ಜೀವನ ಶೈಲಿಸೌಂದರ್ಯ

ಮೇಕಪ್ ಕುರಿತು ಸರಿಯಾದ ಕಾಳಜಿವಹಿಸದಿದ್ದರೆ ಈ ಸಂಗಾತಿಯೇ ಶತ್ರು ಆಗುವುದರಲ್ಲಿ ಸಂಶಯವಿಲ್ಲ! .

ಕಣ್ಣಿಗೆ ಕಣ್ಣುಗಪ್ಪು, ತುಟಿಗೆ ತೆಳುವಾಗಿ ಲೇಪಿಸಿದ ಲಿಪ್‌ಸ್ಟಿಕ್, ಮುಖದಲ್ಲಿ ಮಿರುಗುವ ಕಾಂಪ್ಯಾಕ್ಟ್ ಮೆರುಗು, ಐ ಲ್ಯಾಶಸ್ ಹೀಗೆ ಆಧುನಿಕ ಸ್ತ್ರೀಯರ ಸೌಂದರ್ಯ ಸಾಧನಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಯಾವುದೇ ಕಾರ್ಯಕ್ರಮ, ಅಥವಾ ಮದುವೆ ಸಮಾರಂಭಕ್ಕೆ ಹೋಗಬೇಕಾದರೂ ಕೂಡ ಸಾಕಷ್ಟು ಬಾರಿ ಕನ್ನಡಿ ಮುಂದೆ ನಿಂತು ಮೇಕಪ್‌ನ ಮೊರೆಹೋಗುತ್ತಾರೆ, ಅದರಲ್ಲೂ ಹುಡುಗಿಯರಂತೂ ಕೇಳುವುದೇಬೇಡ, ಆದರೆ ಇದರ ಪರಿಣಾಮ ಮಾತ್ರ ನೇರವಾಗಿ ತ್ವಚೆ ಹಾಗೂ ಆರೋಗ್ಯದ ಮೇಲೆ ಬೀಳುತ್ತದೆ. ಮೇಕಪ್ ಕುರಿತು ಸರಿಯಾದ ಕಾಳಜಿವಹಿಸದಿದ್ದರೆ ಈ ಸಂಗಾತಿಯೇ ಶತ್ರು ಆಗುವುದರಲ್ಲಿ ಸಂಶಯವಿಲ್ಲ! .

ಕಾಡಿಗೆ

ಕಾಡಿಗೆಯು ಕಣ್ಣಿನ ಮೇಲೆ ಹಲವಾರು ಅಡ್ಡ ಪರಿಣಾಮಗಳನ್ನುಂಟು ಮಾಡುತ್ತದೆ. ಉದಾಹರಣೆಗೆ ಇದು ಕಣ್ಣಿನಲ್ಲಿ ರಾಸಾಯನಿಕ, ವಿಷಕಾರಿ ಮತ್ತು ನಂಜುಕಾರಕ ಸಂಯುಕ್ತಗಳ ಬೆಳವಣಿಗೆಗೆ ಕಾರಣವಾಗಿ, ಒಣ ಕಣ್ಣು ಉಂಟುಮಾಡುತ್ತದೆ ಮತ್ತು ಕಣ್ಣಿನ ಬಣ್ಣವನ್ನು ಕುಂದಿಸುತ್ತದೆ

Image result for makeup kit

ನೇಲ್ ಪಾಲಿಶ್
ಡಾರ್ಕ್ ನೇಲ್ ಪಾಲಿಶ್‍ಗಳು ನಿಮ್ಮ ಉಗುರುಗಳನ್ನು ಹಳದಿ ಬಣ್ಣಕ್ಕೆ ತಿರುಗುವಂತೆ ಮಾಡುತ್ತವೆ. ಮತ್ತೊಂದು ಅಂಶವೇನೆಂದರೆ ನಿಮ್ಮ ನೇಲ್ ಪಾಲಿಶ್‍ನಲ್ಲಿ ಅಸಿಟೋನ್ ಇದ್ದರೆ, ಅವುಗಳು ನಿಮ್ಮ ಉಗುರಿನ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತವೆ. ಅಸಿಟೋನ್ ಒಂದು ಅಪಾಯಕಾರಿ ರಾಸಾಯನಿಕವೆಂಬುದನ್ನು ಮರೆಯಬೇಡಿ.

