18+ಜೀವನ ಶೈಲಿ

ಮೆನ್ಸಸ್ ಸಮಯದಲ್ಲಿ ಮಹಿಳೆಯರು ಸೆಕ್ಸ್ ನಲ್ಲಿ ಭಾಗಿಯಾದರೆ ಏನಾಗುತ್ತದೆ…?

ಮೆನ್ಸಸ್ ಸಮಯದಲ್ಲಿ ಮಹಿಳೆಯರು ಸೆಕ್ಸ್ ನಲ್ಲಿ ಭಾಗಿಯಾದರೆ ಏನಾಗುತ್ತದೆ…?

ಮೆನ್ಸಸ್ ಸಮಯದಲ್ಲಿ ಶೃಂಗಾರ ಕೇಳಿಯಲ್ಲಿ ಪಾಲ್ಗೊಳ್ಳಬಹುದೇ..? ಸಾಮಾನ್ಯವಾಗಿ ಆ ಸಮಯದಲ್ಲಿ ಮಹಿಳೆಯರಿಗೆ ನೋವು, ರಕ್ತಸ್ರಾವ ಹೆಚ್ಚಾಗಿ ಇರುತ್ತದೆ. ಆದರೆ ಅನೇಕ ಮಂದಿ ಪುರುಷರು ಬೇಡ ಎಂದು ಎಷ್ಟು ಹೇಳಿದರೂ ಕೇಳಲ್ಲ. ಶೃಂಗಾರ ಕೇಳಿಯಲ್ಲಿ ಭಾಗಿಯಲು ಪತ್ನಿ ಮೇಲೆ ಒತ್ತಡ ಹೇರುತ್ತಾರೆ. ಅಂತಹ ಸಮಯದಲ್ಲಿ ಪತಿ ಮೇಲೆ ರೇಜಿಗೆ ಉಂಟಾಗಿ ದೂರ ಹೊರಟು ಬಿಡಬೇಕು ಅನ್ನಿಸುತ್ತದೆ.

ಇಷ್ಟಕ್ಕೂ ಮೆನ್ಸಸ್ ಸಮಯದಲ್ಲಿ ರತಿಕ್ರೀಡೆಯಲ್ಲಿ ಭಾಗಿಯಾಗಬಹುದಾ? ಬೇಡವೇ ಎಂಬ ಬಗ್ಗೆ ಲೈಂಗಿಕ ತಜ್ಞರು, ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿದರೆ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ. ಬಹಳಷ್ಟು ಮಂದಿಗೆ ಈ ಸಂಶಯ ಇದ್ದೇ ಇರುತ್ತದೆ. ಋತು ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡರೆ ಪುರುಷರಿಗೆ ಏನೇನು ಆಗಲ್ಲ. ಈ ಸಮಯದಲ್ಲಿ ಮಹಿಳೆಯರು ಮಾನಸಿಕ ಆತಂಕ, ಕೋಪ, ದುಃಖದಂತಹ ಭಾವೋದ್ವೇಗಕ್ಕೆ ಒಳಗಾಗುತ್ತಿರುತ್ತಾರೆ.

ಇದರ ಜತೆಗೆ ತೀವ್ರ ಹೊಟ್ಟೆನೋವು, ಸೊಂಟದ ನೋವು, ಕಾಲು ತೊಡೆಗಳ ಸೆಳೆತ, ರಕ್ತಸ್ರಾವದಂತಹ ಸಮಸ್ಯೆಗಳಿಂದ ತೀವ್ರ ಬಳಲಿರುತ್ತಾರೆ. ಮಾನಸಿಕವಾಗಿ ಸಹ ಆಕೆಗೆ ಸಾಂತ್ವನ ನೀಡಬೇಕು. ಇಂತಹ ಸಮಯದಲ್ಲಿ ಮಹಿಳೆಯರಿಗೆ ಸಂಪೂರ್ಣ ವಿಶ್ರಾಂತಿ ಅಗತ್ಯ. ಇನ್ನು ಉದ್ಯೋಗಿ ಮಹಿಳೆಯರಾದ ಇನ್ನೂ ಹೆಚ್ಚು ಬಳಲುತ್ತಾರೆ. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಮಹಿಳೆಯರು ಸೆಕ್ಸ್ ನಲ್ಲಿ ಭಾಗಿಯಾಗದಿರುವುದೇ ಉತ್ತಮ.

ಮುಟ್ಟಿನ ಸಮಯದಲ್ಲಿ ಪಾಲ್ಗೊಂಡರೆ ರಕ್ತಸ್ರಾವ, ನೋವು ಹೆಚ್ಚಾಗುತ್ತದೆ. ವೈದ್ಯರನ್ನು ಕೇಳಿದರೆ ಏನೂ ಆಗಲ್ಲ ಪಾಲ್ಗೊಳ್ಳಬಹುದು ಎನ್ನುತ್ತಾರೆ. ಆದರೆ ಮಹಿಳೆಯರು ಆ ಸಮಯದಲ್ಲಿ ಭಾವೋದ್ವೇಗ, ಮಾನಸಿಕ ತಳಮಳ ಹೆಚ್ಚಾಗಿರುತ್ತದೆ. ಆದ ಕಾರಣ ಅವಾಯ್ಡ್ ಮಾಡುವುದೇ ಉತ್ತಮ.

Tags