ಜೀವನ ಶೈಲಿಫ್ಯಾಷನ್

ಅಟ್ಟದ ಮೇಲಿನ ಪುಟ್ಟ ಲಕ್ಷ್ಮೀ

ಭಾರತೀಯ ಮಹಿಳೆಯರ ಸಿಂಗಾರವನ್ನು ಕಂಡರೆ   ಹಣೆಯ ಮೇಲಿರುವ ಪು಼‍ಟ್ಟ ಸಿಂಧೂರದ ಬೊಟ್ಟು‘ಅಟ್ಟದ ಮೇಲಿನ ಪುಟ್ಟ ಲಕ್ಷ್ಮೀ’ ಎಂಬ ಗಾದೆಗೆ ಉತ್ತರವಾದ ಈ ಕುಂಕುಮ ಬೊಟ್ಟು ಸುಮಾರು ಐದು ಸಾವಿರಕ್ಕೂ ಹೆಚ್ಚಿನ ವರ್ಷಗಳಿಂದ ಭಾರತೀಯ ಮಹಿಳೆಯರ ಅಲಂಕಾರವನ್ನು ಹೆಚ್ಚಿಸುತ್ತಾ  ಬಂದಿದೆ. ಕುಂಕುಮದ ಚಿಕ್ಕ ಬೊಟ್ಟು ಕೇವಲ ಆಕರ್ಷಣೀಯ  ಮಾತ್ರಲ್ಲ, ಭಾರತೀಯ ಮಹಿಳೆಯ ಸಾಮಾಜಿಕ ಸ್ಥಾನಮಾನವನ್ನು ಸೂಚಿಸುವ ಸಂಕೇತವಾಗಿದೆ.

ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ  ಸ್ಫರ್ಧೆ ಮತ್ತು ‍‍‍‍ಫ್ಯಾಶನ್ ಲೋಕದಲ್ಲಿಯೂ ಭಾರತದ ಮಹಿಳೆಯರ ಹಣೆಯನ್ನು ಅಲಂಕರಿಸುವ ಮೂಲಕ ಭಾರತದ ಸಂಕೇತವನ್ನು ವಿಶ್ವಮಟ್ಟಲ್ಲಿ ಪಸರಿಸಿದೆ.

ಅಂದಿನ ಕಾಲದಲ್ಲಿ ಎಲ್ಲಾ ಮಹಿಳೆಯರು ಹಣೆಯ ಮೇಲೆ ಕುಂಕುಮದ ಅಚ್ಚನ್ನು ಇಟ್ಟು ಅದರಲ್ಲಿ ಕುಂಕುಮ ಹಾಕಿ ಶೋಭಿಸುತ್ತಿದ್ದರು .ಆದರೆ ಈಗಿನ ಫ್ಯಾಶನ್ ಯುಗದಲ್ಲಿ ಕುಂಕುಮದ ಬದಲು ಸ್ಟಿಕ್ಕರ್ ಗಳದ್ದೆ ಕಾರುಬಾರು.ನಾನರೀತಿಯ  ಮ್ಯಾಚಿಂಗ್ ಸ್ಟಿಕ್ಕರ್ ಗಳು ವಿವಿಧ ರೀತಿಯ ಆಕಾರಗಳಲ್ಲಿ ದೊರೆಯುತ್ತವೆ. ಆದರೆ ಈಗಿನ ಹೆಚ್ಚಿನ ಮಹಿಳೆಯರು ಸಿಂಧೂರ ಇಲ್ಲದೆ ಓಡಾಡುತ್ತಾರೆ ಅದೇ ಒಂದು ಫ್ಯಾಶನ್ ಆಗಿ ಬಿಟ್ಟಿದೆ.

ಹಿಂದೂ ಧರ್ಮದ ಬಹುತೇಕ ಎಲ್ಲಾ ಧಾರ್ಮಿಕ ವಿಧಿಗಳಲ್ಲಿ ಕುಂಕುಮ ಒಂದು ಅನಿವಾರ್ಯ ಸಾಮಾಗ್ರಿಯಾಗಿದೆ. ಅಂತೆಯೇ ಇದು ಪವಿತ್ರವೂ ಆಗಿದೆ. ಕೆಂಪು ಬಣ‍್ಣ ವಾಸ್ತವವಾಗಿ ಶಕ್ತಿಯ ಪ್ರತೀಕವಾಗಿದೆ. ಸಿಂಧೂರ ಅಥವಾ ಬಿಂದಿ ಪದ ಸಂಸ್ಕ್ರತದ ‘ಬಿಂದು’ ಪದದಿಂದ ಬಂದಿದೆ. ಬಿಂದು ಎಂದರೆ ಕನ್ನಡದಲ್ಲಿ ಚುಕ್ಕೆ ಎಂದರ್ಥ .ಇದಕ್ಕೆ ತಿಲಕ, ತಿಲಾಕ, ತಿಲಕಂ, ಟೀಕಾ ಅಥವಾ ಬೊಟ್ಟು ಎಂದು ಕರೆಯುತ್ತಾರೆ. ಈಗಿನ ಆಧುನಿಕ ಯುಗದಲ್ಲಿ ಮಹಿಳೆಯರು ತಮ್ಮ ಸೌಂದರ್ಯ ವೃದ್ದಿಸಲೆಂದು ಕುಂಕುಮದ ಬದಲಾಗಿ ಮಾರುಕಟ್ಟೆಲ್ಲಿ ಸಿಗುವ ಬಣ‍್ಣ ಬಣ‍್ಣದ ಬೊಟ್ಟುಗಳನ್ನು ಬಳಸುತ್ತಾರೆ. ಆದರೆ ಕುಂಕುಮ ಧರಿಸಿದ ವಿವಾಹಿತ ಮಹಿಳೆಯನ್ನು ಈ ಸಮಾಜ ಗೌರವ ದೃಷ್ಟಿಯಲ್ಲಿ ಕಾಣುತ್ತದೆ. ಫ್ಯಾಶನ್ ಜಗತ್ತು ಎಷ್ಟೆ ಬದಲಾಗಲಿ ಆದರೆ ಸಿಂಧೂರದ ಮಹತ್ವ ಈಗಲೂ  ಹಾಗೆಯೇ ಇದೆ.

  • ಸುಹಾನಿ ಬಡೆಕ್ಕಿಲ.

 

 

Tags