಾಡಿ…ಕೊಲೆಸ್ಟ್ರಾಲ್  ನಿಯಂತ್ರಿಸಿಕೊಳ್ಳಿ…!!

ನೀವು ಚುಂಬಿಸಿದಾಗ ನಿಮ್ಮ ದೇಹದಲ್ಲಿನ ಅನಾರೋಗ್ಯಕರವಾದ ಹೆಚ್ಚುವರಿ ಕ್ಯಾಲೊರಿಗಳೂ ದಹಿಸಲ್ಪಡುತ್ತವೆ ..!!

 

ಬೆಂಗಳೂರು, ಸೆ-8: ಒಂದು ವೇಳೆ ನೀವು ಇನ್ನೂ ಚುಂಬನದ ಅಭ್ಯಾಸ ಹೊಂದಿರದೇ ಇದ್ದಲ್ಲಿ ಈ ಅಭ್ಯಾಸವನ್ನು ಇಂದಿನಿಂದಲೇ ಪ್ರಾರಂಭಿಸಲು ಒಂದಲ್ಲ ಎರಡಲ್ಲ,ಹಲವು ಮಾಹಿತಿಗಳು ಖಂಡಿತಾ ನೆರವಾಗಲಿದೆ…

ಇದರಿಂದ ಉದ್ವೇಗ ಕಡಿಮೆಯಾಗುತ್ತದೆ ನಿಮಗೆ ಉದ್ವೇಗಕ್ಕೊಳಗಾಗುವ ತೊಂದರೆ ಇದೆಯೇ? ಅಥವಾ ನಿಮ್ಮ ಮನದಲ್ಲಿರುವ ಒತ್ತಡ ಮತ್ತು ಉದ್ವೇಗಗಳನ್ನು ನಿಭಾಯಿಸಲು ನಿಮ್ಮಿಂದ ಆಗುತ್ತಿಲ್ಲವೇ? ಹಾಗಾದರೆ ನೀವು ಚುಂಬನದ ನೆರವನ್ನೇಕೆ ಪಡೆಯಬಾರದು?

ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟವನ್ನು ಉತ್ತಮಗೊಳಿಸುತ್ತದೆ 2009ರಲ್ಲಿ ನಡೆಸಿದ ಒಂದು ಅಧ್ಯಯನದಲ್ಲಿ ನಿಯಮಿತವಾಗಿ ಚುಂಬನದಲ್ಲಿ ಪಾಲ್ಗೊಳ್ಳುವ ದಂಪತಿಗಳ ರಕ್ತಪರೀಕ್ಷೆಯಲ್ಲಿ ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟ ಆರೋಗ್ಯಕರ ಮಿತಿಗಳಲ್ಲಿದ್ದುದು ಕಂಡುಬಂದಿದೆ. ಹೃದ್ರೋಗಗಳು ಆವರಿಸುವ ಸಾಧ್ಯತೆ ಈ ಮಟ್ಟಗಳ ಏರುಪೇರಿನಿಂದ ಹೆಚ್ಚುತ್ತದೆ. ಈ ಮಟ್ಟಗಳು ಆರೋಗ್ಯಕರ ಮಿತಿಯಲ್ಲಿದ್ದಷ್ಟೂ ಆರೋಗ್ಯವೂ ಉತ್ತಮವೇ ಅಗಿರುತ್ತದೆ.

