ಆರೋಗ್ಯಆಹಾರಜೀವನ ಶೈಲಿ

ಬೆಳಗಿನ ಉಪಾಹಾರ ಮಾಡಿದ ಕೂಡಲೆ ಸ್ನಾನ ಮಾಡುವ ಅಭ್ಯಾಸ ಇದೆಯೇ?

ಬೆಂಗಳೂರು, ಅ.09: ಕೆಲವು ಅಭ್ಯಾಸಗಳು ತನ್ನಿಂದ ತಾನೇ ಬಂದಿರುತ್ತವೆ. ಅದಕ್ಕೆ ಇಂತಹದ್ದೇ ಕಾರಣ, ಯಾರೋ ಹೇಳಿದರು ಅಂತಲೋ ಮತ್ತೊಂದು ಮಗದೊಂದು ಅಂತ ಇರಲ್ಲ. ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲವೊಂದು ಅಭ್ಯಾಸಗಳು ಮೈಗೂಡಿರುತ್ತವೆ. ಕೆಲವರಿಗೆ ಬೆಡ್ ಕಾಫಿ ಕುಡಿಯುವುದೆಂದರೆ ಇಷ್ಟ. ಬಾಯಿ ತೊಳೆಯದೆ, ಮುಖ ತೊಳೆಯದೆ, ಹಾಸಿಗೆಯಲ್ಲೇ ಮಲಗಿ ಬೆಡ್ ಕಾಫಿ ಕುಡಿಯುತ್ತಾರೆ. ಇದು ಕೆಟ್ಟ ಅಭ್ಯಾಸ ಎಂದು ಗೊತ್ತಿದ್ದೂ ಮಾಡುತ್ತಾರೆ. ಅದೇ ರೀತಿ ಕೆಲವರು ಬೆಳಗಿನ ಉಪಾಹಾರ ತಿಂದ ಬಳಿಕ ಸ್ನಾನ ಮಾಡುತ್ತಾರೆ. ಇದು ಸಹ ಅಷ್ಟೇ ಕೆಟ್ಟ ಅಭ್ಯಾಸ. ಇದರಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತವೆ ಎಂಬುದನ್ನು ನೋಡೋಣ.

ಜೀರ್ಣ ಕ್ರಿಯೆಗೆ ತೊಂದರೆಯಾಗುವ ನಮ್ಮ ಹವ್ಯಾಸ

ಊಟ ಮಾಡಿದ ಬಳಿಕ ನಮ್ಮ ದೇಹದಲ್ಲಿ ರಕ್ತ ಹೆಚ್ಚಾಗಿ ಜೀರ್ಣಕೋಶಕ್ಕೆ ಸರಬರಾಜಾಗುತ್ತಿರುತ್ತದೆ. ಯಾಕೆಂದರೆ ತಿಂದ ಆಹಾರ ಜೀರ್ಣವಾಗಲು ಶಕ್ತಿ ಬೇಕಾಗುತ್ತದೆ. ಆದ್ದರಿಂದ ಆ ಶಕ್ತಿಯನ್ನು ನೀಡಲು ಜೀರ್ಣಕೋಶಕ್ಕೆ ಹೆಚ್ಚಿನ ರಕ್ತ ಸಂಚಾರವಾಗುತ್ತದೆ. ತಿಂದ ಕೂಡಲೆ ಸ್ನಾನ ಮಾಡಿದರೆ ಆಗ ನಮ್ಮ ದೇಹದ ಉಷ್ಣತೆಯಲ್ಲಿ ಬದಲಾವಣೆಯಾಗುತ್ತದೆ. ಇದನ್ನು ಮಿದುಳು ಕೂಡಲೆ ಗ್ರಹಿಸಿ ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ತೊಡಗುತ್ತದೆ. ಆಗ ರಕ್ತ ನಮ್ಮ ಜೀರ್ಣಕೋಶಕ್ಕೆ ಅಲ್ಲದೆ ಚರ್ಮದ ಕಡೆಗೆ ಹರಿಯುತ್ತದೆ. ಇದರಿಂದ ಜೀರ್ಣ ಕ್ರಿಯೆ ಗೆ ತೊಂದರೆಯಾಗುತ್ತದೆ.ರಕ್ತ ಸಂಚಾರವಾಗಲು ತೊಂದರೆಯಾಗುತ್ತದೆ

ಒಂದು ವೇಳೆ ನಾವು ತಿಂದ ಬಳಿಕ ತಣ್ಣೀರಿನ ಸ್ನಾನ ಮಾಡಿದರೆ ಆಗ ರಕ್ತನಾಳಗಳು ಹಿಗ್ಗುತ್ತವೆ. ಇದರಿಂದ ಹೆಚ್ಚು ರಕ್ತ ಸಂಚಲನವಾಗುತ್ತದೆ. ಆ ಮೂಲಕ ದೇಹದ ಉಷ್ಣತೆ ಸಾಮಾನ್ಯ ಸ್ಥಿತಿಗೆ ತಲುಪುತ್ತದೆ. ಅದೇ ರೀತಿ ಬಿಸಿನೀರಿನ ಸ್ನಾನ ಮಾಡಿದರೆ ಆಗ ಚರ್ಮದಲ್ಲಿನ ರಕ್ತನಾಳಗಳು ದೊಡ್ಡದಾಗಿ ಅವು ಹೆಚ್ಚು ಉಷ್ಣತೆಯನ್ನು ಚರ್ಮದ ಮೂಲಕ ಹೊರಗೆ ಕಳುಹಿಸುತ್ತವೆ. ಇದರಿಂದ ದೇಹ ಸಾಮಾನ್ಯ ಉಷ್ಣತೆಗೆ ತಲುಪುತ್ತದೆ. ಈ ಪ್ರಕ್ರಿಯೆ ಮುಗಿಯುವರೆಗೆ ಜೀರ್ಣಕೋಶಕ್ಕೆ ರಕ್ತ ಸೂಕ್ತವಾಗಿ ಲಭಿಸಲ್ಲ. ಇದರಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ, ಗ್ಯಾಸ್, ಅಸಿಡಿಟಿಯಂತಹ ಸಮಸ್ಯೆಗಳು ಬರುತ್ತವೆ. ಆದರೆ ಆ ರೀತಿ ಸಮಸ್ಯೆಗಳು ಬರದಿರಲು ತಿಂದ ಕೂಡಲೇ ಸ್ನಾನ ಮಾಡಬಾರದೆಂದು ಹೇಳುತ್ತಾರೆ.

ಹಾಗಿದ್ದರೆ ತಿಂದ ಎಷ್ಟು ಸಮಯದ ಬಳಿಕ ಸ್ನಾನ ಮಾಡಬೇಕು? 45ರಿಂದ 60 ನಿಮಿಷಗಳ ಕಾಲ ಬಿಟ್ಟು ಸ್ನಾನ ಮಾಡಬೇಕು. ಅಷ್ಟೊತ್ತಿಗೆ ತಿಂದ ಆಹಾರ ಬಹುತೇಕ ಜೀರ್ಣವಾಗಿರುತ್ತದೆ. ಆದಕಾರಣ ತಿಂದ ಗಂಟೆ ಬಳಿಕ ನಿರಾತಂಕವಾಗಿ ಸ್ನಾನ ಮಾಡಬಹುದು. ಯಾವುದೇ ಸಮಸ್ಯೆ ಬರುವುದಿಲ್ಲ.

Tags