ಆರೋಗ್ಯಜೀವನ ಶೈಲಿ

ವಿಟಮಿನ್, ಮಿನರಲ್ ಮಾತ್ರೆಗಳನ್ನು ಸೇವಿಸುತ್ತಿದ್ದೀರಾ? ಹಾಗಿದ್ದರೆ ಇದು ನಿಮಗಾಗಿ..

ವಿಟಮಿನ್ ಹಾಗೂ ಮಿನರಲ್ ಸಂಬಂಧಿ ಕೆಲವು ಮಾತ್ರೆಗಳ ಸೇವನೆಯಿಂದ ಯಾವುದೇ ಲಾಭ ಇಲ್ಲವಂತೆ.

ಬಿಸಿಲು ಎನ್ನುವ ಕಾರಣಕ್ಕೆ ವಿಪರೀತ ಸನ್ಸ್ಕ್ರೀನ್ಲೋಷನ್ಮೇಲೆ ನೀವು ಅವಲಂಬಿತರಾಗಿದ್ದರೆ ಹುಷಾರಾಗಿರಿ..

ಈಗೀಗ ಆರೋಗ್ಯದ ಬಗ್ಗೆ ಬಹಳಷ್ಟು ಕಾಳಜಿ ಇದೆ. ಮುಖ್ಯವಾಗಿ ಕೆಲವರು ವಿಟಮಿನ್, ಮಿನರಲ್‌ಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಕೆಲವರು ಬಿ ಕಾಂಪ್ಲೆಕ್ಸ್, ವಿಟಮಿನ್ ಮಾತ್ರೆಗಳು, ಮಿನರಲ್ ಮಾತ್ರೆಗಳನ್ನು ಹೆಚ್ಚು ಸೇವಿಸುತ್ತಿರುತ್ತಾರೆ. ಅಂತಹವರು ಗಮನಿಸಬೇಕಾದ ಅಂಶ ಎಂದರೆ ಅದರಿಂದ ಏನೇನೂ ಪ್ರಯೋಜನ ಇರಲ್ಲ ಎಂಬುದು.

ವಿಟಮಿನ್‌ ಹಾಗೂ ಮಿನರಲ್‌ ಸಂಬಂಧಿ ಕೆಲವು ಮಾತ್ರೆಗಳ ಸೇವನೆಯಿಂದ ಯಾವುದೇ ಲಾಭ ಇಲ್ಲವಂತೆ. ಹಾಗಂತ ದೇಹಕ್ಕೆ ಹಾನಿ ಕೂಡ ಆಗುವುದಿಲ್ಲ ಎಂದಿದೆ ಸಂಶೋಧನೆ. ವಿಟಮಿನ್‌ ಡಿ, ಕ್ಯಾಲ್ಷಿಯಂ ಮತ್ತು ವಿಟಮಿನ್‌ ಸಿ ಸಾಮಾನ್ಯವಾಗಿ ತೆಗೆದುಕೊಳ್ಳುವ ಸಪ್ಲಿಮೆಂಟ್‌ಗಳು. ಆದರೆ ಇವುಗಳನ್ನು ಪೂರಕ ಆಹಾರದೊಂದಿಗೆ ಮಾತ್ರ ಸೇವಿಸಬೇಕು.

ಕ್ಯಾನ್ಸರ್ಕಾರಕ ಸನ್ಸ್ಕ್ರೀನ್ಲೋಷನ್ಗಳಿಂದ ದೂರ ಇರಿ

ಬಿಸಿಲು ಎನ್ನುವ ಕಾರಣಕ್ಕೆ ವಿಪರೀತ ಸನ್‌ಸ್ಕ್ರೀನ್‌ ಲೋಷನ್‌ ಮೇಲೆ ನೀವು ಅವಲಂಬಿತರಾಗಿದ್ದರೆ ಹುಷಾರಾಗಿರಿ. ಏಕೆಂದರೆ ಇದೇ ಕ್ಯಾನ್ಸರ್‌ಗೆ ಕಾರಣವಾಗಬಹುದು. ಅವಧಿ ಮುಗಿದ ಅಥವಾ ಯುವಿ ಕಿರಣಗಳಿಂದ ಸೂಕ್ತ ರಕ್ಷಣೆ ನೀಡದ ಸನ್‌ಸ್ಕ್ರೀನ್‌ ಲೋಷನ್‌ಗಳು ದೇಹಕ್ಕೆ ಸುರಕ್ಷೆ ನೀಡುವುದಿಲ್ಲ ಹಾಗೂ ಕ್ಯಾನ್ಸರ್‌ ಕಾರಕವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ದಿನಕ್ಕೊಂದು ಮೊಟ್ಟೆ ಸೇವಿಸುವುದು ಉತ್ತಮ

ದಿನಕ್ಕೊಂದು ಮೊಟ್ಟೆ ತಿಂದರೆ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಇರಬಹುದು ಎಂದಿದೆ ಸಂಶೋಧನೆ. ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಅದರ ಮೇಲಿನ ಅವಲಂಬನೆ ಕೂಡ ಅಪಾಯಕಾರಿ. ಆದ್ದರಿಂದ ಆರೋಗ್ಯಕರ ಜೀವನಶೈಲಿಗೆ ಪೂರಕವಾಗಿ ದಿನಕ್ಕೊಂದು ಮೊಟ್ಟೆ ತಿನ್ನಬಹುದಂತೆ. ಇದರಿಂದ ಹೃದಯ ಕಾಯಿಲೆ, ಪಾಶ್ರ್ವವಾಯು ಸಮಸ್ಯೆಯಿಂದ ಪಾರಾಗಬಹುದು ಎಂದು ಹೇಳಲಾಗಿದೆ.

 

Tags