ಜೀವನ ಶೈಲಿಸೌಂದರ್ಯ

‘ಮುಲ್ತಾನಿ ಮಿಟ್ಟಿ’ ಯ ಪ್ರಯೋಜನವೇನು ನಿಮಗೆ ಗೊತ್ತೇ ?

ಮುಲ್ತಾನಿ ಮುಟ್ಟಿಯನ್ನು ಸೌಂದರ್ಯವರ್ಧಕವಾಗಿ ಹಲವು ದಶಕಗಳಿಂದ ಬಳಕೆಯಾಗುತ್ತಲೇ ಇದೆ. ಚರ್ಮವನ್ನು ನುಣುಪಾಗಿಸಿ, ಸತ್ತ  ಜೀವಕೋಶಗಳನ್ನು ತೆಗೆದು, ತ್ವಚೆಗೆ ನೈಸರ್ಗಿಕ ಸೌಂದರ್ಯವನ್ನು ನೀಡುವ ಮುಲ್ತಾನಿ ಮಿಟ್ಟಿಯನ್ನು ಕ್ರಮಬದ್ದವಾಗಿ ಬಳಕೆ ಮಾಡುವುದರಿಂದ, ಮುಖದ ಸೌಂದರ್ಯವನ್ನು ಹೆಚ್ಚಿಸಬಹುದು.

  1. ಎಣ್ಣೆ ಚರ್ಮವಿರುವವರು, ಮುಲ್ತಾನಿ ಮಿಟ್ಟಿಗೆ ಸ್ಪಲ್ಪ ರೋಸ್ ವಾಟರ್ ಬೆರೆಸಿ ಅದನ್ನು ತ್ವಚೆಗೆ ಹಚ್ಚಿ ಒಣಗಿದ ನಂತರ ತೊಳೆಯಬೇಕು, ಒಣ ಚರ್ಮದವರು ಮುಲ್ತಾನಿ ಮಿಟ್ಟಿಯನ್ನು ಬಾದಾಮಿ ಎಣ್ಣೆ ಹಾಗೂ ಹಾಲಿನೊಂದಿಗೆ ಬೆರೆಸಿ ಹಚ್ಚಿ. ಈ ರೀತಿ ಮಾಡುವುದರಿಂದ ಚರ್ಮದ ಆರೋಗ್ಯ ಉತ್ತಮವಾಗಿರುತ್ತದೆ.
  2. ಟೊಮೊಟೋ ಜ್ಯೂಸ್ ಜೊತೆಗೆ ಸ್ಪಲ್ಪ ಮುಲ್ತಾನಿ ಮುಟ್ಟಿ, ಅರಿಶಿನ ಮತ್ತು ಗಂಧದ ಪುಡಿಯನ್ನು ಸೇರಿಸಿ ಮುಖಕ್ಕೆ ಲೇಪಿಸಿ ಹತ್ತು ನಿಮಿಷದ ಬಳಿಕ ಮುಖ ತೊಳೆಯುವುದರಿಂದ ಮೊಡವೆಗಳು ಮೊಡವೆ ನಿವಾರಕವಾಗಿ ಕಾರ್ಯ ನಿರ್ವಹಿಸುತ್ತದೆ.
  3. ಒಂದು ಕಪ್ ಓಟ್ ಮಿಲ್ ಗೆ ನೀಮ್ ಪೌಡರ್ , ಒಂದು ಚಮಚ ಮುಲ್ತಾನಿ ಮುಟ್ಟಿಯನ್ನು ಬೆರೆಸಿ ಅದಕ್ಕೆ ಚಂದನ ಹಾಕಿ. ಬಳಿಕ ಹಾಲಿನೊಂದಿಗೆ ಸೇರಿಸಿ ದೇಹಕ್ಕೆ ಲೇಪಿಸಿ. ಈ ರೀತಿ ವಾರಕ್ಕೆ ಒಂದು ಬಾರಿಯಾದರೂ ಮಾಡುವುದರಿಂದ ದೇಹದ ಚರ್ಮ ಕಾಂತಿಯುತವಾಗುತ್ತದೆ
  4. ಶಾಂಪೂ ಜೊತೆಗೆ ಮುಲ್ತಾನಿ ಮುಟ್ಟಿ. ಕ್ಲೆನ್ಲಿಂಗ್ ಏಜೆಂಟ್ ನಂತೆ ಕ್ರಿಯೆ ಮಾಡುವುದರಿಂದ ನೆತ್ತಿಯ ಮೇಲಿನ ಅತೀಯಾದ ಜಿಡ್ಡನ್ನು ತೆಗೆಯುತ್ತದೆ. ಅಲ್ಲದೆ ಕಂಡೀಷನರ್ ನಂತೆಯೂ ವರ್ತಿಸುತ್ತದೆ.
  5. ರಾತ್ರಿ ತಲೆಗೆ ಎಣ್ಣೆ ಹಚ್ಚಿ ಮಲಗಿ. ಬೆಳಗ್ಗೆ ಬಿಸಿ ನೀರಿನಿಂದ ಅದ್ದಿದ ಟೆವೆಲ್ ನಿಂದ ತಲೆಯನ್ನು ಕವರ್ ಮಾಡಿ. ಒಂದು ಗಂಟೆಯ ಬಳಿಕ ಮೊಸರಿನೊಂದಿಗೆ ಬೆರೆಸಿದ ಮುಲ್ತಾನಿ ಮಿಟ್ಟಿಯ ಪ್ಯಾಕ್ ಅನ್ನು ತಲೆಗೆ ಹಚ್ಚಿ ಸ್ಪಲ್ಪ ಸಮಯದ ಬಳಿಕ ತೊಳೆಯಿರಿ. ಮರುದಿನ ಶ್ಯಾಂಪೂ ಹಾಗೂ ಕಂಡೀಷನರ್ ಬಳಸಿ ಕೂದಲು ತೊಳೆಯಿರಿ.
  6. ರಕ್ತ ಚಲನೆಯಲ್ಲಿ ಪ್ರಮುಖ ಪಾತ್ರ- ಮುಲ್ತಾನಿ ಮುಟ್ಟಿ ರಕ್ತ ಚಲನೆಯನ್ನು ಹೆಚ್ಚಿಸುವುದರಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಸುಸ್ತಾದ ಕಾಲು, ತೊಡೆ ಅಥವ ಇನ್ನಿತರ ಭಾಗಕ್ಕೆ ಮುಲ್ತಾನಿ ಮುಟ್ಟಿಯನ್ನು ಹಚ್ಚುವುದರಿಂದ ಒಂದು ರೀತಿಯಾಗಿ ಶಮನ ಸಿಗುತ್ತದೆ.
Tags

Related Articles

Leave a Reply

Your email address will not be published. Required fields are marked *