ಜೀವನ ಶೈಲಿಸೌಂದರ್ಯ

ಕೂದಲ ಆರೈಕೆಗೆ ಮನೆಮದ್ದು !

ಕೂದಲಿಗೆ ಸರಿಯಾದ ಪೋಷಣೆ ಸಿಗದಿದ್ದರೆ ಅದು ಸದೃಢವಾಗಿ ಬೆಳೆಯದೆ ಕೊನೆಯಲ್ಲಿ ಕವಲೊಡೆಯುತ್ತದೆ. ಹೆಚ್ಚು ಹೆಚ್ಚು ಹಸಿರು ತರಕಾರಿಗಳ ಸೇವನೆ ಕೂದಲಿಗೆ ಅಗತ್ಯ ಪೋಷಕಾಂಶಗಳು ದೊರೆಯುತ್ತವೆ. ಹೊರಗಿನಿಂದ ಕೂದಲಿಗೆ ಎಷ್ಟೇ ಆರೈಕೆ ಮಾಡಿದರೂ ತಿನ್ನುವ ಆಹಾರ ಅತ್ಯುತ್ತಮವಾಗಿದ್ದರೆ ಸಮೃದ್ಧ ಕೂದಲು ಪಡೆಯಬಹುದಾಗಿದೆ.

  • ನಿಂಬೆ ರಸ ಕೂದಲಿಗೆ ಉತ್ತಮವಾದ ಪೋಷಣೆ ನೀಡುತ್ತದೆ, ಕೂದಲು ಉದುರುವುದು, ತಲೆಹೊಟ್ಟಿನ ಸಮಸ್ಯೆಯಿಂದಲೂ ಕೂದಲಸಮಸ್ಯೆ ಬರುತ್ತದೆ. ಇಂತಹ ಸಂದರ್ಭದಲ್ಲಿ ತೆಂಗಿನ ಎಣ್ಣೆಯೊಂದಿಗೆ ಸೇರಿಸಿ ಕೂದಲಬುಡಕ್ಕೆ ಮಸಾಜ್ ಮಾಡಿಕೊಳ್ಳುವುದರಿಂದ ಹಲವು ಪ್ರಯೋಜನ  ಪಡೆದುಕೊಳ್ಳಬಹುದು.
  • 2 ಮೊಟ್ಟೆ ಆಲಿವ್ ಎಣ್ಣೆಯೊಂದಿಗೆ ಸೇರಿಸಿ ಕೂದಲಿಗೆ ನಿಧಾನವಾಗಿ ಮಸಾಜ್ ಮಾಡುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.
  • ಚಹಾ ಪುಡಿಯನ್ನು ಚೆನ್ನಾಗಿ ಕುದಿಸಿ, ಅದಕ್ಕೆ ಕೊಂಚ ಕಾಫಿ ಪುಡಿಯನ್ನು ಕೂಡ ಸೇರಿಸಿ ಬಳಿಕ ಸೋಸಿ ತಲೆಗೆ ಹಚ್ಚಿ 20 ನಿಮಿಷದಬಳಿಕ ಸ್ನಾನ ಮಾಡಬಹುದು.
  • ಮೆಹಂದಿ ತಲೆಯಲ್ಲಿ ಕಂಡೀಷನರ್ ನಂತೆ ಕೆಲಸ ನಿರ್ವಹಿಸುತ್ತದೆ. ಚಹಾಪುಡಿ ಅಥವ ಕಾಫಿ ಪುಡಿಯನ್ನು ಬೇಯಿಸಿ. ಈ ನೀರಿನಲ್ಲಿ ಮೆಹಂದಿಯನ್ನು ಕಲಸಿ, ತಲೆಗೆ ಹಚ್ಚಿಕೊಂಡು 2 ಗಂಟೆಯ ನಂತರ ಸ್ನಾನ ಮಾಡಿ, ಮೆಹಂದಿ ಹಚ್ಚುವ ಮೊದಲು ಕೂದಲಿಗೆ ಎಣ್ಣೆ ಹಾಕುವುದನ್ನು ಮರೆಯದಿರಿ. ಎಣ್ಣೆ ಹಚ್ಚುವುದರಿಂದ ಕೂದಲು ಡ್ರೈ ಆಗುವುದನ್ನು ತಡೆಯಬಹುದಾಗಿದೆ.
  • ಪ್ರತಿದಿನ ಪ್ರಾಣಾಯಾಮ, ಧ್ಯಾನ ಮಾಡುವುದು ಕೂಡ ಮನಸ್ಸನ್ನು  ಶಾಂತವಾಗಿಡುತ್ತದೆ. ವಾರಕ್ಕೊಮ್ಮೆಯಾದರೂ ಹೇರಳವಾಗಿ ತಲೆಗೆ ಎಣ್ಣೆ ಹಾಕುವುದುರಿಂದ, ನಿಧಾನಕ್ಕೆ ಮಸಾಜ್ ಮಾಡುವುದರಿಂದ ಕೂದಲ ಬುಡ  ದೃಡವಾಗುತ್ತದೆ. ಮೊಳಕೆ ಬರಿಸಿದ ಕಾಳುಗಳನ್ನು ತಿನ್ನುವುದರಿಂದಸಲೂ ಹೆಚ್ಚಿನ ಪೌಷ್ಠಿಕಾಂಶ ದೇಹಕ್ಕೆ ದೊರೆಯುತ್ತದೆ.
Tags