ಆರೋಗ್ಯಆಹಾರಜೀವನ ಶೈಲಿ

ಮುಟ್ಟಿನ ಸಮಯದಲ್ಲಿ ಈ ಆಹಾರಗಳನ್ನು ಸೇವಿಸುವಾಗ ಜಾಗ್ರತೆಯಿರಲಿ…!

ಬೆಂಗಳೂರು, ಮೇ.12:

ಮುಟ್ಟಿನ ಸಮಯದಲ್ಲಿ ಅದೆಷ್ಟು ಜಾಗ್ರತೆ ವಹಿಸಿದರೂ ಸಾಲದು. ಆ ಸಮಯದಲ್ಲಿ ಕೆಲವೊಂದು ಆಹಾರಗಳನ್ನು ಸೇವಿಸುವಾಗ ಎಚ್ಚರ ವಹಿಸಬೇಕಾದುದು ಅಗತ್ಯ. ಯಾಕೆಂದರೆ ಆ ಸಮಯದಲ್ಲಿ  ನೋವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಮುಟ್ಟಿನ ಸಮಯದಲ್ಲಿ ಯಾವುದೆಲ್ಲಾ ಆಹಾರಗಳಿಂದ ದೂರವಿರಬೇಕು ಎಂಬುದನ್ನು ನಾವಿಂದು ತಿಳಿಯೋಣ.

ಮುಟ್ಟಿನ ಸಮಯದಲ್ಲಿ ಹಾಲಿನ ಉತ್ಪನ್ನಗಳನ್ನು ಆದಷ್ಟು ದೂರ ಇರಿಸಿದರೆ ಒಳ್ಳೆಯದು. ಯಾಕೆಂದರೆ ಹಾಲಿನ ಉತ್ಪನ್ನಗಳನ್ನು ಅಧಿಕವಾಗಿ ಸೇವಿಸುವುದರಿಂದ ಕಿಬ್ಬೊಟ್ಟೆಯ ಸ್ನಾಯುಗಳ ಸೆಳೆತ  ಜಾಸ್ತಿಯಾಗುವುದು. ಇನ್ನು ಮುಖ್ಯವಾದ ವಿಚಾರವೆಂದರೆ ಕೊಬ್ಬಿನಾಂಶ ಇರುವ ಆಹಾರಗಳನ್ನು ಸೇವಿಸಲೇಬಾರದು.  ಕೊಬ್ಬಿನಂಶವಿರುವ ಆಹಾರ ತಿಂದರೆ ಪ್ರೋಸ್ಟಾಗ್ಲಾಂಡಿನ್ಸ್‌ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ಗರ್ಭಕೋಶ ಕುಗ್ಗುತ್ತದೆ. ಮತ್ತು ಇದರಿಂದ ಹೊಟ್ಟೆನೋವು ಕೂಡಾ ಜಾಸ್ತಿಯಾಗುತ್ತದೆ.

ಸಂಸ್ಕರಿಸಿದ ಆಹಾರ ಹಾಗೂ ಅಧಿಕ ಉಪ್ಪಿನಂಶವಿರುವ ಆಹಾರಗಳನ್ನು ಸಾಧ್ಯವಾದಷ್ಟು ದೂರವಿಡಿ. ಇದರಿಂದ ಹೊಟ್ಟೆ ನೋವಿನ ಸಮಸ್ಯೆಗೆ ಗುಡ್ ಬೈ ಹೇಳಬಹುದು. ಇನ್ನೂ ನೀವು ಕಾಫಿ ಪ್ರಿಯರಾಗಿದ್ದರೆ ಸ್ವಲ್ಪ ಜಾಗ್ರತೆ ವಹಿಸಲೇ ಬೇಕು. ಯಾಕೆಂದರೆ ಒಂದು ಲೋಟಕ್ಕಿಂತ ಹೆಚ್ಚು ಕಾಫಿ ಕುಡಿಯುವುದಿದ್ದರೆ ನೀವು ಆಲೋಚನೆ ಮಾಡಲೇ ಬೇಕು. ಅಧಿಕ ಕಾಫಿ ಕುಡಿದರೆ ಹೊಟ್ಟೆ ನೋವು ಮತ್ತಷ್ಟು ಹೆಚ್ಚಾಗುವ ಸಂಭವವಿದೆ.

ಇನ್ನು ಮುಟ್ಟಿನ ಸಮಯದಲ್ಲಿ ಸಕ್ಕರೆ ಹಾಗೂ ಸಿಹಿ ತಿಂಡಿಯನ್ನು ತಿನ್ನದಿರುವುದು ಒಳಿತು. ಸಕ್ಕರೆ ಮತ್ತು ಸಿಹಿ ತಿಂಡಿಯನ್ನು ಸೇವಿಸುವುದರಿಂದ ದೇಹದಲ್ಲಿನ ಸಕ್ಕರೆ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗುವುದು ಮಾತ್ರವಲ್ಲ ಇದರಿಂದಾಗಿ ಸುಸ್ತು ಹೆಚ್ಚಾಗುವುದು.

Image result for ladies periods time dont eat this foods

Image result for ladies periods time dont eat this foods

‘ಅರಮನೆ ಗಿಳಿ’ ಯಾಗಿ ‘ಪುನರ್ಜನ್ಮ’ ಪಡೆದ ‘ಗುಪ್ತಗಾಮಿನಿ’

#balkaninews #ladiesproblems #healthytips #periodtimes

Tags