ಆದರೆ ಈ ಸಾಮಾಗ್ರಿಗಳು ಪರಿಣಾಮಕಾರಿಯಾದರು ಸಹ ಅಷ್ಟೇ ಅಪಾಯಕಾರಿ ಎಂಬುದನ್ನು ಮರೆಯಬಾರದು. ಸೌಂದರ್ಯವರ್ಧಕಗಳು ಸ್ತ್ರೀಯ ಅಂದವನ್ನು ಇಮ್ಮಡಿಗೊಳಿಸುತ್ತವೆ. ಆದರೆ ಅದೇ ಸಮಯದಲ್ಲಿ ಇವುಗಳಲ್ಲಿರುವ ಅಪಾಯಕಾರಿ ರಾಸಾಯನಿಕಗಳು ತ್ವಚೆಯ ಆರೋಗ್ಯವನ್ನು ಹಾಳು ಮಾಡುತ್ತವೆ. ಹಲವಾರು ಸೌಂದರ್ಯವರ್ಧಕಗಳು ಮತ್ತು ಮೇಕಪ್ ಉತ್ಪನ್ನಗಳು ತ್ವಚೆಯ ಮೇಲೆ ಘೋರ ಪರಿಣಾಮವನ್ನು ಉಂಟು ಮಾಡುತ್ತವೆಯೆಂದು ಅಧ್ಯಯನಗಳಿಂದ ಧೃಡಪಟ್ಟಿದೆ.

Image result for makeup kit

ಮೇಕಪ್ ಕಿಟ್ ನ ಕ್ರೀಮ್ ಗಳು, ಉಗುರು ಬಣ್ಣ,ಮಸ್ಕರಾ ಹಾಗೂ ಮೇಕಪ್ ಫೌ೦ಡೇಶನ್ ಗಳ೦ತಹ ವಸ್ತುಗಳು ಖ೦ಡಿತವಾಗಿಯೂ ಕಾಲಕ್ರಮದಲ್ಲಿ ಹಾಳಾಗುತ್ತವೆ೦ಬುದನ್ನು  ಖಚಿತಪಡಿಸಿಕೊಳ್ಳಬಹುದು. ಹೀಗಾಗಿ, ಇ೦ತಹ ವಸ್ತುಗಳನ್ನು  ಕಾಲಕಾಲಕ್ಕೆ ಹೊಸದರವುಗಳೊ೦ದಿಗೆ ಬದಲಾಯಿಸುತ್ತಿರಬೇಕು.

ಮೇಕಪ್ ಕಿಟ್ನನ್ನು  ಸ್ವಚ್ಛಗೊಳಿಸಿ

ನಮ್ಮ ಮೇಕಪ್ ಕಿಟ್ಟನ್ನು ಆದಷ್ಟು ವ್ಯವಸ್ಥಿತವಾಗಿರಿಸಲು ನೋಡಬೇಕು. ಅದು ಆಗಾಗ್ಗೆ ಧೂಳಿನಿಂದ ಕೂಡಿದ್ದರೆ ಅದನ್ನು ಶುಚಿಯಾಗಿ ಇಡಬೇಕು. ಮೇಕಪ್ ಕಿಟ್ಟನ್ನು ಒಣ ಹಾಗೂ ತೇವಯುಕ್ತ ಸ್ಥಳದಲ್ಲಿಯೇ ಇಡಬೇಕು. ಅಲ್ಲಲ್ಲಿ ಗಾಳಿಯು ಅವುಗಳನ್ನು ಹಾಳುಮಾಡುತ್ತದೆ.

ಮೇಕಪ್ ಕಿಟ್ ಖರೀದಿಸುವ ಮುನ್ನ ಅದು ಉತ್ತಮ ಗುಣ ಮಟ್ಟದ್ದಾ, ಎಂದು ಪರಿಶೀಲಿಸಿ ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಪಾರ್ಟಿ ಸಮಾರಂಭಗಳಿಗೆ ಹೋಗಿ ಬಂದ ಮೇಲೆ ಮಲಗುವ ಮುನ್ನ ಮುಖದಿಂದ ಮೇಕಪ್ ತೆಗೆದು ಮಲಗಿ. ಯಾಕೆಂದರೆ ತ್ವಚೆ ತುಂಬಾ ನಾಜೂಕು ರಾಸಾಯನಿಕ ಪದಾರ್ಥಗಳು ಮಿಶ್ರಗೊಂಡು ತ್ವಚೆಗೆ ಎಲರ್ಜಿಯಾಗುವ ಸಂಭವವಿದೆ. ಹಾಗಾಗಿ ಆದಷ್ಟು ಆರೋಗ್ಯಕ್ಕೆ ಉತ್ತಮವಾದ ಹರ್ಬಲ್ ಪ್ರಾಡಕ್ಟ್ ಗಳನ್ನೇ ಬಳಸಿ.

ಶುರುವಾಯ್ತು ಏನೋ ಒಂದು ಚಡಪಡಿಕೆ: ನೋಡುಗರ ಮನ ಸೆಳೆದ ಮೆಲೋಡಿ ಸಾಂಗ್

 

Tags