ಜೀವನ ಶೈಲಿಫ್ಯಾಷನ್ಸೌಂದರ್ಯ

ಮುಖದ ಸೌಂದರ್ಯ ಹೆಚ್ಚಿಸುವ ಪುದೀನಾ ಪೇಸ್ ಪ್ಯಾಕ್

ಆಹಾರದ ರುಚಿಯನ್ನು ಹೆಚ್ಚಿಸುವ ಪುದೀನಾ ಎಲೆಯಿಂದ ಚರ್ಮಕ್ಕೆ ತಾಜಾತನ ದೊರೆಯುತ್ತದೆ. ಪುದೀನಾ ಫೇಸ್ ಪ್ಯಾಕ್ ಮೂಲಕ ಕಾಂತಿಯುತ ತ್ವಚೆಯನ್ನು ಪಡೆಯಬಹುದು.

Image result for mint

ಪುದೀನಾ ಹಾಗೂ ಮುಲ್ತಾನಿ ಮಿಟ್ಟಿಯನ್ನು ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿ ನೀರಿನಲ್ಲಿ ಬೆರೆಸಿ.ನಂತರ ಮೊಡವೆಗಳ ಮೇಲೆ ಹಚ್ಚಿ. ಒಣಗಿದ ನಂತರ ಮುಖ ತೊಳೆಯಬೇಕು.

ಈ ಫೇಸ್ ಪ್ಯಾಕನ್ನು ಆಗಾಗ ಹಾಕಿಕೊಳ್ಳಬಹುದು. ಆದರೆ ಹೆಚ್ಚು ಹೊತ್ತು ಬಿಡಬಾರದು. ನೆನಪಿಡಿ, ಹೀಟ್ ಬಾಡಿ ಹೊಂದಿರುವವರಿಗೆ ಇದು ಹೊಂದುವುದಿಲ್ಲ. ಹೀಟ್ ಬಾಡಿ ಇರುವವರು ಇದನ್ನು  ಬಳಸದೆ ಇರುವುದು ಉತ್ತಮ.

ಇದರ ಜೊತೆಗೆ ಕೂದಲಿನ ಆರೋಗ್ಯಕ್ಕೂ ಸಹಕಾರಿ. ಅದರಿಂದ ತಯಾರಿಸಿದ ಹೇರ್ ಪ್ಯಾಕ್ ನಿಂದ ತಲೆಹೊಟ್ಟಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಅದು ಕೂಡಾ ತುಂಬಾ ಸುಲಭ.

ಒಂದು ಚಮಚ ರುಬ್ಬಿದ ಪುದೀನಾ ಪೇಸ್ಟ್ ಅನ್ನು ಅರ್ಧ ಕಪ್ ಮೊಸರಿನಲ್ಲಿ ಮಿಶ್ರಣ ಮಾಡಬೇಕು. ನಂತರ ತಲೆ ಬುರುಡೆಗೆ ಹಚ್ಚಬೇಕು. ಹತ್ತು ನಿಮಿಷದ ನಂತರ ತೊಳೆಯಿರಿ. ಹದಿನೈದು ದಿನಕ್ಕೊಮ್ಮೆ ಈ ಅಭ್ಯಾಸ ರೂಢಿಸಿಕೊಂಡಲ್ಲಿ ಹೊಟ್ಟಿನ ಸಮಸ್ಯೆಗೆ ಗುಡ್ ಬಾಯ್ ಹೇಳಬಹುದು.

Image result for mint face pack

ತಿಳಿದಿದೆಯಾ ನೇಲ್ ಪಾಲಿಶ್ ರಿಮೂವರ್ ನ ಮತ್ತಷ್ಟು ಪ್ರಯೋಜನಗಳು

#mint #mintreceipes #mintjuice #mintfacepack #mintfoods #mintimages #mintplant #pudinafacepack #pudinaimages #pudinahealthytips

 

Tags