ಆರೋಗ್ಯಆಹಾರಜೀವನ ಶೈಲಿ

ಕ್ಯಾನ್ಸರ್ ಗೆ ರಾಮಬಾಣ ಈ “ಲಕ್ಷಣಫಲ”

ಬೆಂಗಳೂರು, ಜ.10: ರಾಮಫಲ, ಸೀತಾಫಲ ಗೊತ್ತು. ಇದ್ಯಾವುದಪ್ಪಾ ಲಕ್ಷಣಫಲ ಎಂದು ಆಶ್ಚರ್ಯ ಪಡದಿರಿ. ಜನರು ಆಡು ಭಾಷೆಯಲ್ಲಿ ಇದನ್ನು ‘ಮುಳ್ಳು ಹಲಸಿನ ಹಣ್ಣು’ ಎಂದೂ ಕರೆಯುತ್ತಾರೆ. ಸಸ್ಯಶಾಸ್ತ್ರಜ್ಞರು ಗ್ರಾವಿಯೋಲಾ ಅಂತಾರೆ. ನೋಡಲು ಹಲಸಿನ ಹಣ್ಣಿನ ಥರ ಮೈಯೆಲ್ಲಾ ಮುಳ್ಳು ಮುಳ್ಳು ಇರುತ್ತೆ. ರುಚಿ ಮಾತ್ರ ಸ್ವಲ್ಪ ಉಪ್ಪುಪ್ಪು, ಸಿಹಿ ಹಾಗೂ ಸ್ವಲ್ಪ ಕಹಿ ಇರುತ್ತೆ. ಗಾತ್ರದಲ್ಲಿ ಸೀತಾಫಲಕ್ಕಿಂತ ದೊಡ್ಡದು ಮತ್ತು ರಾಮಫಲಕ್ಕಿಂತ ಚಿಕ್ಕದಾಗಿರುತ್ತದೆ.

  1. ಲಕ್ಷಣಫಲದ ಮೂಲ ದಕ್ಷಿಣ ಅಮೆರಿಕಾ ಮತ್ತು ದಕ್ಷಿಣ ಆಫ್ರಿಕಾದ ಕಾಡುಗಳು. ಭಾರತದಲ್ಲೂ ಹೇರಳವಾಗಿ ಕಂಡು ಬರುತ್ತದೆ. ಆದರೆ ಬಹುತೇಕ ಮಂದಿಗೆ ಈ ಹಣ್ಣಿನ ಪರಿಚಯ ಇರಲಿಕ್ಕೆ ಇಲ್ಲ. ಆದರೆ ಈ ಹಣ್ಣು ಅಪಾರವಾದ ಔಷಧೀಯ ಗುಣಗಳಿಂದ ಕೂಡಿದೆ ಎಂಬುದು ಇದುವರೆಗಿನ ಸಂಶೋಧನೆಗಳಿಂದ ತಿಳಿದುಬಂದಿದೆ.

2. ಲಕ್ಷಣಫಲ ಕ್ಯಾನ್ಸರ್ ಖಾಯಿಲೆಗೆ ರಾಮಬಾಣ ಎಂಬ ಸೋಜಿಗ ಸಂಗತಿಯನ್ನು ಸಂಶೋಧನೆಯು ಹೊರಹಾಕಿದೆ. ಲಕ್ಷಣಫಲದ ಜ್ಯೂಸ್‍ ಅಥವಾ ಹಣ್ಣನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ದೇಹಕ್ಕೆ ವಿಶೇಷವಾದ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ. ಈ ಹಣ್ಣಿನ ಸೇವನೆ ಕ್ಯಾನ್ಸರ್‍ ಚಿಕಿತ್ಸೆಯ ಕಿಮೋಥೆರಪಿಗಿಂತಲೂ ಪರಿಣಾಮಕಾರಿಯಾಗಿರುತ್ತದೆ.

3. ಕೇವಲ ಹಣ್ಣಲ್ಲದೇ ಲಕ್ಷಣಫಲ ಗಿಡದ ಎಲೆ, ತೊಗಟೆಗಳೂ ಕ್ಯಾನ್ಸರ್‍ ಗೆ ಔಷಧಿಯಾಗಬಲ್ಲ ವಿಶೇಷ ಗುಣವನ್ನು ಹೊಂದಿದೆ. ಈ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕ್ಯಾನ್ಸರ್‍ ರೋಗಿಗಳು ಮತ್ತಷ್ಟು ದಿನದ ಬದುಕನ್ನು ನೀಡುತ್ತದೆ ಎನ್ನಲಾಗಿದೆ.

4. ಈ ಹಣ್ಣನ್ನು ವಾಣಿಜ್ಯ ಉದ್ದೇಶಕ್ಕಾಗಿಯೂ ಬೆಳೆಯುವ ಪ್ರಯತ್ನ ಆರಂಭವಾಗಿದೆ. ಮಾರುಕಟ್ಟೆಯಲ್ಲಿ ಪ್ರಸ್ತುತ 1 ಕೆಜಿ ಹಣ್ಣಿಗೆ 400-500 ರೂ. ದರವಿದೆ. ಸಾಮಾನ್ಯವಾಗಿ ಒಂದು ವರ್ಷದಲ್ಲಿ ಗಿಡವೊಂದು ಕನಿಷ್ಠ 40-50 ಹಣ್ಣುಗಳನ್ನು ಮಾತ್ರವೇ ಬಿಡುತ್ತದೆ. ಕ್ಯಾನ್ಸರ್‍ ರೋಗ ನಿವಾರಣೆ ಮಾಡುವಲ್ಲಿ ಸಂಜೀವಿನಿಯಂತೆ ಕೆಲಸ ಮಾಡುತ್ತದೆ.

Related image

Image result for graviola fruit

#lakshmanapala #lakshmanapalaadvantages #healthytips #healthyfoods #balkaninews

Tags