ಆಹಾರಜೀವನ ಶೈಲಿ

ಸಪೋಟ ಹಣ್ಣು ತಿಂದರೆ ಕ್ಯಾನ್ಸರ್ ಬರಲ್ಲವಂತೆ !

ಸಪೋಟ ಹಣ್ಣು ಈಗ ಲಭಿಸುತ್ತದೆ. ಬಂಡಿಗಳಲ್ಲಿ ರಾಶಿರಾಶಿ ಹಾಕಿಕೊಂಡು ಮಾರುತ್ತಿರುತ್ತಾರೆ., ಚೆನ್ನಾಗಿ ಮಾಗಿದ ಸಪೋಟ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮುಖ್ಯವಾಗಿ ಸಪೋಟ ತಿನ್ನುವುದರಿಂದ ಅನೇಕ ಕಾಯಿಲೆಗಳು ಹತ್ತಿರ ಸುಳಿಯಲ್ಲ. ಹಾಗಿದ್ದರೆ ಅವು ಯಾವುದು ಎಂಬುದನ್ನು ನೋಡೋಣ ಬನ್ನಿ.

* ಚಿಕ್ಕು ಹಣ್ಣು ಕ್ಯಾನ್ಸರ್‌ ಬರುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಇದರಲ್ಲಿರುವ ಹೇರಳ ಪೌಷ್ಟಿಕಾಂಶದಿಂದಾಗಿ ಸೂಪರ್‌ ಫುಡ್‌ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಹಣ್ಣಿನಲ್ಲಿ ನಾರಿನಂಶ, ಆ್ಯಂಟಿ ಆಕ್ಸಿಡೆಂಟ್‌ ಹಾಗೂ ಕ್ಯಾನ್ಸರ್‌ ನಿರೋಧಕ ಗುಣ ಕೂಡ ಇದೆ. ಆದ್ದರಿಂದ ಹಲವು ಬಗೆಯ ಕ್ಯಾನ್ಸರ್‌ಗಳಿಂದ ರಕ್ಷ ಣೆ ನೀಡುತ್ತದೆ.

* ಚಿಕ್ಕು ಹಣ್ಣಿನಲ್ಲಿ ವಿಟಮಿನ್‌ ಸಿ ಕೂಡ ಇರುವುದರಿಂದ ಹಲವು ಸೋಂಕುಗಳು ಉಂಟಾಗದಂತೆ ರಕ್ಷಣೆ ನೀಡುತ್ತದೆ.

* ಚಿಕ್ಕು ಹಣ್ಣಿನಲ್ಲಿರುವ ಕ್ಯಾಲ್ಷಿಯಂ, ಗಂಧಕ, ಕಬ್ಬಿಣ ಹಾಗೂ ಇತರ ಖನಿಜಗಳು ಮೂಳೆಗಳನ್ನು ಆರೋಗ್ಯಕರವಾಗಿ ಹಾಗೂ ಬಲಿಷ್ಠಗೊಳಿಸಲು ನೆರವಾಗುತ್ತವೆ. ಸಪೋಟವನ್ನು ನಿಯಮಿತವಾಗಿ ಸೇವಿಸಿದರೆ  ಆರೋಗ್ಯಕ್ಕೆ ಒಳ್ಳೆಯದು ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

* ಚಿಕ್ಕು ಹಣ್ಣಿನಲ್ಲಿ ವಿಟಮಿನ್‌ ಎ ಅಧಿಕವಾಗಿರುವುದರಿಂದ ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು ಹಾಗೂ ದೃಷ್ಟಿ ಕೂಡ ಉತ್ತಮವಾಗುತ್ತದೆ.

* ಮೂತ್ರಪಿಂಡದಲ್ಲಿ ಕಲ್ಲುಗಳಾಗಿದ್ದರೆ ಶಸ್ತ್ರಕ್ರಿಯೆಯಿಂದಲೇ ನಿವಾರಿಸಬೇಕೆಂದೇನಿಲ್ಲ. ಬದಲಿಗೆ ಚಿಕ್ಕು ಹಣ್ಣಿನ ಬೀಜಗಳನ್ನು ಚೆನ್ನಾಗಿ ಒಣಗಿಸಿ ಕುಟ್ಟಿ ಪುಡಿ ಮಾಡಿ ಒಂದು ಲೋಟ ನೀರಿನೊಂದಿಗೆ ಬೆರೆಸಿ ನಿಯಮಿತವಾಗಿ ಕುಡಿಯಬೇಕು. ಈ ಬೀಜಗಳು ಕಲ್ಲುಗಳನ್ನು ಕರಗಿಸಿ ಮೂತ್ರದ ಮೂಲಕ ವಿಸರ್ಜನೆಯಾಗಲು ನೆರವಾಗುತ್ತದೆ.

 

Tags

Related Articles

Leave a Reply

Your email address will not be published. Required fields are marked *