ಜೀವನ ಶೈಲಿಫ್ಯಾಷನ್

ಉಗುರಿನಂದಕ್ಕೆ ಬೇಕು ನೇಲ್ ಆರ್ಟ್…

ಉಗುರುಗಳಿಗೆ ನೇಲ್ ಪಾಲಿಶ್ ಹಚ್ಚುವುದೆಂದರೆ ಹೆಣ‍್ಣಿಗೆ ಎಲ್ಲಿಲ್ಲದ ಖುಷಿ.

ಉಗುರುಗಳನ್ನು ಕೂಡ ಶೃಂಗರಿಸುವುದು ಬಹಳ ಹಿಂದಿನ ಕಾಲದಿಂದಲೂ ನಡೆದು ಬಂದ ಒಂದು ಕಲೆಯಾಗಿದೆ

ಹೆಣ‍್ಣು ಆದಷ್ಟು ಸುಂದರವಾಗಿ ಕಾಣಲು ಇಷ್ಟಪಡುತ್ತಾಳೆ. ತಾನು ಧರಿಸುವ ಉಡುಪಿನಿಂದ ಹಿಡಿದು ತಾನು ಹಚ್ಚುವ ಉಗುರಿನ ಬಣ‍್ಣದವರೆಗೂ ಹೆಚ್ಚಿನ ಕಾಳಜಿ ವಹಿಸುತ್ತಾಳೆ. ಅದರಲ್ಲೂ ಹೆಣ‍್ಣಿನ ಅಂದ ಹೆಚ್ಚಿಸುವ ಅಂಶಗಳಲ್ಲಿ ಉಗುರುಗಳು ಸಹ ಪ್ರಧಾನ ಪಾತ್ರವನ್ನು ನಿರ್ವಹಿಸುತ್ತದೆ. ಇನ್ನು ಉಗುರಿನ ಅಂದ ಕೆಟ್ಟರೆ ಅವಳಿಗೆ ಎಲ್ಲಿಲ್ಲದ ತಲೆಬಿಸಿ, ಹಾಗಾಗಿ ಹೆಣ‍್ಣು ಉಗುರಿಗೆ ಮಹತ್ವದ ಗಮನವನ್ನು ನೀಡುತ್ತಾಳೆ. ಉಗುರುಗಳನ್ನು ಕೂಡ ಶೃಂಗರಿಸುವುದು ಬಹಳ ಹಿಂದಿನ ಕಾಲದಿಂದಲೂ ನಡೆದು ಬಂದ ಒಂದು ಕಲೆಯಾಗಿದೆ. ಉಗುರುಗಳಿಗೆ ನೇಲ್ ಪಾಲಿಶ್ ಹಚ್ಚುವುದೆಂದರೆ ಹೆಣ‍್ಣಿಗೆ ಎಲ್ಲಿಲ್ಲದ ಖುಷಿ. ಉಗುರುಗಳಿಗೆ ಬಣ‍್ಣಗಳನ್ನು ಹಚ್ಚಿದರೆ ಉಗುರುಗಳು ಇನ್ನಷ್ಟು ಸುಂದರವಾಗಿ ಕಾಣುತ್ತದೆ.ಈಗ ಅದರಲ್ಲೂ ಕೊಂಚ ವ್ಯತ್ಯಾಸ. ಅದುವೇ ನೇಲ್ ಆರ್ಟ್. ನೇಲ್ ಆರ್ಟ್ ಎಲ್ಲರ ಮನ ಕದ್ದು ಬಿಟ್ಟಿದೆ. ಅದರ ಹವಾ ಎಷ್ಟಿದೆಯೆಂದರೆ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರೂ ನೇಲ್ ಆರ್ಟ್ ಮಾಡಿಸಿಕೊಳ‍್ಳಲು ಇಷ್ಟ ಪಡುತ್ತಾರೆ.

ಕಾಲೇಜ್ ಕನ್ಯೆಯರ ಅಚ್ಚುಮೆಚ್ಚಿನ ನೇಲ್ ಆರ್ಟ್

ನೇಲ್ ಆರ್ಟ್ ಮಾಡಿಸಿಕೊಳ‍್ಳಲು ಪಾರ್ಲರ್ ಗಳಿಗೆ ಹೋಗಿ ದುಡ್ಡು ಸುರಿಯಬೇಕೆಂದೇನಿಲ್ಲ, ಮನೆಯಲ್ಲೇ ಸುಲಭವಾಗಿ ಮಾಡಬಹುದು. ಹೆಚ್ಚಿನವರಿಗೆ ನೇಲ್ ಪಾಲಿಶ್ ಹಾಕಿದ್ದನ್ನೇ ಹಾಕಿ ಬೋರ್ ಹೊಡೆದಿರುತ್ತದೆ. ಹಾಗಾಗಿ ಅದರಲ್ಲಿ ವಿಭಿನ್ನ ವಿಭಿನ್ನ ಚಿತ್ತಾರ ಬಿಡಿಸಬಹುದು. ಇದು ಈಗಿನ ಟ್ರೆಂಡ್ ಹಾಗೂ ಫ್ಯಾಶನ್. ಕಾಲೇಜ್ ಕನ್ಯೆಯರಿಗಂತೂ ಇದು ಬಹಳ ಅಚ್ಚುಮೆಚ್ಚು. ನೇಲ್ ಆರ್ಟ್ ಮಾಡಲು ನಾವು ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ‍್ಳಬೇಕು. ಮೊದಲಾಗಿ ಉಗುರುಗಳನ್ನು ಚೆನ್ನಾಗಿಟ್ಟುಕೊಳ‍್ಳಬೇಕು. ಉಗುರಿಗೆ ಅಂದವಾದ ಆಕಾರವನ್ನು ಕೊಟ್ಟು ಉಗುರು ಉದ್ದ ಬೆಳೆಯಲು ಬಿಡಿ.,ಕೆಸರು ಅಥವಾ ಮಣ‍್ಣು ಸೇರದಂತೆ ನೋಡಿಕೊಳ‍್ಳಬೇಕು. ಉಗುರು ಉದ್ದ ಬೆಳೆಯಲು ಆರೋಗ್ಯಕರ ಆಹಾರ ಪಾಲಿಸಿ.

