ಜೀವನ ಶೈಲಿಫ್ಯಾಷನ್ಸುದ್ದಿಗಳುಸೌಂದರ್ಯ

ಬಂದೇ ಬಿಡ್ತು ಗೋಕುಲಾಷ್ಟಮಿ

ಭಾರತದಲ್ಲಿ ಪ್ರಮುಖವಾದ ಹಬ್ಬಗಳಲ್ಲಿ ಕೃಷ್ಣ ಜನ್ಮಾಷ್ಟಮಿಯೂ ಕೂಡ ಒಂದು. ಕೃಷ್ಣ ಹುಟ್ಟಿದ ದಿನವನ್ನು ಗೋಕುಲಾಷ್ಟಮಿ ಎಂಬ ಹೆಸರಿನಿಂದ ಭಾರತದೆಲ್ಲೆಡೆ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ.

ಇದೇ ಆಗಸ್ಟ್ 24ರಂದು ಗೋಕುಲಾಷ್ಟಮಿ ಹಬ್ಬವಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ಬಗೆ ಬಗೆಯ ಕೊಳಲು, ತೊಟ್ಟಿಲು, ನವಿಲು ಗರಿ, ಕೃಷ್ಣನ ಆಟಿಕೆಗಳು ತುಂಬಿ ತುಳುಕಾಡುತ್ತಿವೆ.Related image

ಹಳೆಯ ಕೊಳಲನ್ನು ಬಳಸಿಕೊಂಡು ಅದಕ್ಕೆ ಕಲರ್ ಕಲರ್ ಪೇಪರ್ಸ್ ಹಾಗೂ ಬಣ್ಣಗಳ ಮೂಲಕ ನಿಮಗೆ ಇಷ್ಟವಾಗುವಂತೆ ಕೊಳಲನ್ನು ಸಿಂಗರಿಸಬಹುದು. ಇಷ್ಟೇ ಅಲ್ಲದೇ ತಮ್ಮ ಮಗುವನ್ನು ಕೃಷ್ಣನಂತೆ ರೆಡಿ ಮಾಡಿಸಿ ಮನೆಯ ತುಂಬ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡಿಸುತ್ತಾರೆ. ಇದರ ಜೊತೆಗೆ ಕೃಷ್ಣನಿಗೆ ಇಷ್ಟವಾಗುವ ತಿನಿಸುಗಳನ್ನು ಮಾಡಿರುತ್ತಾರೆ. ಕೃಷ್ಣ ಜನ್ಮಾಷ್ಟಮಿ ಬೆಂಗಳೂರಿನ ಇಸ್ಕಾನ್ ದೇವಸ್ಥಾನದಲ್ಲಿ ಅದ್ದೂರಿಯಾಗಿ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಕೃಷ್ಣನಿಗೆ ಇಷ್ಟವಾದ ಮೊಸರು ಕುಡಿಕೆಯನ್ನು ಇಡಲಾಗಿರುತ್ತದೆ.

Related imageಕೃಷ್ಣಜನ್ಮಾಷ್ಟಮಿಯ ದಿನದಂದು, ಮನೆ ಮತ್ತು ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಗುತ್ತದೆ. ಕೃಷ್ಣನ ವಿಗ್ರಹಗಳನ್ನು ವಿಧವಿಧವಾಗಿ ಅಲಂಕರಿಸಿ, ಬಗೆಬಗೆಯ ತಿಂಡಿಗಳನ್ನು ಮಾಡಿ ಬಾಲ ಕೃಷ್ಣನನ್ನು ಪೂಜಿಸಲಾಗುತ್ತದೆ. ಕೆಲವು ಕಡೆ, ಮಧ್ಯರಾತ್ರಿಯವರೆಗೆ ಉಪವಾಸವಿದ್ದು, ನಂತರ ಆಹಾರ ಸ್ವೀಕರಿಸುವ ಸಂಪ್ರದಾಯವಿದೆ. ಉಡುಪಿಯಲ್ಲಿ ಗೋಕುಲಾಷ್ಟಮಿಯನ್ನು ಅದ್ದೂರಿಯಾಗಿ  ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ.

ಇಷ್ಟೇ ಅಲ್ಲದೇ ಶಾಲೆಯಲ್ಲಿ ಪುಟ್ಟ ಪುಟ್ಟ ಮಕ್ಕಳು ರಾಧೆ ಹಾಗೂ ಕೃಷ್ಣನ ಫ್ಯಾನ್ಸಿ ಡ್ರಸ್ ಗಳಲ್ಲಿ ಮುದ್ದು ಮುದ್ದಾಗಿ ಕಾಣುತ್ತಾರೆ. ಇನ್ನೇಕೆ ತಡ ನೀವು ಕೂಡ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿ ಕೃಷ್ಣ ಕೃಪೆಗೆ ಪಾತ್ರರಾಗಿ.

Image result for krishna janmashtami images

ಶುಭ ಸಮಾರಂಭಕ್ಕೆ ಬೇಕೇ ಬೇಕು ಚೆಂಡು ಹೂ

#krishnajanmashtami #krishnajanmashtamidecorations #krishnajanmashtamiimages #iskon

 

Tags