ಆರೋಗ್ಯಆಹಾರಜೀವನ ಶೈಲಿ

ಟ್ಯಾನಿಂಗ್ ಸಮಸ್ಯೆಗೆ ಮುಕ್ತಿ ಪಡೆಯಲು ಬಳಸಿ ಮೂಸಂಬಿ

ಹೆಚ್ಚಿನ ಪ್ರಮಾಣದ ಪೋಷಕಾಂಶಗಳನ್ನು ಹೊಂದಿರುವ ಮೂಸಂಬಿಯಲ್ಲಿ ಸಿಟ್ರಿಕ್ ಅಂಶವು ಹೇರಳವಾಗಿದೆ. ಸದೃಢ ಆರೋಗ್ಯಕ್ಕೆ ಸಹಕಾರಿಯಾಗಿರುವ ಮೂಸಂಬಿಯನ್ನು ಬಳಸಿ ಚರ್ಮದ ಸಮಸ್ಯೆಯನ್ನು ಸುಲಭವಾಗಿ ದೂರ ಮಾಡಬಹುದು.

Image result for tanning best solution musambi

ಪ್ರತಿ ದಿನ ಎರಡು ಲೋಟದಷ್ಟು ಮೂಸಂಬಿ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಸಿ ದೊರಕುತ್ತದೆ. ಮತ್ತು ದೇಹಕ್ಕೆ ಅಗತ್ಯವಿರುವಂತಹ ಪೋಷಣೆ ಲಭಿಸುತ್ತದೆ. ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಮೂಸಂಬಿ ರಸವನ್ನು ನೀರಿನಲ್ಲಿ ಕುದಿಸಿ ಸೇವಿಸಿದರೆ ಮೂತ್ರ ಮಾರ್ಗದ ಸೋಂಕು ಗುಣವಾಗುತ್ತದೆ. ಮೂಸಂಬಿ ಸಿಪ್ಪೆಯನ್ನು ಜಜ್ಜಿ ಅರಿಶಿನ ಬೆರೆಸಿ ಮುಖಕ್ಕೆ ಹಚ್ಚಿದರೆ ಮೊಡವೆ ಕಡಿಮೆಯಾಗುತ್ತದೆ.

ಮೂಸಂಬಿ ರಸದಲ್ಲಿರುವ ಸಿಟ್ರಿಕ್‌ ಆಮ್ಲ ಮತ್ತು ಇತರ ಆಮ್ಲಗಳು ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

Image result for tanning best solution musambi

ಇಂತಿಪ್ಪ ಬಹುಪಯೋಗಿ ಮೂಸಂಬಿ ಟ್ಯಾನಿಂಗ್ ಗೆ ಉತ್ತಮ ಮದ್ದು. ಮೂಸಂಬಿ ಫೇಸ್ ಪ್ಯಾಕ್ ಬಳಸಿ ಟ್ಯಾನಿಂಗ್ ಸಮಸ್ಯೆಯನ್ನು ದೂರ ಮಾಡಬಹುದು. ಮೂಸಂಬಿ ಫೇಸ್ ಪ್ಯಾಕ್ ತಯಾರಿಸಲು ಕಷ್ಟವೇನಿಲ್ಲ‌. ಮೊದಲಿಗೆ ಮೂಸಂಬಿಯನ್ನು ಪೇಸ್ಟ್ ಮಾಡಿ ಅದಕ್ಕೆ ಅರಿಶಿನ ಮತ್ತು ಒಂದು ಚಮಚ ಜೇನು ಬೆರೆಸಿ. ನಂತರ ತಯಾರಿಸಿದ ಪೇಸ್ಟನ್ನು ಮುಖದ ಮೇಲೆ ಹಚ್ಚಿ. ಹತ್ತು ನಿಮಿಷ ಹಾಗೆ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ಟ್ಯಾನಿಂಗ್ ನಿಂದ ಮುಕ್ತಿ ಪಡೆಯಬಹುದು.

Image result for taning

ಮನೆಯಲ್ಲೇ ಮಾಡಿ ಅಲೋವೆರಾ ಸೋಪ್

#balkaninews #mosambi #tanning #mosambijuice

Tags