ಜೀವನ ಶೈಲಿಸೌಂದರ್ಯ

ನೀಳಕೇಶ ನಿರ್ವಹಣೆಗೆ ಒಂದಷ್ಟು ಟಿಪ್ಸ್!

ಸಾಮಾನ್ಯವಾಗಿ ಎಲ್ಲಾ ಮಹಿಳೆಯರು ತಮ್ಮ ಕೇಶರಾಶಿ ಸುಂದರವಾಗಿರಬೇಕು ಎಂದು ಬಯಸುತ್ತಾರೆ. ಅದರಲ್ಲೂ ಉದ್ದ ಕೂದಲು ಹೆಮ್ಮೆಯ ಪ್ರತೀಕ ಎನ್ನುವ ಟ್ರೆಂಡ್ ಈಗಿನದು. ಇಂತಹ ಜಾಹಿರಾತು ನೋಡಿದಾಗ, ಎಷ್ಟು ಚಂದ ಅಲ್ವಾ ಅನ್ನಿಸುತ್ತೆ. ಆದ್ರೆ ಬೆಳಗ್ಗೆಯಾದರೆ ಸಾಕು ಓಡು, ಸಂಜೆಯಾದರೆ ಮತ್ತೆ ಮನೆಗೆ ಓಡು ಮನೆ ಕೆಲಸ, ಮಕ್ಕಳ ಪಾಲನೆ, ಪೋಷಣೆಯಲ್ಲಿ ನಮ್ಮ ಇಡೀ ಬದುಕು ಕಳೆದುಹೋಗುತ್ತದೆ. ಅದರಲ್ಲೂ ಉದ್ಯೋಗಸ್ಥ ಮಹಿಳೆಯರ ಪಾಡು ಹೇಳತೀರದು ಎಂಬಂತಾಗಿರುತ್ತದೆ. ಅಂಥಹದರಲ್ಲಿ ಕೂದಲಿನ ಆರೈಕೆ ಮಾಡಿಕೊಳ್ಳಲು ಸಮಯ ಎಲ್ಲಿರುತ್ತದೆ ಎಂಬುದು ನಾವಾಡುವ ಸರ್ವೇ ಸಾಮಾನ್ಯವಾದ ಮಾತು.

Related image

ನೀವು ಕೂಡ ಉದ್ಯೋಗಸ್ಥ ಮಹಿಳೆಯಾಗಿದ್ದರೆ ತಪ್ಪದೇ ಈ ಲೇಖನವನ್ನು ಓದಿ.

ಉದ್ದ ಕೂದಲು ಹೊಂದಲು ಸುಲಭ ವಿಧಾನ ಇಲ್ಲಿದೆ.

  1. ಸ್ಟೆಪ್ ಕಟ್ ಮಾಡಿಸುವುದರಿಂದ ಸ್ಪಿಟ್ಸ್‍ (ಸೀಳು) ಮತ್ತು ಶುಷ್ಕತೆಯಿಂದ ನಿಮ್ಮ ಕೂದಲನ್ನು ರಕ್ಷಿಸುತ್ತದೆ ಮತ್ತು ನಿರ್ವಹಣೆಗೂ ಸಹಕಾರಿಯಾಗಿದೆ.
  2. ಹೇರ್ ಕಟ್ ಮಾಡಿಸಿದಾಗ ಹಗುರತೆಯ ಭಾವನೆ ಜೊತೆಗೆ ಕೂದಲು ತೆಳುವಿದ್ದರೂ ಸಹ ಗಾಢವಾಗಿ, ಕೋಮಲವಾಗಿ ಕಾಣುತ್ತದೆ.
  3. ಕೂದಲಿನ ಶುಷ್ಕತೆ ನಿವಾರಿಸಲು ಕೊಬ್ಬರಿ ಎಣ್ಣೆ, ಆರ್ಗ್ಯಾನಿಕ್ ಅಥವಾ ಆಲಿವ್ ಎಣ್ಣೆ, ಹರಳೆಣ್ಣೆ ಅಥವಾ ಗ್ಲಿಸರಿನ್ ಗಳಂತಹ ನೈಸರ್ಗಿಕ ಎಣ್ಣೆಗಳಿಂದ ಮಸಾಜ್ ಮಾಡಿ.
  4. ನೀವು ಬಳಸುವ ಶ್ಯಾಂಪೂ ಆದಷ್ಟು ಹರ್ಬಲ್ ಆಗಿರಲಿ. ಆಗ ಕೂದಲಿನ ಬೆಳವಣಿಗೆಗೆ ಬೇಕಾದ ತೇವಾಂಶ ಹೊಂದಲು ಅವಕಾಶ ನೀಡುತ್ತದೆ,
  5. ಕೂದಲನ್ನು ಬಾಚಲು ಆದಷ್ಟು ಬ್ರಷ್ ಬಳಸಿ. ಆಗ ಕೂದಲು ನೀಳವಾಗಿ, ಸೌಮ್ಯವಾಗಿ ಎಲ್ಲರನ್ನೂ ಆಕರ್ಷಿಸುತ್ತದೆ.
  6. Image result for long hair maintain tips

6.ಸ್ನಾನಕ್ಕೆ ಉಗುರು ಬೆಚ್ಚಗಿನ ನೀರನ್ನೇ ಬಳಸಿ. ಅತಿಯಾಗಿ ಉಜ್ಜಬೇಡಿ.

  1. ಕೂದಲನ್ನು ಸೆಟ್ಟಿಂಗ್‍ ಮಾಡಿಸುವಾಗ ಶಾಖ ಕಡಿಮೆ ಇರುವಂತೆ ಗಮನಿಸಿ.
  2.  ನೆಮ್ಮದಿಯ ನಿದ್ರೆ ಮತ್ತು ಪೋಷಕಾಂಶಭರಿತ ಆಹಾರ ಸೇವನೆಗೆ ಸಮಯ ಮೀಸಲಿಡಿ.

ಈ ಸುಲಭ ಟಿಪ್ಸ್‍ ಜೊತೆಗೆ ಸಹನೆ, ಕೂದಲು ಬೆಳೆಸಬೇಕೆಂಬ ದೃಢತೆ ಇದ್ದರೆ ನೀಳಕೇಶ ನಿಸ್ಸಂದೇಹವಾಗಿ ನಿಮ್ಮದಾಗುತ್ತದೆ

‘ಯಜಮಾನ’ ನ ಬಿಡುಗಡೆ ದಿನವೇ ‘ಅಮರ್’ ಟ್ರೇಲರ್

#balknainews #health #soundarya

Tags