ಚುಂಬನದಲ್ಲಿ ಮುಖದ ಎರಡರಿಂದ ಮೂವತ್ತನಾಲ್ಕು ಸ್ನಾಯುಗಳು ಬಳಸಲ್ಪಡುತ್ತವೆ. ಅಷ್ಟೇ ಅಲ್ಲ, ಚುಂಬನದ ಮೂಲಕ ಅನಾರೋಗ್ಯಕರವಾದ ಹೆಚ್ಚುವರಿ ಕ್ಯಾಲೋರಿಗಳೂ ದಹಿಸಲ್ಪಡುತ್ತವೆ. ಚುಂಬನದ ತೀವ್ರತೆಯನ್ನು ಅನುಸರಿಸಿ ಪ್ರತಿನಿಮಿಷಕ್ಕೆ ಸುಮಾರು ಎರಡರಿಂದ ಆರು ಕ್ಯಾಲೋರಿಗಳು ದಹಿಸಲ್ಪಡುತ್ತವೆ.  ವಾಸ್ತವವಾಗಿ ಆರು ಕ್ಯಾಲೋರಿಗಳು ಅಂದರೆ ಅಲ್ಪ ಪ್ರಮಾಣವೇ ಆಗಿದ್ದರೂ ಈ ಅಲ್ಪ ಪ್ರಮಾಣವನ್ನು ದಹಿಸುವ ಸಮಯದಲ್ಲಿ ಪಡೆಯುವ ಆನಂದಕ್ಕೆ ಎಣೆಯಿರಲಾರದು. ಮುಖದ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ದೊರಕುವ ಜೊತೆಗೇ ಮುಖದ ಚರ್ಮದ ಅಡಿಯಲ್ಲಿ ಕೊಲ್ಯಾಜೆನ್ ಕಣಗಳನ್ನು ಹೆಚ್ಚು ಉತ್ಪಾದಿಸಲು ಪ್ರಚೋದನೆ ದೊರಕುತ್ತದೆ. ತನ್ಮೂಲಕ ಮುಖದ ತ್ವಚೆ ಹೆಚ್ಚು ತಾರುಣ್ಯ ಮತ್ತು ಆರೋಗ್ಯದಿಂದ ಕಂಗೊಳಿಸುತ್ತವೆ.

ಚುಂಬನ ಲೈಂಗಿಕ ಭಾವನೆಯನ್ನು ಭುಗಿಲೇಳಿಸುವಲ್ಲಿ, ಲೈಂಗಿಕ ಆಸಕ್ತಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪುರುಷರಲ್ಲಿ ಲೈಂಗಿಕ ಕಾಮನೆಗೆ ಅಗತ್ಯವಾದ ಟೆಸ್ಟಾಸ್ಟೆರೋನ್ ಎಂಬ ರಸದೂತ ಲಾಲಾರಸದಲ್ಲಿಯೂ ಇರುತ್ತದೆ. ಚುಂಬನದ ಸಮಯದಲ್ಲಿ ಹೆಚ್ಚು ಹೆಚ್ಚು ಲಾಲಾರಸ ಉತ್ಪಾದನೆಯಾಗುತ್ತದೆ ಹಾಗೂ ಈ ಮೂಲಕ ಹೆಚ್ಚುವ ಲೈಂಗಿಕ ಆಸಕ್ತಿ ಇನ್ನೂ ಹಲವಾರು ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ದಂಪತಿಗಳ ನಡುವಣ ನಿಯಮಿತ ಲೈಂಗಿಕ ಕ್ರಿಯೆಯ ಮೂಲಕ ಪುರುಷರ ದೇಹದಲ್ಲಿ IgA ಅಥವಾ Immunoglobulin A ಎಂಬ ರಸದೂತ ಹೆಚ್ಚು ಹೆಚ್ಚು ಉತ್ಪತ್ತಿಯಾಗುತ್ತದೆ ಹಾಗೂ ಈ ರಾಸಾಯನಿಕ ಹೆಚ್ಚಿದ್ದಷ್ಟೂ ರೋಗ ನಿರೋಧಕ ಶಕ್ತಿ ಉತ್ತಮವಾಗಿರುತ್ತದೆ ಹಾಗೂ ಹಲವಾರು ರೋಗಗಳಿಂದ ರಕ್ಷಣೆ ಒದಗಿಸುತ್ತದೆ.

ಇದರ ಜೊತೆಗೇ ಚುಂಬನ ಹೃದಯದ ಆರೋಗ್ಯವನ್ನು ವೃದ್ದಿಸುವ ಒಂದು ವ್ಯಾಯಾಮವೂ ಆಗಿದ್ದು ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ ಹಾಗೂ ಕಾಲು ಮತ್ತು ಬೆನ್ನು ನೋವಿನಿಂದಲೂ ರಕ್ಷಣೆ ಒದಗಿಸುತ್ತದೆ. ಅಲ್ಲದೇ ಮೈಗ್ರೇನ್ ತಲೆನೋವು ಮತ್ತು ಮಹಿಳೆಯರಿಗೆ ಮಾಸಿಕ ಸೆಳೆತಗಳಿಂದಲೂ ಪರಿಹಾರ ಒದಗಿಸುತ್ತದೆ.

Cholesterol plaque in artery

 

Tags