ಉಗುರಿಗೆ ಯಾವತ್ತೂ ಉತ್ತಮವಾದ ಬೇಸ್ ಕೋಟ್ ಹಚ್ಚಬೇಕು. ಇದು ನಮ್ಮ ಉಗುರಿನ ಆಯಸ್ಸನ್ನು ಹೆಚ್ಚಿಸುತ್ತದೆ. ನಿಮ್ಮ ನೆಚ್ಚಿನ ನೇಲ್ ಕಲರ್ ಆಯ್ಕೆ ಮಾಡಿಕೊಳ‍್ಳಿ. ತುಂಬಾ ಗಾಢವಾದ ಬಣ‍್ಣ ಆಯ್ಕೆ ಮಾಡುವ ಬದಲು ನಮ್ಮ ಮೈ ಬಣ‍್ಣ‍ಕ್ಕೆ ಹೊಂದುವಂತ ಬಣ‍್ಣವನ್ನು ಆಯ್ಕೆ ಮಾಡಿದರೆ ಸುಂದರ ಲುಕ್ಕ್ ನೀಡುತ್ತದೆ. ಉಗುರಿಗೆ ಬಣ‍್ಣ ಹಚ್ಚುವಾಗ ಎರಡು ಕೋಟ್ ಲೇಪಿಸಿ. ಆದರೆ ಬಣ‍್ಣ ಉಗುರಿನಿಂದ ಹೊರ ಬರದಂತೆ ಜಾಗರೂಕತೆವಹಿಸಬೇಕು. ಅನಂತರ ನಿಮಗಿಷ್ಟವಾದ ನೇಲ್ ಕಲರ್ ಹಚ್ಚಿ ಒಣಗಲು ಬಿಡಿ. ನೇಲ್ ಕಲರ್ ಒಣಗಿದ ನಂತರ ನಿಮಗಿಷ್ಟವಾದ ಹೂವಿನ ಚಿತ್ತಾರ, ಚುಕ್ಕೆಗಳು ಬಿಡಿಸಬಹುದು. ಕೊನೆಯದಾಗಿ  ಮತ್ತೊಂದು ಕೋಟ್ ಆವಶ್ಯಕವಾದರೆ ಲೇಪಿಸಲು ಮರೆಯದಿರಿ.

Image result for nail art

ಕೆಂಪು ಮತ್ತು ಬಿಳಿ ಬಣ‍್ಣ

ಕೆಂಪು ಮತ್ತು ಬಿಳಿ ಬಣ‍್ಣ ಮಿಶ್ರಿತ ಉಗುರಿಗೆ ಸುಂದರವಾಗಿ ಕಾಣುತ್ತದೆ. ಕೆಂಪು ಬಣ‍್ಣ ಉಗುರಿಗೆ ಹಚ್ಚಿ ಅದರ ಮೇಲೆ 3 ರಿಂದ 4 ಚಿಕ್ಕ ಚುಕ್ಕಿ ಹಾಕಿದರೆ ಚೆನ್ನಾಗಿ ಕಾಣುತ್ತದೆ. ಇದಲ್ಲದೆ ಕಪ್ಪು ಹಾಗೂ ಬಿಳಿ ಬಣ‍್ಣ, ಹಳದಿ ಹಾಗೂ ಕೆಂಪು ಇತ್ಯಾದಿ ಬಣ‍್ಣದಿಂದ ಉಗುರುಗಳನ್ನು ವಿನ್ಯಾಸಗೊಳಿಸಬಹುದು. ಈಗೆಲ್ಲಾ ನೇಲ್ ಆರ್ಟ್ ಸ್ಟಿಕ್ಕರ್ ಮಾರುಕಟ್ಟೆಯಲ್ಲಿ ಸಿಗುತ್ತದೆ. ಅದನ್ನು ಅಂಟಿಸಿದರೆ ಉಗುರು ಆಕರ್ಷಕವಾಗಿ ಕಾಣುತ್ತದೆ. ಮದುವೆ ಅಥವಾ ಯಾವುದೇ ಪಾರ್ಟಿ  ಸಮಾರಂಭಗಳಿಗೆ ನೇಲ್ ಆರ್ಟ್ ಹಾಕಿದರೆ ನಿಮ್ಮ ಲುಕ್‍ ಇನ್ನಷ್ಟು ಇಮ್ಮಡಿಗೊಳ‍್ಳುವುದರಲ್ಲಿ  ಸಂಶಯವಿಲ್ಲ.

 

 

 

 

 

 

 

Tags