ಜೀವನ ಶೈಲಿಸಂಬಂಧಗಳು

ಬೇಗ ಮಲಗಿದರೆ ಮಕ್ಕಳಾಗುತ್ತವಂತೆ…ದಾಂಪತ್ಯ ಆರೋಗ್ಯ ರಹಸ್ಯ!

ಬೇಗ ಮಲಗಿ ಬೇಗ ಎದ್ದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಆದರೆ ಇಂದು ಅದು ಉಲ್ಟಾ ಆಗಿದೆ. ಲೇಟಾಗಿ ಮಲಗಿ ಲೇಟಾಗಿ ಏಳುವಂತಾಗಿದೆ. ಇದರಿಂದ ನಾನಾ ಆರೋಗ್ಯ ಸಮಸ್ಯೆಗಳು ತಪ್ಪಿದ್ದಲ್ಲ. ಮುಖ್ಯವಾಗಿ ಇಂದು ಪುರುಷರಲ್ಲಿ ವೀರ್ಯಾಣುಗಳ ಕೊರತೆ ದೊಡ್ಡ ಸಮಸ್ಯೆಯಾಗಿ ಬದಲಾಗಿದೆ.

ಮದುವೆಯಾದವರು, ಮಕ್ಕಳನ್ನು ಬಯಸುತ್ತಿರುವ ದಂಪತಿಗಳಿಗೆ ತುಂಬಾ ಕಷ್ಟವಾಗುತ್ತಿದೆ. ಸಂತಾನ ಸಾಫಲ್ಯತೆ ಪ್ರಮಾಣ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಅವುಗಳಲ್ಲಿ ನಿದ್ದೆಯೂ ಒಂದು. ಈ ಟಿಪ್ಸ್ ಪಾಲಿಸಿ.

* ಮಗುವನ್ನು ಪಡೆಯಲು ಬಯಸುವ ದಂಪತಿ ತಡ ರಾತ್ರಿಯವರೆಗೆ ಕಾಯದೆ ಬೇಗ ಮಲಗಿದ್ರೆ ಗರ್ಭ ಧರಿಸುವ ಸಾಧ್ಯತೆ ಹೆಚ್ಚು ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ.

* ರಾತ್ರಿ 10 ಗಂಟೆಯೊಳಗೆ ಪುರುಷರಲ್ಲಿ ಆರೋಗ್ಯಯುತ ವೀರ್ಯಾಣು ಉತ್ಪತ್ತಿ ಆಗುತ್ತದೆಯಂತೆ. ಆದ್ದರಿಂದ ಈ ಸಮಯ ಮಿಲನಕ್ಕೆ ಸೂಕ್ತ ಎಂದಿದ್ದಾರೆ ತಜ್ಞರು.

* ಅಷ್ಟೆ ಅಲ್ಲ, ತೀರ ಕಮ್ಮಿ ನಿದ್ದೆ ಮಾಡುವ ಪುರುಷರಲ್ಲಿ ವೀರ್ಯಾಣು ಸಂಖ್ಯೆ ಕೂಡ ಕಮ್ಮಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಮಗುವನ್ನು ಪಡೆಯುವ ದಂಪತಿ ತಮ್ಮ ನಿದ್ರೆ ಸಮಯಕ್ಕೆ ಕೂಡ ಹೆಚ್ಚಿನ ಪ್ರಾಮುಖ್ಯ ನೀಡಬೇಕು.

 

Tags