ಆರೋಗ್ಯಆಹಾರಜೀವನ ಶೈಲಿಸೌಂದರ್ಯ

ಮಡ್ ಮಸಾಜ್ ಅರ್ಥಾತ್ ಮಣ್ಣಿನ ಥೆರಪಿ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರು, ಮೇ.23:

ಬಿರುಬಿಸಿಲಿನ ಬೇಗೆಗೆ ದೇಹವನ್ನು ತಂಪಾಗಿರಿಸುವುದು ತುಂಬಾ ಕಷ್ಟ. ದಾಹ ನೀಗಲು ಜ್ಯೂಸ್, ಕಲ್ಲಂಗಡಿ ಮಜ್ಜಿಗೆ ನೀರಿನ ಮೊರೆ ಹೋಗದೆ ಬೇರೆ ಉಪಾಯವೇ ಇಲ್ಲ‌. ಇದರ ಜೊತೆಗೆ ದೇಹದ ಆರೋಗ್ಯವನ್ನು, ತ್ವಚೆಯ ಕಾಂತಿಯನ್ನು ಕಾಪಾಡಿಕೊಳ್ಳುವುದು ಕೂಡಾ ಅಷ್ಟೇ ಮುಖ್ಯ.

ಇದೀಗ ದೇಹ ಸೌಂದರ್ಯವನ್ನು ಇಮ್ಮಡಿಗೊಳಿಸುವುದಕ್ಕೆಂದೇ ಒಂದು ಹೊಸ ಥೆರಪಿ ಬಂದಿದೆ. ಅದೇನಂತಿರಾ? ಮಡ್ ಮಸಾಜ್ ಅರ್ಥಾತ್ ಮಣ್ಣಿನ ಥೆರಪಿ! ಮಣ್ಣಿನಿಂದಲೂ ಮಸಾಜ್ ಎಂದು ಹುಬ್ಬೇರಿಸಬೇಡಿ. ಹೌದು, ಇತ್ತೀಚೆಗೆ ಜನಪ್ರಿಯವಾಗಿರುವ ಈ ಮಣ್ಣಿನ ಮಸಾಜ್ ಮಾಡಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೂ ಉತ್ತಮ ಆರೋಗ್ಯಕ್ಕೂ ಇದು ಸಹಕಾರಿಯಾಗಿದೆ.

ಮುಖ್ಯವಾದ ಸಂಗತಿಯೆಂದರೆ ಮಣ್ಣಿನ ಥೆರಪಿ ಮಾಡುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಸಾಗುತ್ತದೆ. ಅಷ್ಟೇ ಅಲ್ಲ ಈ ಥೆರಪಿಯು ದೇಹದಲ್ಲಿರುವ ಕಶ್ಮಲವನ್ನು ಹೊರಹಾಕುತ್ತದೆ. ಹಾಗೂ ತಮ್ಮ ಮುಖದಲ್ಲಿ ಹೆಚ್ಚಿನ ಕಾಂತಿಯನ್ನು ಕಾಣಬಹುದು.

ಬಿರು ಬಿಸಿಲಿನ ಬೇಗೆಗೆ ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು, ದಾಹದಿಂದ ಬಳಲಿ ಬೆಂಡಾಗಿಯೇ ಬಿಡುತ್ತೇವೆ. ಜೊತೆಗೆ ತಲೆನೋವು ಬಂದೇ ಬರುತ್ತದೆ.  ಬಿಸಿಲಿನ ಬೇಗೆಯಿಂದ ಬಳಲುವವರು ತಲೆನೋವಿಗೆ ಈ ಥೆರಪಿ ಮಾಡಿಸುವುದರಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆಯಬಹುದು.

Image result for mud therapy

 

ಬ್ಲ್ಯಾಕ್ ಹೆಡ್ಸ್ ಹೋಗಲಾಡಿಸಲು ಸರಳ ಫೇಸ್ ಪ್ಯಾಕ್!!

#balkaninews #mudtherapy #healthytips #beautytips #mudtherapyforgirls

 

Tags