ಜೀವನ ಶೈಲಿಸೌಂದರ್ಯ

ನಿಮ್ಮ ತ್ಜಚೆ ಥಳ ಥಳ ಹೊಳೆಯಬೇಕೇ..? ನಿಂಬೆ ಹಣ್ಣಿಗೆ ಶರಣಾಗಿ..!

ಬಾಹ್ಯ ಹಾಗೂ ಆಂತರಿಕ ಸೌಂದರ್ಯ ಹೆಚ್ಚಿಸುವ  ಗುಣ ಹೊಂದಿರುವ ನಿಂಬೆ

ಬೆಂಗಳೂರು, ಆ.25: ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಮಂದಿ, ಸದಾ ಇದಕ್ಕಾಗಿ ಏನಾದರೊಂದು  ಕಸರತ್ತು ಮಾಡುತ್ತಲೇ ಇರುತ್ತಾರೆ. ಕೆಲವರು ಮನೆಮದ್ದಿಗೆ ಮೊರೆ ಹೋದರೆ, ಮತ್ತೆ ಕೆಲವರು ದುಬಾರಿ ಕಾಸ್ಮೆಟಿಕ್ ಗಳನ್ನು ಬಳಸುತ್ತಾರೆ. ಹೆಚ್ಚಿನ ಬೆಲೆಕೊಟ್ಟು ಖರೀದಿಸುವ ಕ್ರೀಮ್ ಗಳಿಂದ ನಮ್ಮ ಸೌಂದರ್ಯ ಹೆಚ್ಚುತ್ತದೆ ಎಂಬುದು ಭ್ರಮೆ. ಇದು ಕೇವಲ ಕ್ಷಣಿಕ, ಅಷ್ಟೇ ಅಲ್ಲದೆ ತ್ವಚೆಯನ್ನು ಘಾಸಿಗೊಳಿಸುತ್ತದೆ ಎಂಬುದನ್ನು ವೈದ್ಯರು ಕೂಡ ತಿಳಿಸುತ್ತಲೇ ಇದ್ದಾರೆ. ಹೀಗಾಗಿ ನೈಸರ್ಗಿಕವಾಗಿ ಸಿಗುವ ಮನೆಮದ್ದಿನಿಂದ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ತಿಳಿಬಣ್ಣ ಪಡೆಯಬೇಕು ಎನ್ನುವ ಕನಸು ಕಾಣುವ ಮಂದಿ, ರಾಸಾಯನಿಕ  ಕ್ರೀಂ ಗಳಿಗೆ ಗುಡ್ ಬೈ ಹೇಳಿ, ಇಲ್ಲಿರುವ ಕೆಲವೊಂದು ಸರಳ ಟಿಪ್ಸ್ ಫಾಲೋ ಮಾಡಿ.

ನಿಂಬೆಹಣ್ಣು ಒಂಥರ ಬಾಹ್ಯ ಹಾಗೂ ಆಂತರಿಕ ಸೌಂದರ್ಯ ಹೆಚ್ಚಿಸುವ  ಗುಣ ಹೊಂದಿದೆ.  ಪ್ರತಿದಿನ ಬೆಳಗ್ಗೆ ಬರೀ ಹೊಟ್ಟೆಯಲ್ಲಿ ನಿಂಬೆ ರಸವನ್ನು ಬಿಸಿ ನೀರಿಗೆ ಹಿಂಡಿ ಕುಡಿಯುವುದರಿಂದ ದೇಹದಲ್ಲಿರುವ ಕೊಬ್ಬು ಕಡಿಮೆಯಾಗಿ ತ್ವಚೆಯ ಸೌಂದರ್ಯ ಹೆಚ್ಚುವುದಲ್ಲದೆ, ಕೆಟ್ಟ ಉಸಿರಿನ ತೊಂದರೆಯೂ ನಿವಾರಣೆಯಾಗುತ್ತದೆ.ನಿಂಬೆಹಣ್ಣಿನಲ್ಲಿ  ವಿಟಮಿನ್ ಸಿ ಮತ್ತು ವಿಟಮಿನ್ ಬಿ ಹೇರಳವಾಗಿರುವುದರಿಂದ ಇದು ಡೆಡ್ ಸ್ಕೀನ್ ಗಳನ್ನು ಹೊಗಲಾಡಿಸುತ್ತದೆ ಅಷ್ಟೇ ಅಲ್ಲದೆ ಬ್ಲಾಕ್ ಹೆಡ್ ಗಳನ್ನು ಅಳಿಸಿ, ತೆರೆದುಕೊಂಡ ತ್ವಚೆಯ ರಂಧ್ರಗಳನ್ನು ಮುಚ್ಚಿಸುವಲ್ಲಿ ಯಶಸ್ವಿಯಾಗುತ್ತದೆ.

ಫೇಸ್ ಮಾಸ್ಕ್

ಹೀಗಾಗಿ ನಿಂಬೆಹಣ್ಣಿನ ಫೇಸ್ ಮಾಸ್ಕ್ ಧರಿಸುವುದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಒಂದು ಚಮಚ ನಿಂಬೆಹಣ್ಣಿನ ರಸಕ್ಕೆ , ಒಂದು ಚಮಚ ಯೋಗರ್ಟ್, ಹಾಗೂ ಒಂದು ಚಮಕ ಜೇನುತುಪ್ಪ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಈ ಪ್ಯಾಕ್ ಅನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಬಾಡಿ ಸ್ಕ್ರೀಬ್

ಆಲಿವ್ ಎಣ್ಣೆ ಜೊತೆಗೆ, ನಿಂಬೆ ಹಣ್ಣಿನ ರಸವನ್ನು ಸೇರಿ ಇದಕ್ಕೆ ಅರ್ಧ ಕಪ್ ಸಕ್ಕರೆ ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿ. ಈ ಮಿಕ್ಸ್ ಅನ್ನು ಇಡೀ ದೇಹಕ್ಕೆ ಹಚ್ಚಿ ಚೆನ್ನಾಗಿ ಉಜ್ಜಿಕೊಳ್ಳಿ. ಇದರಿಂದ ದೇಹದಲ್ಲಿರುವ ಡೆಡ್ ಸ್ಕೀನ್ ಗಳು ಹೊರಟುಹೋಗುತ್ತದೆ. 10 ನಿಮಿಷದ ಬಳಿಕ ಉಗುರು ಬಿಸಿ ನೀರಿನಿಂದ ತೊಳೆದುಕೊಳ್ಳಿ.

ಅಂಡರ್ ಆರ್ಮ್ಸ್

ಕಂಕುಳ ಕಪ್ಪಾಗಿದ್ದರೆ, ಸ್ಲೀವ್ ಲೆಸ್ ಬಟ್ಟೆಗಳನ್ನು ಧರಿಸಲು ಮುಜುಗರವಾಗುವುದು ಸಹಜ. ಹೀಗಾಗಿ ಲಿಂಬೆ ಹಣ್ಣಿನ ರಸವನ್ನು ಹತ್ತಿಯಲ್ಲಿ ಅದ್ದಿ ಅಂಡರ್ ಆರ್ಮ್ ಗೆ ಹಚ್ಚಿ. ವಾರಕ್ಕೆ ಎರಡು, ಮೂರು ಬಾರಿ ಈ ರೀತಿ ಮಾಡುವುದರಿಂದ ಈ ಭಾಗದ ತ್ವಚೆ ತಿಳಿಯಾಗುವುದು.

Tags

Related Articles