ಜೀವನ ಶೈಲಿಸೌಂದರ್ಯ

ಕೂದಲು ಬೆಳ್ಳಗಾಗುತ್ತಿದೆಯೇ ಹಾಗಿದ್ದರೆ ಈ 5 ವಿಷಯಗಳ ಬಗ್ಗೆ ಎಚ್ಚರವಿರಲಿ !

ಇದೀಗ ಬಾಲನೆರೆ ಎಂಬುದು ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆ. ಒಂದು ಕಡೆ ಕೂದಲು ಉದುರುವ ಸಮಸ್ಯೆ, ಇನ್ನೊಂದು ಕಡೆ ಕೂದಲು ಬೆಳ್ಳಗಾಗುವ ಸಮಸ್ಯೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಮುಖ್ಯವಾಗಿ ನಮ್ಮ ಲೈಫ್‌ ಸ್ಟೈಲ್ ಸಹ ಇದಕ್ಕೆ ಕಾರಣವಾಗುತ್ತದೆ. ಈ ಐದು ಕಾರಣಗಳ ಬಗ್ಗೆ ಎಚ್ಚರ ವಹಿಸಿ. ಬಿಳಿ ಕೂದಲು ಸಮಸ್ಯೆಯನ್ನು ತಪ್ಪಿಸಬಹುದು.

  1. ಸರಿಯಾಗಿ ತಿನ್ನದೆ ಇರುವುದು !

ಪೋಷಕಾಂಶವಿರುವ ಆಹಾರ ಬದಲಿಗೆ ಪಾಸ್ಟ್‌ ಫುಡ್ಸ್ ತಿನ್ನುವುದು, ಡಯಟ್‌ ಹೆಸರಿನಲ್ಲಿ ಊಟ ಬಿಡುವುದು ಈ ರೀತಿಯ ಅಭ್ಯಾಸಗಳಿಂದ ಕೂದಲಿಗೆ ಅಗತ್ಯವಿರುವ ಪೋಷಕಾಂಶ ದೊರೆಯದೆ ಕೂದಲು ಉದುರಲಾರಂಭಿಸುತ್ತದೆ.  ಕೂದಲಿನ ಆರೋಗ್ಯಕ್ಕೆ ಪ್ರೊಟೀನ್‌, ಕಬ್ಬಿಣದಂಶ, ಒಮೆಗಾ 3, ವಿಟಮಿನ್ ಇ, ಸತುವಿನಂಶವಿರುವ ಆಹಾರ ತಿನ್ನಬೇಕು.

  1. ಬಿಸಿ ನೀರಿನಲ್ಲಿ ತಲೆಸ್ನಾನ ಮಾಡುವುದು

ಬಿಸಿ ನೀರಿನಲ್ಲಿ ತಲೆಸ್ನಾನ ಮಾಡಿದರೆ ಕೂದಲಿನ ಬುಡ ಒಣಗುವುದು, ಇದರಿಂದ ಕೂದಲು ಉದುರಲಾರಂಭಿಸುತ್ತದೆ. ತಣ್ಣೀರು ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ತಲೆ ತೊಳೆಯಬೇಕು.

  1. ಅಧಿಕ ಮಾನಸಿಕ ಒತ್ತಡ

ಮಾನಸಿಕ ಒತ್ತಡ ಅಧಿಕವಾದಂತೆ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುವುದು, ಜತೆಗೆ ಕೂದಲು ಉದುರಲಾರಂಭಿಸುವುದು. ಯೋಗ, ಧ್ಯಾನ ಇವೆಲ್ಲಾ ಮಾನಸಿಕ ಒತ್ತಡ ಕಡಿಮೆ ಮಾಡುವಲ್ಲಿ ಸಹಕಾರಿ.

  1. ತಲೆ ಶುಚಿತ್ವದ ಕಡೆಗೆ ಗಮನ ಕೊಡದಿರುವುದು

ದೂಳು ಇರುವ ಪ್ರದೇಶದಲ್ಲಿ ಓಡಾಡಿದರೆ ದಿನಾ ತಲೆ ಸ್ನಾನ ಮಾಡುವುದು ಒಳ್ಳೆಯದು. ವಾರಕ್ಕೊಮ್ಮೆ ತಲೆಸ್ನಾನ ಮಾಡುವುದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ವಾರದಲ್ಲಿ 2-3 ಬಾರಿ ತಲೆ ಸ್ನಾನ ಮಾಡಿ ಕೂದಲಿನ ಆರೈಕೆ ಮಾಡಿ.

  1. ಡ್ರೈಯರ್‌, ಸ್ಟ್ರೈಟ್ನರ್‌ ಬಳಸುವುದು

ಕೂದಲಿಗೆ ಐರನ್‌ ಹಾಕುವುದು, ಸ್ಟ್ರೈಟ್ನರ್‌, ಡ್ರೈಯರ್‌ ಬಳಸುವುದು ಇವೆಲ್ಲಾ ಕೂದಲನ್ನು ತಾತ್ಕಾಲಿಕವಾಗಿ ಆಕರ್ಷಕವಾಗಿ ಕಾಣುವಂತೆ ಮಾಡಿದರೂ ಶಾಶ್ವತವಾಗಿ ಕೂದಲಿನ ಆರೋಗ್ಯ ಹಾಳು ಮಾಡುವುದು, ಆದ್ದರಿಂದ ಕೂದಲು ಜೋಪಾನ.

Tags