ಜೀವನ ಶೈಲಿಫ್ಯಾಷನ್

ಫ್ಯಾಶನ್ ಲೋಕದಲ್ಲಿ ಲೆಹೆಂಗಾ!!

ಸೀರೆಯುಟ್ಟ ನಾರಿಯ ಚೆಲುವನ್ನು ನೋಡುವುದೇ ಚೆಂದ. ಭಾರತದಲ್ಲಿ ಮಾತ್ರ ಸೀರೆ ಔಟ್ ಆಫ್ ಫ್ಯಾಷನ್ ಆಗಿದ್ದಿಲ್ಲ. ಭಾರತೀಯ ನಾರಿ ಎಂದ ತಕ್ಷಣ ಕಣ‍್ಣ ಮುಂದೆ ಬರುವುದು ಸೀರೆಯನುಟ್ಟ ನಾರಿಯ ಚಿತ್ರ. ಸೀರೆಯು ನಮ್ಮ ಸಾಂಪ್ರದಾಯಿಕ ತೊಡುಗೆ.

ಅದೊಂದು ಹಾಫ್ ಸಾರಿಯ ಕಾಲವಿತ್ತು,  ಆಗ ಎಲ್ಲೆಲ್ಲೂ ನೋಡಿದರೂ ಹಾಫ್ ಸಾರಿಯದ್ದೇ ಕಾರುಬಾರು. ಆ ಫ್ಯಾಶನ್ ಮತ್ತೆ ಮರುಕಳಿಸಿದೆ. ಆದರೆ ಹೆಸರು ಮಾತ್ರ ಬದಲಾಗಿ ಲೆಹೆಂಗ ಸಾರಿ ಎಂದಾಗಿದೆ. ಇದು ನೋಡಲು ತುಂಬಾ ಸುಂದರ.ಅದರಲ್ಲಿ ಮಾಡಿದ ಕಸೂತಿ ಕೆಲಸವಂತೂ ಲೆಹೆಂಗ ಸೀರೆಯ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ   ಈಗ ಲೆಹೆಂಗ ಸೀರೆ ಎಲ್ಲರ ಕಣ್ಮನವನ್ನು ಸೆಳೆದಿದೆ. ಧಾರವಾಹಿ, ಸಿನಿಮಾ, ಮದುವೆ ಸಮಾರಂಭಗಳಲ್ಲಂತೂ ಅದೇ ಫ್ಯಾಶನ್ ಆಗಿ ಬಿಟ್ಟಿದೆ. ನಟಿ ಮಣೀಯರಂತೂ ಅದರಲ್ಲೇ ಜಗಮಗಿಸುತ್ತಾರೆ.ಲೆಹೆಂಗ ಸೀರೆ ಕೊಂಚ ದುಬಾರಿಯಾದರೂ ಎಲ್ಲರಿಗೂ ಅಚ್ಚುಮೆಚ್ಚು.ಉತ್ತರ ಭಾರತ ಮತ್ತು ಪಾಕಿಸ್ತಾನ ಒಂದು ಲೆಹೆಂಗ ಸೀರೆ ಮೇಲೆ ಕಸೂತಿ ಕೆಲಸ ಬಹಳಷ್ಟು ಮಾಡಲಾಗುತ್ತದೆ .

ಗುಜರಾತ್ ಮತ್ತು ರಾಜಸ್ಥಾನ ಗ್ರಾಮಾಂತರ ಮಹಿಳೆಯರು ಸಾಮಾನ್ಯವಾಗಿ ಲೆಹೆಂಗ ಜಿಪ್ಸಿ ಸ್ಕರ್ಟ್ ಒಂದು ರೂಪ ಧರಿಸುತ್ತಾರೆ. ಸಾಮಾನ್ಯವಾಗಿ ಈ ಉಡುಪುಗಳನ್ನು ವಿಶೇಷವಾಗಿ ರವಿಕೆ ಕನ್ನಡಿ ಕೆಲಸ ಮತ್ತು ಕಸೂತಿ ಅಲಂಕೃತವಾಗಿವೆ. ಈ ರವಿಕೆ ಮೇಲೆ ಅನೇಕ ಚೋಳಿಗಳನ್ನು ಕತ್ತರಿಸಿ ಜೋಡಿಸಿದಾಗ ಒಂದು ಅಪೇಕ್ಷಣೀಯ ನೋಟ ಹೆಚ್ಚು .

