ಜೀವನ ಶೈಲಿಸೌಂದರ್ಯ

ಬೇವು ಕಹಿಯಾದರೂ ಮೊಡವೆಗಳಿಗೆ ರಾಮ ಬಾಣ

ಹೆಚ್ಚಿನ ಹುಡುಗಿಯರು ಎದುರಿಸುತ್ತಿರುವ ಚರ್ಮದ ಸಮಸ್ಯೆಗಳಲ್ಲಿ ಮೊಡವೆಗಳು ಮತ್ತು ಕಲೆಗಳು . ಮೊಡವೆಗಳನ್ನು ತೊಡೆದುಹಾಕಲು ದುಬಾರಿ ಚಿಕಿತ್ಸೆಗಳಿಗೆ ಹೋಗುವುದು ಅಥವಾ ಮೇಕ್ಅಪ್ ಹಚ್ಚುವುದರಬಗ್ಗೆ ನೀವು ಯೋಚಿಸುವ ಮೊದಲು ಬೇವು ಎಂಬ  ನೈಸರ್ಗಿಕ ಗಿಡಮೂಲಿಕೆಗಳನ್ನು ಬಳಸಿ.

Image result for neem

ಬೇವು ಮೊಡವೆಗಳಿಗೆ ಬಹಳ ಒಳ್ಳೆಯದು ಎಂದು ಸಾಬೀತಾಗಿದೆ. ಕೆಲವು ಬೇವಿನ ಎಲೆಗಳನ್ನು ಒಣಗಿಸಿ ಪುಡಿ ಪುಡಿಮಾಡಿ. ಈಗ, ಈ ಪುಡಿಯನ್ನು ಸ್ವಲ್ಪ ರೋಸ್ ವಾಟರ್ ನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ, ಮತ್ತು ಕೆಲವು ನಿಮಿಷಗಳ ನಂತರ ಅದನ್ನು ತೊಳೆಯಿರಿ.

ಅದಲ್ಲದೆ ನೀರನ್ನು ಬಳಸಿ ತಾಜಾ ಬೇವಿನ ಎಲೆಗಳ ಪೇಸ್ಟ್ ಕೂಡ ಮಾಡಬಹುದು. ಮತ್ತು ಅದನ್ನು ಪಿಂಪಲ್ ಭಾಗಗಳಿಗೆ ಹಚ್ಚಿರಿ. ತಣ್ಣೀರಿನಿಂದ ತೊಳೆಯುವ ಮೊದಲು ಅದನ್ನು ಕನಿಷ್ಠ 20 ನಿಮಿಷಗಳ ಕಾಲ ಇರಿಸಿ. ನೀವು ಮಾರುಕಟ್ಟೆಯಿಂದ ಸ್ವಲ್ಪ ಬೇವಿನ ಎಣ್ಣೆಯನ್ನು ಸಹ ಖರೀದಿಸಬಹುದು, ಮತ್ತು ನಿಮ್ಮ ಚರ್ಮಕ್ಕೆ ನಿಯಮಿತವಾಗಿ ಬಳಸಿದಲ್ಲಿ ಹೊಳೆಯುವ ಚರ್ಮವನ್ನು ಪಡೆಯಬಹುದು.

 

ಉದ್ದ ಕೂದಲಿಗೆ ಈರುಳ್ಳಿ ಉಪಯೋಗಿಸಿ ನೋಡಿ

Tags