ದಕ್ಷಿಣದಲ್ಲಿ ಕಡಿಮೆ ಪ್ರಮಾಣದ ಲೆಹೆಂಗ ಸೀರೆಗಳು ಬಳಸಲಾಗುತ್ತದೆ . ಉತ್ತರದ ರಾಜ್ಯಗಳಲ್ಲಿ ಭಾರಿ ಗಾತ್ರದ ಫ್ಲಾರಿಂಗ್ ಲಂಗಗಳು, ಅರ್ಧ ಸೀರೆ ಧರಿಸುವುದು ಕುತ್ತಿಗೆಗೆ ವಸ್ತ್ರಧಾರಿ ಸ್ಕಾರ್ಫ್ ಜೊತೆಗೆ ಧರಿಸಲಾಗುತ್ತದೆ.

ಸೀರೆಯಲ್ಲಿ ಅನೇಕ ರೀತಿಯ ಸೀರೆಗಳಿವೆ. ಝರಿ ಸೀರೆ, ಕಾಟನ್ ಸೀರೆ, ಸಿಂತೆಟಿಕ್ ಸೀರೆ ಇತ್ಯಾದಿ.ಸೀರೆಯ ವಿನ್ಯಾಸದಲ್ಲಿ ಅನೇಕ ಸ್ಟೈಲ್ ಬರಬಹುದು ಆದರೆ ಸೀರೆಯನ್ನು ಹೀಗೆಯೇ ಉಡಬೇಕೆಂದಿಲ್ಲ ಯಾವ ಫ್ಯಾಶನ್ ನಲ್ಲಿ ಬೇಕಾದರೂ ಉಡಬಹುದು. ಸೀರೆಯಲ್ಲಿ ಕಂಫರ್ಟ್ ಆದ ಸೀರೆ ಕಾಟನ್ ಸೀರೆ. ಕಾಣಲು ಸರಳ ಹಾಗೂ ಸುಂದರ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಈ ಸೀರೆ ಉಪಯುಕ್ತ. ನೀಟಾಗಿ ಐರನ್ ಹಾಕಿ ಉಟ್ಟರೆ ಆಕರ್ಷಕವಾಗಿ ಕಾಣಬಹುದು. ಆಫೀಸ್ ಗೆ ಹೋಗುವಾಗ ಸರಳ ಸೀರೆ ಉಡಬಹುದು ಹಾಗೂ ಪಾರ್ಟಿ-ಸಮಾರಂಭಗಳಿಗೆ ಹೋಗುವಾಗ ಗ್ರ್ಯಾಂಡ್ ಸೀರೆ ಉಟ್ಟರೆ ಚೆನ್ನ.

ಇನ್ನು ತುಂಬಾ ಬೆಲೆ ಕೊಟ್ಟು ಖರೀದಿಸಿದ ಝರಿ ಸೀರೆ ಹಾಳಾದರೆ ತುಂಬಾ ಬೇಸರವಾಗುತ್ತೆ. ಎಂಬ್ರಾಯ್ಡರಿ, ಝರಿ ಇನ್ನಿತರ ದುಬಾರಿ ಸೀರೆಗಳು ತುಂಬಾ ಸೂಕ್ಷ್ಮ. ಅದರ ನಿರ್ವಹಣೆಯಲ್ಲಿ ಒಂದಿಷ್ಟು ವ್ಯತ್ಯಾಸವಾದರೂ ಲುಕ್ ಕಳೆದುಕೊಳ್ಳುತ್ತೆ. ಸಾಮಾನ್ಯವಾಗಿ ಬ್ಲೌಸ್ ಹಾಕಿ ಸೀರೆ ಉಡಲಾಗುವುದು. ಆದರೆ ಈಗ ಸೀರೆ ಉಟ್ಟು ಅದರ ಮೇಲೆ ಕೋಟ್ ರೀತಿಯ ಬ್ಲೌಸ್ , ಹಾಗೂ ಶಾಲ್ ರೀತಿಯಲ್ಲಿ ಕೂಡ ಹಾಕುವುದು ಈಗಿನ ಟ್ರೆಂಡ್ . ಸೀರೆಗೆ  ತಕ್ಕಂತೆ ಮೇಕಪ್ ಮಾಡಿದರೆ ಪಾರ್ಟಿ-ಸಮಾರಂಭಗಳಲ್ಲಿ ಸುಂದರವಾಗಿ ಕಾಣಿಸಬಹುದು. ಈಗೇನಿದ್ದರೂ ಫ್ಯಾಶನ್ ಲೋಕ ಹೊಸ ಹೊಸ  ಫ್ಯಾಶನ್ ಬಂದರೂ ಮತ್ತೆ ಹಳೆ ಫ್ಯಾಶನ್ ಮರುಕಳಿಸುವುದರಲ್ಲಿ ಸಂಶಯವಿಲ್ಲ.

 

  • ಸುಹಾನಿ ಬಡೆಕ್ಕಿಲ.

 

 

Tags

Related Articles

Leave a Reply

Your email address will not be published. Required fields are marked *